ಶ್ರೀಲಂಕಾ ದೇಶದಲ್ಲಿ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರಿಗೆ ಗ್ಲೋಬಲ್ ಐಕಾನಿಕ್ ಅವಾರ್ಡ್ ಪ್ರದಾನ…!!!

Listen to this article

ಶ್ರೀಲಂಕಾ ದೇಶದಲ್ಲಿ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರಿಗೆ
ಗ್ಲೋಬಲ್ ಐಕಾನಿಕ್ ಅವಾರ್ಡ್ ಪ್ರದಾನ

ಗದಗ. ಶ್ರೀಲಂಕಾ ದೇಶದ ಕೊಲಂಬೊ ನಗರದ ಮೂವಿನೆಕ್ ಕಾನ್ಪರೆನ್ಸ ಹಾಲ್ ನಲ್ಲಿ ಇಂಟರ್ ನ್ಯಾಶನಲ್ ಕಲ್ಚರಲ್ ಪೆಸ್ಟ್ ಕೌನ್ಸಿಲ್ ಮತ್ತು ಗ್ಲೋಬಲ್ ಪೀಸ್ ಪೌಂಡಿಶನ್ ಸಮಿತಿ ವತಿಯಿಂದ ನಡೆದ 27ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಜನಪದ ಕೂಗು ಶಿಕ್ಷಣ ನೀಡುವದರೋಂದಿಗೆ ನಾಡು ನುಡಿಯ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತಾ ತಮ್ಮ ಕೃಷಿಯ ಬದುಕಿನೊಂದಿಗೆ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಜನಪದ ಕಲಾವಿದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಗ್ಲೋಬಲ್ ಐಕಾನಿಕ್ ಅವಾರ್ಡ್ ಪ್ರದಾನ ಮಾಡಲಾಯಿತು.

ಗಮನಸೆಳೆದ ಜನಪದ ಹಾಡುಗಳು..

ಶ್ರೀಲಂಕಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರು ಹಾಡಿದ ಲಾವಣಿ,ರಂಗಗೀತೆ, ಸುಗ್ಗಿ ಪದಗಳು,ಹಂತಿಪದಗಳು ಸೇರಿದಂತೆ ವಿವಿಧ ಪ್ರಕಾರದ ಜನಪದ ಗೀತೆಗಳು ಕೇಳಿಬಂದವಲ್ಲದೇ ಕನ್ನಡದ ಸ್ವಾಭಿಮಾನದ ಗೀತೆಗಳು ಎಲ್ಲರ ಗಮನಸೆಳೆದು ಕುಣಿಯುವಂತೆ ಮಾಡಿದವು .

ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಮಲಯ ಶಾಂತಮುನಿ ಶ್ರೀಗಳು ಶಿವಗಂಗೆ,ಕೂಕನೂರು ಅನ್ನದಾನೇಶ್ವರ ಮಠದ ಪೂಜ್ಯ ಶ್ರೀ ಮಹಾದೇವ ದೇವರು,FCC ಚೆರಮನ್ನರಾದ ಕೆ.ಪಿ ಮಂಜುನಾಥ ,ಖ್ಯಾತ ಉದ್ಯಮಿಗಳಾದ ಆಂಜನೇಯ, ಮುನಿರ್ ಬಾಬ್, ಸಾಹಿತಿ ಷನ್ಮುಖಯ್ಯ ತೋಟದ, ಖ್ಯಾತ ಜನಪದ ಕಲಾವಿದ ಗೋನಾಸ್ವಾಮಿ,ಚಲನಚಿತ್ರ ನಿರ್ದೇಶಕ ಯಾಕುಬ್ ಮಲ್ವಾಡಿ,ವಿಶ್ವನಾಥ, ಎನ್ ಜಿ ಒ ಒಕ್ಕೂಟದ ಜಯಲಕ್ಷ್ಮಿ ಬಾಯಿ,ಸಾಹಿಗಳಾದ ಬಿ.ಎನ್ ಹೊರಪೇಟಿ,ಜನಪದ ಕಲಾವಿದ ಮೆಹಬೂಬ್ ಕಿಲ್ಲೆದಾರ,ಎನ್ ಗುರ್ಲೆಕೊಪ್ಪ ಸೇರಿದಂತೆ ಶ್ರೀಲಂಕಾ ದೇಶದ ಕವಿಗಳು,ಕಲಾವಿದರು ಪಾಲ್ಗೋಂಡಿದ್ಧರು.

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend