ಸಂವಿಧಾನದ ಅರಿವಿನ ನೋಟ ಮತ್ತು ಅದರ ಸುತ್ತ ಮುತ್ತಲಿನ ದಿಕ್ಕು…!!!

Listen to this article

ಎಚ್ಚರಿಕೆ.ಅಂಕಣ 1

ಸಂವಿಧಾನದ ಅರಿವಿನ ನೋಟ ಮತ್ತು
ಅದರ ಸುತ್ತ ಮುತ್ತಲಿನ ದಿಕ್ಕು…

ವಿಶ್ವ ಮಾನ್ಯತೆ ಪಡೆದ ನಮ್ಮ ಸಂವಿಧಾನವು ಆಧುನಿಕ ಭಾರತದಲ್ಲಿ ಸಮಾನತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ.ಸಮಾನತೆ,ಸೊದರತೆ ಮತ್ತು ಮಾನವೀಯ ಸಂಬಂಧಗಳನ್ನೋಳಗೊಂಡ ಒಂದು ಬೆಚ್ಚಗಿನ ಬದುಕನ್ನು ಹಲವು ಶತಮಾನಗಳ ಕಾಲ ಹಂಬಲಿಸಿದ, ಒತ್ತಾಯಿಸಿದ ಜನ ಸಮುದಾಯದ ಕನಸುಗಳು,ಆಶಯಗಳು ಸ್ವಾತಂತ್ರ್ಯ ನಂತರ ಸಂವಿದಾನ ರೂಪ ಪಡೆದವು. ಸಮಾನತೆಯ ಕನಸುಗಾರ ಡಾ. ಬಿ.ಅರ್ ಅಂಬೇಡ್ಕರ್ ಅವರ ಸಮರ್ಥ ನಾಯಕತ್ವದಲ್ಲಿ ಸ್ವಾತಂತ್ರ್ಯ ಚಳುವಳಿಗಾರರು,ಹುತಾತ್ಮರು ಕಂಡ ಕನಸಿನ ಭಾರತವನ್ನು ನನಸು ಮಾಡುವ ನೆಲೆಯಲ್ಲಿ ನಮ್ಮ ಸಂವಿಧಾನ ಹೆಚ್ಚು ಅಶಕ್ತವಾಗಿದೆ. ಇದನ್ನು ಓದುವುದು ನಮ್ಮ ಮೊದಲ ಆದ್ಯತೆ ಆಗಬೇಕಾಗಿದೆ.

ಕಾಯಕ ಜೀವಿಗಳು,ದಲಿತರು,ದಮನೀತರು,ಮಹಿಳೆಯರನ್ನು ಒಳಗೊಂಡಂತೆ ದೇಶದ ಎಲ್ಲಾ ಸಾಮಾಜಿಕ,ಆರ್ಥಿಕ, ಶೈಕ್ಷಣಿಕ, ಮತ್ತು ಸಾಂಸ್ಕೃತಿಕ, ದುರ್ಬಲ, ಜನ ಸಮುದಾಯದ ಪಾಲಿಗೆ ಸಂವಿಧಾನದ ಆಶಯಗಳು ಇನ್ನೂ ಪೂರ್ಣವಾಗಿ ಕೈಗೂಡದ ಕನಸಿನ ಗಂಟಾಗಿದೆ,ಎಲ್ಲಾ ಮಿತಿಗಳ ನಡುವೆ ಕೂಡ ಸ್ವಾತಂತ್ರ್ಯ ಭಾರತದ ಏಳು ದಶಕಗಳ ಸಾಧನೆ ಗಮನಾರ್ಹವಾದದ್ದು .ಇದು ಸಾಧ್ಯ ವಾಗಿರುವುದು ಸಂವಿಧಾನದ ಆಶಯಗಳು ಭಾಗಶಃವಾಗಿಯಾದರೂ ಜಾರಿಯಾಗಿ ಎನ್ನುವ ಸತ್ಯ ನಮ್ಮೊಂದಿಗೆ ಇದೆ.

ಇತ್ತಿಚಿನ ದಿನಗಳಲ್ಲಿ ಸಂವಿಧಾನದ ಆಶಯಗಳು ಮೇಲೆಯೇ ಗದಾಪ್ರಹಾರ ನಡೆಯುತ್ತಿರುವುದು ಅತಂಕಕಾರಿ ವಿಷಯವಾಗಿದೆ.
ಸಂವಿಧಾನವನ್ನು ಅದರ ರಚನೆಯ ಹಿಂದಿರುವ ಆಶಯದೊಂದಿಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದ ಸಂದರ್ಭ ದಲ್ಲಿ ಹುಟ್ಟಿಕೊಂಡ ಅತೃಪ್ತಿಗಳನ್ನು ಬಳಸಿ,ಹುಸಿ ಸಂಸ್ಕೃತಿಯ ಪ್ರಚಾರದ ಮೂಲಕ ಸಂವಿಧಾನದ ಮೂಲ ಆಶಯಗಳ ಮೇಲೆ ದಾಳಿ ಮಾಡುತ್ತಾ ದಾಳಿ ಮಾಡುತ್ತಾ ನಮ್ಮ ಯುವ ಪೀಳಿಗೆಯನ್ನು ದಿಕ್ಕು ಗೆಡಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ನಮ್ಮನ್ನು ಮುನ್ನಡೆಸ ಬೇಕಾದ ಸಂವಿಧಾನವನ್ನು ನಾವು ಕಾಪಿಟ್ಟುಕೊಳ್ಳಬೇಕಾದ ಘಳಿಗೆ ಇದು‌.

ಹಿಂದೊಮ್ಮೆ ಕೇಂದ್ರ ಸರ್ಕಾರದ ಸಚಿವರೊಬ್ಬರು ‘ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಅಧಿಕಾರಕ್ಕೆ ಬಂದಿದ್ದೇವೆ’. ಎಂದು ಭಾಷಣ ಮಾಡಿ ವಿವಾದವೆಬ್ಬಿಸಿದರು.ಸಂವಿಧಾನ ಬದಲಾಯಿಸುವುದು ಬೇರೆ, ತಿದ್ದುಪಡಿ ಮಾಡುವುದುಬೇರೆ. 368ನೇ ವಿಧಿಯಲ್ಲಿ ತಿದ್ದುಪಡಿ ಮಾಡುವ ಅವಕಾಶವನ್ನು ಸಂವಿಧಾನ ನೀಡಿದೆ. ಈ ಮಾದರಿಯ ಮಾತುಗಳು ಅಸಹನೆಯ ಆಸ್ಟೋಟಗೊಳ್ಳುವ ಕ್ರಯೆಯೂ ಆಗಬಲ್ಲದೆಂಬುದಕ್ಕೆ 12/08.2018 ರಂದು ದೆಹಲಿಯ ಜಂತರ್ ಮಂತರ್ ಬಳಿ ಸಂವಿಧಾನದ ಪ್ರತಿಯನ್ನು ಸುಟ್ಟ ಘಟನೆ ಸಾಕ್ಷಿಯಾಗಿದೆ. ಸಂವಿಧಾನದ ಪ್ರತಿಯನ್ನ ಸುಡುವ ದುಷ್ಟ ಧೈರ್ಯ ಇಲ್ಲಿಯವರೆಗೆ ಯಾರಿಗೂ ಬಂದಿರಲಿಲ್ಲ. ಈಗ ಒದಗಿದ ಒತ್ತಾಸೆಯೇನು? ಈ ದುಷ್ಟ ಧೈರ್ಯದ ಕಾರಣಗಳನ್ನು ಹುಡುಕಬಹುದು. ಸಂವಿಧಾನ ದೊರಕಿಸಿದ ಮೀಸಲಾತಿ ಸೌಲಭ್ಯದಿಂದ ಮೇಲ್ ಜಾತಿಯ ಮತ್ತು ವರ್ಗಗಳ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆಯೆಂಬ ಹುಸಿಪ್ರಚಾರವೂ ಕಾರಣವಾಗಿರಬಹುದು. ಮೀಸಲಾತಿಯೆಂಬುದು ಜಾತಿಯ ಕಾರಣಕ್ಕಾಗಿಯೇ ದಮನಕ್ಕೆ ಒಳಗಾಗಿ ಸಾಮಾಜಿಕ ಅನಾಥ ಪ್ರಜ್ಞೆಗೆ ತುತ್ತಾದವರಿಗೆ ತುತ್ತು ಕೊಡುವ ಪರಿಕಲ್ಪನೆಯೇ ಹೊರತು ಮೇಲ್ ಜಾತಿ ಮತ್ತು ವರ್ಗಗಳ ವಿರೋಧಿಯಲ್ಲ. ಅದರೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಜಾತಿ ಮೀಸಲಾತಿ ಏಕೆ ಬೇಕು ಪ್ರಶ್ನಿಸುವವರಿಗೆ ಮಲ ಎತ್ತುವ, ಬೀದಿ ಕಸ ಗೂಡಿಸುವ ಕೆಲಸಕ್ಕೂ ಜಾತಿಗೂ ಸಂಬಂಧವಿಲ್ಲವೇ ಎಂದು ಹೇಳಬೇಕಾಗುತ್ತದೆ. ಯಾಕೆಂದರೆ ಈ ಕೆಲಸಗಳಿಗೂ ಕೆಳಜಾತಿಗೂ ಸಂಬಂಧವಿದೆ. ಮೇಲೂ ಜಾತಿಯ ಯಾರೂ ಈ ಕೆಲಸ ಮಾಡುವುದಿಲ್ಲ.
ಭಾರತವು ಎಲ್ಲಾ ಧರ್ಮಗಳ ದೇಶವೆಂದು ಸಾರಿದೆ.ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಬಹುಸಂಖ್ಯಾತರು ಸವಾರಿ ಮಾಡದಿರಲಿ ಎಂಬ ಸಾಮರಸ್ಯದ ಕಾರಣಕ್ಕೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ಅವಕಾಶಗಳನ್ನು ಕಲ್ಪಿಸಿದೆ ಇದನ್ನು ಬಹುಸಂಖ್ಯಾತರು ವಿರೋಧಿ ನೀತಿಎಂದು ತಪ್ಪಾಗಿ ಅರ್ಥೈಸುವ ಶಕ್ತಿಗಳು ಅಸಹನೆಯನ್ನು ಬಿತ್ತುತ್ತಿವೆ. ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಹಿಂದೂ ಧರ್ಮ ನಿಷ್ಠೆರಾದ ಡಾ.ರಾಧಾಕೃಷ್ಣನ್ ಅವರು ”ನಮ್ಮ ದೇಶವು ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ.ಒಂದೇ ಧರ್ಮದ ಪ್ರಬಲ್ಯ ಸಲ್ಲ.” ಗಾಂಧೀಜಿ ಯವರು ಸ್ವಾತಂತ್ರ್ಯ ಪೂರ್ವದಲ್ಲೇ ಹಿಂದೂ ರಾಷ್ಟ್ರದ ಕಲ್ಪನೆಯನ್ನು ವಿರೋಧಿಸಿದ್ದರು. ಸರ್ವಧರ್ಮ ಸಹಿಷ್ಣುತೆ ಮತ್ತು ಸಮತೆಯು ಸಂವಿಧಾನದ ಆಶಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಆಶಯವನ್ನೆ ಒಪ್ಪದಿರುವರು ನೈಜ ಭಾರತೀಯರಾಗಲು ಅರ್ಹರಲ್ಲ.

ಸಂವಿಧಾನವನ್ನು ಅಪಾರ್ಥ ಮಾಡಿಕೊಳ್ಳುವ ಅಥವಾ ಅರ್ಥ ಮಾಡಿಕೊಂಡೆ ಅಸಹನೆಯನ್ನ ಅಸ್ಟೋಟಿಸುವ ಸನ್ನಿವೇಶದಲ್ಲಿ ಜನರಿಗೆ ಸ್ಪಷ್ಟ ಮಾಹಿತಿ ಕೊಡುವ ಅಗತ್ಯವಿದೆ. ಅದ್ದರಿಂದ ಸಂವಿಧಾನದ ಮರುಓದಿನ ಅಗತ್ಯವಿದೆ. ಸಂವಿಧಾನ ವಿರೋಧಿ ಚಟುವಟಿಕೆಯಿಂದ ಎಚ್ಚರ ಎಚ್ಚರ…

ವರದಿ..ಅಜಯ. ಚ ಹೂವಿನ ಹಡಗಲಿ ಅವರ ಒಂದು ಸಾರಾತ್ಯದಲ್ಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend