MES ಪುಂಡರಿಗೊಂದು, ಜೈ ಕರುನಾಡು ರಕ್ಷಣಾ ಸೇನೆಯ, ದೂರು ನಿವಾರಣಾ ಘಟಕದ ರಾಜ್ಯಾಧ್ಯಕ್ಷರಿಂದ, ಮನವರಿಕೆಯ ಮಾತು…!!!

Listen to this article

ನಮ್ಮ ದೇಶ ಭಾಷವರು ಪ್ರಾಂತ್ಯವಾಗಿದೆ ನಿಜ ಆದರೆ, ನಮ್ಮ ದೇಶದಲ್ಲಿರುವ ಎಲ್ಲಾ ರಾಜ್ಯಗಳು ಬೇರೆಯಾಗಿವೆ ಅಂದರೆ ನಮ್ಮ ಒಂದು ದೇಶಕ್ಕೆ ಕುತ್ತು ಬಂದರೆ ಬೇರೆಯಗುತ್ತೇವೆ? ಅಂದರೆ ಹೊರ ದೇಶದವರು ನಮ್ಮ ಒಂದು ದೇಶದ ಮೇಲೆ ದಂದೆತ್ತಿ ಬಂದರೆ ನಾವು ನಮ್ಮ ಒಂದು ದೇಶವನ್ನು ಬಿಟ್ಟು ಕೊಡುತ್ತೇವೆಯೋ!ಇಂತಹ ಒಂದು ಸಮಾನ ಮನಸ್ಸುಳ್ಳ ಎಲ್ಲಾ ಭಾರತಾಂಬೆಯ ಮಕ್ಕಳಾದ ನಾವುಗಳು ಈ ರೀತಿಯಲ್ಲಿ ಹಗೆ, ದ್ವೇಷ ಸಾದಿಸುವುದು ಎಷ್ಟು ಸರಿ ಹೇಳಿ!ಎಲ್ಲಾ ಸಮಯದಲ್ಲೂ ಏನೇ ಬರಲಿ ಒಗ್ಗಟ್ಟಿರಲಿ ಎನ್ನುವ ಒಂದು ವಾಕ್ಯವನ್ನು ಕೂಗುವ ನಾವುಗಳು MES ಹಾಗೂ ಇನ್ನಿತರ ರೀತಿಯಲ್ಲಿ ಕಿತ್ತಾಡುವುದು ಸರಿನಾ ನೀವೇ ವಿಚಾರ ಮಾಡಿ ಇಂದು ನಾವುಗಳು ಈ ರೀತಿಯಲ್ಲಿ ಒಬ್ಬರಿಗೊಬ್ಬರು ನಾನು, ನೀನು ಎನ್ನುವ ಒಂದು ನಿಟ್ಟಿನಲ್ಲಿ ಒಡೆದಾಡಿ ಸುಮ್ಮನೆ ಸಮಸ್ಯೆಯನ್ನು ಉಂಟುಮಾಡಿಕೊಂಡು ಇರುವುದಕ್ಕಿಂತ ನಾವೆಲ್ಲ ಭಾರತೀಯರು ನಮ್ಮ ದೇಶ ಭಾರತ, ಎನ್ನುವ ಒಂದು 🙏ಮನೋಭಾವವನ್ನು ಮೆರೆಯುವುದು ನಮ್ಮ ಒಳಿತು ಅಲ್ಲವೇ, ಅದನ್ನು ಬಿಟ್ಟು ಕರ್ನಾಟಕ, ಬೇರೆ ಮಹಾರಾಷ್ಟ್ರ ಬೇರೆ ಎನ್ನುವ ಯೋಚನೆ ಯಾಕೆ ಸುಖಾ ಸುಮ್ಮನೆ ಸಮಸ್ಯೆಗಳನ್ನು ಮೈ ಮೇಲೆ ಎರಚುವುದು ಸರಿನಾ? ಪ್ರತಿಯೊಂದು ರಾಜ್ಯದ ಭಾರತೀಯರು ಮೊದಲು ವಿಚಾರ ಮಾಡಿ ನಾನು ಮೊದಲು ಭಾರತೀಯ ನಂತರ ರಾಜ್ಯವಿಂಗಡಣೆ ಅದನ್ನು ಬಿಟ್ಟು ಅವರ ಮೇಲೆ ಇವರು ಮಸಿ ಎರಚುವುದು ಇವರ ಮೇಲೆ ಅವರು ಮಸಿ ಎರಚುವುದನ್ನು ಬಿಟ್ಟು. ಮೊದಲು ಭಾರತೀಯರಾಗಿ ನಂತರ ರಾಜ್ಯ ನಮಗೆ ಸ್ವತಂತ್ರ  ಬರುವುದಕ್ಕೆ ಎಲ್ಲಾ ನಮ್ಮ ನಾಯಕರು ಸಾಕಷ್ಟು ರಕ್ತವನ್ನು ಚಲ್ಲಿದ್ದಾರೆ ಅದನ್ನು ಮರೆತು ನಾವುಗಳೇ ಈ ರೀತಿಯಲ್ಲಿ ಕಿತ್ತಾಡುವುದು ಎಷ್ಟು ಸರಿಯಾಗಿದೆ ಏಳಿ ಸ್ನೇಹಿತರೆ ನಾವೆಲ್ಲ ಹಿಂದೂಗಳು, ಕನ್ನಡ, ಮರಾಠಿ, ತಮಿಳು, ತೆಲುಗು ಇನ್ನು ಹಲವಾರು ಭಾಷೆಗಳು ನಾವಾಡುವ ನುಡಿಯಿಂದ ಮಾತ್ರ ಬೇರೆ ಹೊರೆತು ದೇಶದಿಂದಲ್ಲ ನಮ್ಮನ್ನು, ನಮ್ಮ ಒಂದು ಗಡಿ ಭಾಗದಲ್ಲಿರುವ ಸೈನಿಕರು ಅವರ ಒಂದು ಕುಟುಂಬವನ್ನು ಬಿಟ್ಟು ನಮ್ಮ ಒಂದು ಒಳಿತಿಗಾಗಿ ಮತ್ತು ದೇಶದ ಸುಭದ್ರೇತೆಗಾಗಿ ರಾಜ್ಯ ಮತ್ತು ಭಾಷೆಯನ್ನು ಮರೆತು ದೇಶದ ಹಿತಕ್ಕೋಸ್ಕರ ನಮ್ಮ ಸುಖ ದುಃಖ್ಖ ಗಳನ್ನು ಮರೆತು ಕಾಯುವುದನ್ನು ಮರೆತಿರ, ಯಾಕೆ, ಬೆಳಗಾವಿ ನಮ್ಮ ದೇಶದ ಒಂದು ಕರ್ನಾಟಕದ ಭಾಗವಲ್ಲವೇ,ನಿಮ್ಮ ಒಂದು ಅಂಗವಲ್ಲವೇ ನಾವೆಲ್ಲ ಭಾರತೀಯರು ಸ್ವತಂತ್ರ ದಿನವನ್ನು ನಾವೆಲ್ಲ ಒಟ್ಟಿಗೆ ಆಚರಣೆ ಮಾಡುವುದನ್ನು ನೀವುಗಳು ಮರೆತಿರಾ, ಯಾರೋ ದೇಶ ದ್ರೋಹದ ಕೆಲಸವನ್ನು ಮಾಡುತ್ತಾರೆ ಎಂದು ನಾವೆಲ್ಲ, ಜಗಳವಾಡಬೇಕೆ ನೀವೇ ಯೋಚನೆಯನ್ನು ಮಾಡಿ, ಎಲ್ಲಾ ರಾಜ್ಯದಲ್ಲಿ ಸ್ವತಂತ್ರ ದಿನದಂದು, ಗಾಂಧೀ, ಸುಭಾಷ್ ಚಂದ್ರ ಬೋಸ್ ಹಾಗೂ ಅಂಬೇಡ್ಕರ್ ಮತ್ತಿತರ ಗಣ್ಯವ್ಯಕ್ತಿಗಳ ಫೋಟೋಗಳನ್ನು ಇಟ್ಟು ಪೋಜಿಸುವುದಿಲ್ಲವೇ ನೀವೇ ವಿಚಾರ ಮಾಡಿ ಸ್ನೇಹಿತರೆ ದೇಶ ಭಾರತಾಂಬೆ ನೆಲ ಮಾತ್ರ ನಾವುಗಳು ನೆಲೆಸಿರುವ ರಾಜ್ಯ ಅದಕ್ಕಾಗಿ ನಾವುಗಳು ಈ ರೀತಿಯಲ್ಲಿ ಜಗಳವಾಡುವುದು ಸರಿನಾ ದಯವಿಟ್ಟು ಮನಸ್ಸು ಸಾಕ್ಷಿಗೆ ಪ್ರಶ್ನೆ ಯನ್ನು ಮಾಡಿ, ನಿಮ್ಮ ರಾಜ್ಯಕ್ಕೆ ನಿಮ್ಮ ನಾಯಕ, ಇದ್ದರೆ ಮತ್ತೊಬ್ಬ ರಾಜ್ಯಕ್ಕೆ ಇನ್ನೊಬ್ಬ ನಾಯಕ ಇರುತ್ತಾರೆ ಆಗಂತ ನಾವೆಲ್ಲ ಭಾರತೀಯರು ತಾನೇ ನಾವೇಕೆ ಜಗಳ ಇನ್ನಿತರ ಗಲಭೆಗೆ ಮುಂದಾಗಬೇಕು ಹೇಳಿ ವಿಚಾರವನ್ನು ಅರಿತು ಸಮಸ್ಯೆಗಳನ್ನು ಎದುರಿಸಿ. ಇದರಲ್ಲಿ ರಾಜಕೀಯ ಬೇಡ ನಾವೆಲ್ಲ ಇದ್ದರೆ ರಾಜಕೀಯ ಇಲ್ಲದ್ದಿದ್ದರೆ ನಮಗೆ ಇದು ಬೇಕಾ ಇವತ್ತು ನಡೆಯುತ್ತಿರುವ, ಭಾಷವಾರು ಜಗಳ ಇದು ಬೇಕಿತ್ತಾ, ಸಂಗೊಳ್ಳಿ ರಾಯಣ್ಣ ನಮ್ಮ ದೇಶಕ್ಕೋಸ್ಕರ ಪ್ರಾಣವನ್ನು ತ್ಯಾಗ ಮಾಡಿದ ವೀರ, ಮತ್ತು ಶಿವಾಜಿಯೂ ಸಹ ದೇಶ ಕಂಡಂತಹ ಅಪ್ರತಿಮ ದೇಶಪ್ರೇಮಿ ಅದನ್ನು ಮರೆತು, ಮಹಾರಾಷ್ಟ್ರ, ಕರ್ನಾಟಕ ಎನ್ನುವ ಬೇದವೇಕೆ ರಾಜ್ಯದ ನಡುವೆ ರಾಜಕೀಯ ಬೇಡ ಎಲ್ಲಾ ರಾಜ್ಯದ ಜನ ಮತ್ತೊಂದು ರಾಜ್ಯದಲ್ಲಿ ವಾಸವನ್ನು ಮಾಡುತ್ತಿದ್ದಾರೆ ಅದನ್ನು ನೆನಪಿಟ್ಟುಕೊಳ್ಳಿ, ಆಗಂತ ಕರ್ನಾಟಕ ಜನರ ಕೈಯಲ್ಲಿ ಏನೂ ಆಗುವುದಿಲ್ಲ ಅಂತ ತಿಳಿದುಕೊಳ್ಳಬೇಡಿ ನಮ್ಮ ಒಂದು ರಾಜ್ಯ ತಾಳ್ಮೆ, ಸಹನೆ ಮತ್ತು, ಸ್ನೇಹಕ್ಕೆ ಹೆಸರುವಾಸಿಯಾದ ನೆಲ, ನೀವು ಸಹ ನಮ್ಮ ಸ್ನೇಹಿತರೆ ನಮ್ಮ ಒಂದು ದೇಶದ ವಿರುದ್ಧ ಪರ ದೇಶ ದಂಡೇತ್ತಿ ಬಂದರೆ ನೀವು ಸುಮ್ಮನಿರುತ್ತೀರಾ ಹೇಳಿ ಇಷ್ಟೆಲ್ಲಾ ಗೊತ್ತಿದ್ದರೂ ಯಾಕೆ ಈ ವೈರತ್ವ ನಮ್ಮ ಒಂದು ಭಾರತಾಂಬೆಯ ನೆಲದಲ್ಲಿ ನಾವುಗಳು ಜನಿಸಿರುದೇ ಪುಣ್ಯ ಅದನ್ನು ಮರೆತು, ವೈರತ್ವ ಸಾದಿಸುವುದು ಸರಿನಾ? ಹೇಳಿ ಗೆಳೆಯರೇ ನಿಮ್ಮ ಮಹಾರಾಷ್ಟ್ರ ದಲ್ಲಿ ಇರುವಂತೆ ನಮ್ಮ ಕರ್ನಾಟಕದಲ್ಲೂ ವೀರ ಕಲಿಗಳು ಸಾಕಷ್ಟು ಜನರಿದ್ದಾರೆ ಅದನ್ನು ನೀವು ಮೊದಲು ತಿಳಿಯಿರಿ ಆಗಂತ ದುಡುಕುವ ಸ್ವಭಾವ ನಮ್ಮದಲ್ಲ ವಿಚಾರವಂತ ಗುಣ ನಮ್ಮಲ್ಲಿದೆ ಆಗಂತ ನೀವೇನು ಬೇರೆಯವರಲ್ಲ ಭಾರತಾಂಬೆಯ ಮಕ್ಕಳು ಇದನ್ನು ಮೊದಲು ತಿಳಿಯಿರಿ, ನಮ್ಮ ಒಂದು ದೇಶದಲ್ಲಿ ಪ್ರತಿಯೊಬ್ಬ ಯೋಧ ಹೋರಾಡಿದರು, ನಮ್ಮ ದೇಶವೆಂದು ಹೋರಾಡುತ್ತಾರೆ ಅದನ್ನು ಬಿಟ್ಟು ನಮ್ಮ ರಾಜ್ಯವೆಂದು ಯಾರು ಹೊರಾಡುವುದಿಲ್ಲ ಅಲ್ವಾ “””ನಾವೆಲ್ಲ ಭಾರತಾಂಬೆಯ ಮಕ್ಕಳು ಅದನ್ನು ಮೊದಲು ಅರಿತು ದುರ್ವರ್ತೇನೆಯನ್ನು ಮಾಡುವುದನ್ನು ಬಿಟ್ಟು ಬಾಳಿ ಭಾರತ ದೇಶ ನಮ್ಮ ಸ್ವತ್ತು ನಾವೆಲ್ಲ ಭಾರತಾಂಬೆಯ ಮಕ್ಕಳು ಇದನ್ನು ಅರಿತು ಬಾಳುವುದು ಒಳಿತು, ನಮ್ಮ ದೇಶದ ಸಂಕೇತನೆ “ದ್ವೇಷ ಬಿಡು ಪ್ರೀತಿ ಮಾಡು “ಎನ್ನುವ ಒಂದು ಉದ್ದೇಶದ ಸಂಕೇತ ಇದನ್ನು ನೆನಪಿಟ್ಟುಕೊಂಡು ಕೆಟ್ಟಕೆಲಸಗಳನ್ನು ಮಾಡುವುದಕ್ಕೆ ಮುಂದಾಗಿ, ಆಗಂತ ನೀವು ತಿಳಿದುಕೊಂಡ ಹಾಗೆ ಕರುನಾಡ ಮಕ್ಕಳು ಕೈಕಟ್ಟಿ ಕೂಡುವ ಹೇಡಿಗಳಲ್ಲ ದೇಶವೆಂದು ಬಂದರೆ ಭಾರತ, ರಾಜ್ಯವೆಂದು ಬಂದರೆ ಕರ್ನಾಟಕ ಇದು ರಾಜಕೀಯ ವ್ಯಕ್ತಿಗಳ ಕೆಟ್ಟ ವರ್ತನೆಗೆ ಆಡಿಯಾಳು ಆಗುವುದು ಬೇಡ ಒಡೆದು ಆಳುವ ನೀತಿಯನ್ನು ಪ್ರತಿಯೊಂದು ರಾಜ್ಯದ ವಿದ್ಯಾವಂತರು ಹಾಗೂ ಹೋರಾಟಗಾರರು ಕಂಡಿಸಲಿ ನಾವೆಲ್ಲ ಭಾರತೀಯರು…

ಭೋಲೋ ಭಾರತ್ ಮಾತಾಕಿ ಜೈ… ಜೈ ಕರುನಾಡು ರಕ್ಷಣಾ ಸೇನೆಯ ದೂರುನಿವಾರಣ ರಾಜ್ಯಾಧ್ಯಕ್ಷರ ಒಂದು ನಿಲುವು….

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend