ಕರ್ನಾಟಕ ಧ್ವಜ ಸುಟ್ಟು ಪುಂಡರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯ…!!!

Listen to this article

ಕರ್ನಾಟಕ ಧ್ವಜ ಸುಟ್ಟು ಪುಂಡರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯ.

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪಟ್ಟಣದಲ್ಲಿ ರಾಯಣ್ಣ ಪ್ರತಿಮೆಗೆ ಅವಮಾನ
ಮಾಡಿದವರ ವಿರುದ್ಧ ಹಾಗೂ ಕರ್ನಾಟಕದ ಧ್ವಜವನ್ನು ಸುಟ್ಟುಹಾಕಿ ಅಪಮಾನ ಗೊಳಿಸಿದ ಶಿವಸೇನೆ ಮತ್ತು ಎಂಇಎಸ್ ಪುಂಡರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉಪ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಕನ್ನಡ ಧ್ವಜಕ್ಕೆ ಹಾಗೂ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ
ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳು ಕುರಿತು.
ಕಾನಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಕನ್ನಡ ಪರ ಹೋರಾಟಗಾರರು ಹಾಗೂ ಸಮಾಜ ಸೇವಕರು ತಮ್ಮಲ್ಲಿ ಕೇಳುಕೊಳ್ಳುವುದೇನೆಂದರೆ ಕನ್ನಡ ಧ್ವಜಕ್ಕೆ ತನ್ನದೇ ಆದ ಗೌರವ ಇದೆ, ಇಂತಹ ಧ್ವಜಕ್ಕೆ ಕೊಲ್ಲಾಪುರದಲ್ಲಿ ಸುಟ್ಟು ಅವಮಾನ ಮಾಡಿದ್ದಾರೆ. ಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪ್ರಥಮ ಸ್ವತಂತ್ರ ಹೋರಾಣಟಗಾರ ಕ್ರಾಂತಿಕಾರಿ ವೀರ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆಯನ್ನು ಬೆಳಗಾವಿಯಲ್ಲಿ ದ್ವಂಸಮಾಡಿ ಅವಮಾನ ಮಾಡಿದ್ದಾರೆ. ಇಂತಹ ಕಿಡಿಗೇಡಿಗಳ
ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾನ ಹೊಸಹಳ್ಳಿಯ ಸುತ್ತ ಮುತ್ತಲಿನ ಕನ್ನಡ ಪರ ಹೋರಾಟಗಾರರು ಹಾಗೂ ಸಮಾಜ ಸೇವಕರಿಂದ ಮನವಿ ಸಲ್ಲಿಸಲಾಯಿತು. ನಾಡಕಛೇರಿ ನಿರ್ವಾಹಕ ಅಧಿಕಾರಿ ಅನಿತಾ ಪೂಜಾರ್, ರವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ವೀರೇಶ್ ಕಿಟ್ಟಪ್ಪನವರ್, ಕುಲುಮೆಹಟ್ಟಿ ವೆಂಕಟೇಶ್, ಸಿ.ಬಿ. ನಾಗೇಶ್, ಪಿ.ಕೆ. ಗಂಗಾಧರ್, ನಾಗೇಂದ್ರ. ಶರತ್ ಕುಮಾರ್, ಕುಲುಮೆಹಟ್ಟಿ ವೀರೇಶಯ್ಯ, ಗೀತಾ ಎಲ್,
ಕಾರ್ತಿಕ್. ಜೆ. ಎಂ, ನಡುವಲುಮನೆ ತಿಪ್ಪೇಸ್ವಾಮಿ, ಫೋಟೋ ನಾಗರಾಜ್, ಸಿಬ್ಬಂದಿ ಪರುಶುರಾಮ್, ಮಂಜುನಾಥ್, ಲೆಕ್ಕಾಧಿಕಾರಿ ರಾಘವೇಂದ್ರ, ಉಪಸ್ಥಿತರಿದ್ದರು..

ವರದಿ.ವಿರೇಶ್, ಕೆ. ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend