ಏನೂ ಬಸು ಏನಿದು,ನಿಮ್ಮ ಫೋನ್ ಕಾಲ್ ರಂಪಾಟ !!!

Listen to this article

ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ದಡೆಸೋಗುರ್ ಹಾಗೂ ಮಹಿಳಾ ಅಧಿಕಾರಿಯ ಆಡಿಯೋ ಒಂದು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಭಾರೀ ಸದ್ದು ಮಾಡುತ್ತಿದೆ, ಆಡಿಯೊದಲ್ಲಿ ಆ ಮಹಿಳಾ ಅಧಿಕಾರಿ ಕನಕಗಿರಿ ಶಾಸಕರನ್ನು ನಿನ್ನ ಚಪ್ಪಲಿ ತಗೊಂಡು ಹೊಡೀತೇನೆ ನಿನ್ನ ಮಾನ ಹರಾಜು ಹಾಕ್ತೀನಿ ಅಂತಾ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಆ ಮಹಿಳೆ ಎಷ್ಟೇ ಬೈದರೂ ಶಾಸಕರು ಮಾತ್ರ ಆರಾಮಾಗಿಯೇ ಮಾತನಡುತ್ತಿರುತ್ತಾರೆ ಮತ್ತು ನಿನಗೆ ಸಿಟ್ಟಿದ್ದರೆ ಸಾಕಾಗತನಕ ಹೊಡೆದು ಬಿಡು ಎನ್ನುತ್ತಾರೆ ಆಡಿಯೋ ಸಂಭಾಷಣೆಯಲ್ಲಿ ಏನಿದು ಅಸಲಿಯೋ? ನಕಲಿಯೋ? ಎನ್ನುವುದು ಮಾತ್ರ ಯಾರಿಗೂ ಅರ್ಥವಾಗದ ರೀತಿಯಲ್ಲಿ ಬಾಸಾವಾಗುತ್ತಿದೆ ಇದನ್ನು ಗಮನಿಸಿದರೆ ಶಾಸಕರು ಏನೋ ತಪ್ಪು ಮಾಡಿದ್ದಾರೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

https://fb.watch/ajLLgIoSQu/

ಏನೇ ಆಗಲಿ ಒಬ್ಬ ಜನ ಪ್ರತಿನಿಧಿಯಾಗಿ ಸಾರ್ವಜನಿಕರಿಗೆ ಎಲ್ಲ ರೀತಿಯ ಕಷ್ಟದಲ್ಲಿ ಸ್ವಂದಿಸಿ ಕ್ಷೇತ್ರದ ಅಭಿವೃದ್ಧಿ ಮಾಡುವ ಒಬ್ಬ ಒಳ್ಳೆಯ ಅಭಿವೃದ್ಧಿ ಹರಿಕಾರರು ಎನ್ನುವಂತ ಶಾಸಕರಾಗಬೇಕೆ ಹೊರೆತು ಮತ್ತು ತಾಲೂಕಿನ ಹಲವು ಸಾರ್ವಜನಿಕರ ಕುಂದು ಕೊರತೆಗಳನ್ನು ಹಾಲಿಸಿ ಮಾದರಿಯಾಗಬೇಕಿರುವ ಶಾಸಕನೆ ಹೀಗೆ ಮಾಡಿದರೆ ಇನ್ನು ಕ್ಷೇತ್ರದ ಜನರು ಇವರನ್ನು ಹೇಗೆ ತಾನೇ ಗೌರವಿಸುತ್ತಾರೆ? ಯೋಚಿಸಿ ಇಂತಹ ಜನ ನಾಯಕರಿಂದ ನಮ್ಮ ಸಮಾಜಕ್ಕೆ ಯಾವ ಉಪಯೋಗವು ಇಲ್ಲ ಎಂದು ಕ್ಷೇತ್ರದ ಜನರು ಅಭಿಪ್ರಾಯ ಪಟ್ಟಿದ್ದಾರೆ.

ವರದಿ. ಶರಣುಗೌಡ ಪಟೇಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend