ಹೊಳಲು ಸ್ವಾಮಿ ವಿವೇಕಾನಂದ ಪ,ಪೂ, ಕಾಲೇಜಿನಲ್ಲಿ ಶನಿವಾರ ಇಂಗ್ಲಿಷ್ ಕಾರ್ಯಾಗಾರ…!!!

Listen to this article

ಹೊಳಲು: ಇಂಗ್ಲಿಷ್ ಕಾರ್ಯಾಗಾರ

ಹೊಳಲು : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಕಲಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಪ್ರಾಚಾರ್ಯ
ಸಿದ್ದಪ್ಪ ಕೂಕನಪಳ್ಳಿ ಹೇಳಿದರು.

ತಾಲೂಕಿನ ಹೊಳಲು ಸ್ವಾಮಿ ವಿವೇಕಾನಂದ ಪ ಪೂ ಕಾಲೇಜಿನಲ್ಲಿ ಶನಿವಾರ
ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರೀಕ್ಷೆಯಲ್ಲಿ ಧೈರ್ಯವಾಗಿ ಇಂಗ್ಲಿಷ್ ವಿಷಯವನ್ನು ಎದುರಿಸಲು ಈ ತರಹದ ಕಾರ್ಯಾಗಾರಗಳು ಅಗತ್ಯವಾಗಿವೆ ಎಂದರು.

ಮರಿಯಮ್ಮನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಂಬೂನಾಥ್ ವಗ್ಗ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇಂಗ್ಲಿಷ್ ವಿಷಯದ ವ್ಯಾಕರಣವನ್ನು ಸುಲಭವಾಗಿ ಕಲಿಯುವ ಹಾಗೂ ಪರೀಕ್ಷೆಯಲ್ಲಿ ಸಮರ್ಥವಾಗಿ ವಿಷಯ ನಿರೂಪಿಸುವ ಬಗ್ಗೆ ತರಬೇತಿ ನೀಡಿದರು.

ಕಾರ್ಯಾಗಾರದಲ್ಲಿ ಹೊಳಲು ಕಾಲೇಜ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗುಡಗೂರು ಜಯಣ್ಣ, ಹಿರೇಹಡಗಲಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಕೆ ಮೂಗಪ್ಪ, ಹೊಳಲು ಕಾಲೇಜಿನ ಉಪನ್ಯಾಸಕರಾದ ಸಣ್ಣ ನೀಲಪ್ಪ, ಪ್ರಶಾಂತ್ ಕುಮಾರ್, ಮಲ್ಲಯ್ಯ, ಕಾರ್ಯಕ್ರಮ ಸಂಯೋಜಕರಾದ ಪರಶುರಾಮ ನಾಗೋಜಿ, ಮಾಗಳ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ತಾರಾ ಸಿಂಗ್ ಹಾಗೂ ಹೊಳಲು, ಹಿರೇಹಡಗಲಿ, ಮಾಗಳ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

ವರದಿ. ಅಜಯ್, ಚ. ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend