ಪಟ್ಟಣದ ಶಾರದಾ ಕಾನ್ವೆಂಟ್ ನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿದ ಈಶ್ವರಿ ವಿಶ್ವವಿದ್ಯಾನಿಲಯದ ಸಂಚಾಲಕ್ಕೆ ಬಿಕೆ ಸುಮಿತ್ರಕ್ಕ…!!!

Listen to this article

ಹೊಳಲ್ಕೆರೆ ಮಾನವೀಯ ಮೌಲ್ಯಯುತ ಶಿಕ್ಷಣದ ಜೊತೆ ಆಧ್ಯಾತ್ಮಿಕ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಅಗತ್ಯವಿದ್ದು ಇದರಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆದಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಸಂಚಾಲಕರಾದ ಬಿಕೆ ಸುಮಿತ್ರ ತಿಳಿಸಿದ್ದಾರೆ.


ಅವರು ಹೊಳಲ್ಕೆರೆ ಪಟ್ಟಣದ ಶಾರದಾ ಕಾನ್ವೆಂಟ್ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರ ಇಂದು ಸಾಕಷ್ಟು ಪರಿಣಾಮಕಾರಿಯಾಗಿ ಬೆಳವಣಿಗೆಯಾಗಿದೆ. ಶಿಕ್ಷಣದಲ್ಲಿ ಜ್ಞಾನ ವಿಜ್ಞಾನ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಕ್ಕಳಿಗೆ ಕಲಿಕೆ ಆರಂಭಿಸಲಾಗಿದೆ. ಇದರ ಜೊತೆ ಧಾರ್ಮಿಕ ಆಧ್ಯಾತ್ಮಿಕ ಚಿಂತನೆ ಯೋಗ ಕ್ರೀಡೆಗೆ ಇನ್ನಷ್ಟು ಹೊತ್ತು ನೀಡಬೇಕು. ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳು ಆಧ್ಯಾತ್ಮಿಕ ಚಿಂತನೆ, ಭಾರತೀಯ ಸಂಸ್ಕೃತಿಗೆ ಪೂರಕವಾಗಿರುತ್ತದೆ. ಹಾಗಾಗಿ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆದು ಸಾಧನೆ ಆದಿಯಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಖ್ಯಾತಪ್ಪ ಮಾತನಾಡಿ, ರೋಟರಿ ಕ್ಲಬ್ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕಿನಲ್ಲಿರುವ 35 ಶಾಲೆಗಳಿಗೆ 35 ಕಂಪ್ಯೂಟರ್ಗಳನ್ನ ಉಚಿತವಾಗಿ ನೀಡಿದೆ. ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನ ಕೊಟ್ಟು ಪ್ರೋತ್ಸಾಹ ನೀಡಲಾಗುತ್ತದೆ ಎಂದರು.


ವಕೀಲರಾದ ಎಸ್ ವೇದಮೂರ್ತಿ ಮಾತನಾಡಿ, ಶಿಕ್ಷಣ ಇಂದು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಭಾವಿಯಾಗಿ ಬೆಳೆಯುತ್ತಿದೆ. ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನ ವ್ಯಾಪಾರಿಕರಣದ ವಸ್ತುವನ್ನಾಗಿ ಮಾಡಿಕೊಂಡಿವೆ. ಇದು ಸಮಾಜದ ಬೆಳವಣಿಗೆಗೆ ಮಾರಕವಾಗಲಿದೆ. ಜಾತಿ, ಧರ್ಮ ಎಲ್ಲೆ ಮೀರಿ ಪ್ರತಿಯೊಬ್ಬರಿಗೂ ಶಿಕ್ಷಣ ಉಚಿತವಾಗಿ ಗುಣಮಟ್ಟದಿಂದ ನೀಡಿದಾಗ ದೇಶದ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಸಮಾನವಾದ ರೀತಿಯಲ್ಲಿ ಶಿಕ್ಷಣವನ್ನು ಕಲ್ಪಿಸಿಕೊಡಲು ಮುಂದಾಗಬೇಕು. ಸಾಕಷ್ಟು ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸಿಕೊಡವಲ್ಲಿ ಸೋಲುತ್ತಿವೆ. ಸರ್ಕಾರ ಕನ್ನಡ ಮಾಧ್ಯಮದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲೆ ಕಾಲೇಜುಗಳಿಗೆ ಬರಪೂರ ಸೌಲಭ್ಯವನ್ನು ಕೊಡಬೇಕೆಂದರು.

ಸಂಸ್ಥೆಯ ಕಾರ್ಯದರ್ಶಿಗೆ ಚಿತ್ತಪ್ಪ ಮಾತನಾಡಿ ಶಾರದಾ ಕಾನ್ವೆಂಟ್ ಮೂಲಕ ಸಮಾಜದಲ್ಲಿರುವ ಹಿಂದುಳಿದ ದುರ್ಬಲ ದಲಿತ ಮಕ್ಕಳಿಗೆ ಶಿಕ್ಷಣವನ್ನ ನೀಡಲಾಗುತ್ತದೆ.
ಶಿಕ್ಷಣದಿಂದ ಸಾಮಾಜಿಕವಾಗಿ ಪರಿವರ್ತನೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಬಡ ಮಕ್ಕಳಿಗೂ ಉತ್ತಮ ಶಿಕ್ಷಣವನ್ನು ಸಾಧನೆ ಆದಿಯಲ್ಲಿ ಸಾಗುವಂತ ಪ್ರೇರಣೆ ನೀಡಲಾಗುತ್ತದೆ ಎಂದು ತಿಳಿಸಿದರು. ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ರುದ್ರಪ್ಪ, ಶಂಕರಮೂರ್ತಿ, ಹಾವಿನ ಹಟ್ಟಿ ಸುರೇಶ್ ,ಬಿಜೆ ಹಳ್ಳಿ ವೆಂಕಟೇಶ್ ಮಹಾಲಕ್ಷ್ಮಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದರು…

ವರದಿ. ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend