ಆನೆಗೆ ಅದರದೇ ಆದ ಗತ್ತಿದೆ ಬಿಎಸ್ಪಿ ಗೆ”

Listen to this article

“ಆನೆಗೆ ಅದರದೇ ಆದ ಗತ್ತಿದೆ ಬಿಎಸ್ಪಿ ಗೆ”

ಭಾರತದ 3 ನೇ ರಾಷ್ಟ್ರೀಯ ಪಕ್ಷ BSP ನಾಯಕಿ ಮಾಯಾವತಿ ಇನ್ನೂ ಮಲಗಿದ್ದಾರೆ ಅಂತ ಸಾರಿ ಸಾರಿ ಹೇಳಿ.
ಕರ್ನಾಟಕದ ಮನುವಾದಿ ಪಕ್ಷಗಳ ಚಮಚಾಗಳ ಕಿವಿಗಳು ಬೆಚ್ಚಗಾಗಲಿ.

ಉತ್ತರಪ್ರದೇಶದ ಚುನಾವಣಾ ಕಣದ ರೇಸ್ ನಲ್ಲಿರುವ ಮೊದಲ ಪಕ್ಷ ಮಾಯಾವತಿಯವರ ಆನೆ ಅಂತ ಕರ್ನಾಟಕದ ಯಾವ ಪತ್ರಿಕೆಯೂ ವರದಿ ಮಾಡ್ತಿಲ್ಲ..
ಎಲ್ಲವೂ ಸಮಾಜವಾದಿ ಮತ್ತು BJP ಯೇ ನೇರಾ ನೇರಾ ಪೈಪೋಟಿಯಲ್ಲಿವೆ ಅಂತ ಬಿಂಬಿಸುತ್ತಿವೆ.

ಆದರೆ..
ಅಲ್ಲಿನ ಗ್ರೌಂಡ್ ರಿಪೋರ್ಟ್ ಬೇರೆಯೇ ಹೇಳುತ್ತಿದೆ.
ಆ ರಾಜ್ಯದ ಪತ್ರಿಕೆಗಳು ಹಾಗು ಮಾಧ್ಯಮಗಳು ಬೇರೆ ಹೇಳುತ್ತವೆ.
ಕಳೆದ ಒಂದು ತಿಂಗಳಿಂದ 150 ಕ್ಕೂ ಹೆಚ್ಚು BJP , RJD , AAP ,ಕಾಂಗ್ರೇಸ್ ಮತ್ತು ಸಮಾಜವಾದಿ ( SP ) ಯ ರಾಷ್ಟ್ರೀಯ ಕಾರ್ಯದರ್ಶಿಗಳು ,
ಭೀಮ್ ಆರ್ಮಿ ಯ ಸಂಸ್ಥಾಪಕ ಸೇರಿದಂತೆ AAP ಯ ಹಾಲಿ ಶಾಸಕರು SP ಯ ಹಾಲಿ ಮತ್ತು ಮಾಜಿ ಶಾಸಕರು , RLD ಯ ಗುರ್ಜರ್ ಸಮದಾಯದ ಪ್ರಬಲ ನಾಯಕ ಅರುಣ್ ಕಸಾನಾ ಸೇರಿದಂತೆ ಅನೇಕರು BSP ಗೆ ಸೇರ್ಪಡೆಯಾಗಿದ್ದಾರೆ.

1.ಇಮ್ರಾನ್ ಮಸೂದ್ (SP)
2.ಹಾಜಿ ರಿಜ್ವಾನ್ (SP)
3.ಅಬ್ದುಲ್ ಮನ್ನಾನ್ (SP)
4.ಚೌಧರಿ ತನ್ವೀರ್(SP)
5.ಕಿರಣ್ ರಮೇಶ್ ಕತಿಕ್ (SP) 6.ಚಂದ್ರಭಭೂಷಷಸಿಂಗ್(SP)
7.ಶ್ಯಾಂ ಸಿಂಗ್ ಯದವ್(SP)
8.ರಾಮೇಶ್ವರ ಶಾಕ್ಯ(SP)
9.ಮದನ್ ಚೌಹಾಣ್(SP) 10.ಅಶೋಕತಿವಾರಿ(BJP)
11.ಯೋಗೇಶ ಪಾಟಿಲ್(BJP)
12.ಶ್ರೀ ಕಾಂತ ಶರ್ಮ(BJP)
13.ಅಜಿತ್ ಸಿಂಗ್ ಪಾಲ್(BJP)
14.ದರ್ಶನ್ ಶರ್ಮಾ (BJP)
15.ಚರಣಭೂಷಣಸಿಂಗ್(BJP)
16.ಶಬಿರ್ ಅಬ್ಬಾಸ್(Cong)
17.ಪುಷ್ಪೇಂದರ್ ಸಿಂಗ್ (Co)
18.ವಿಜಯಾ ಕುಮಾರ್(Co)
19.ಸಂದೀಪ್ ವಾಲ್ಮೀಕಿ (AAP)
20.ಅಜಾದ್ ಕುರೇಶಿ(ASP)
21.ರಜನೀಶ್ ತಿವಾರಿ(ಆಪ್ನ)
22.ರಾಕೇಶ ಟಿಕಾಯತ್(SW)
23.ಡಾ.ಪೂನಮ್ ಗರ್ಗ್(SW)
24.ರಜಿಯಾ ಖಾನ್ (SW)
25.ರೋಹಿತ್ ಗಾರ್ವ((B A)

ಈಗಾಗಲೇ 150 ಕ್ಕೂ ಹೆಚ್ಚು ಬ್ರಾಹ್ಮಣ ಮತ್ತು ಇತರೆ ಸಮುದಾಯಗಳಲ ಸಭೆ ಸಮಾವೇಶ ಜರುಗಿವೆ.

ಈಗತಾನೆ ರೈತ ಹೋರಾಟ ಮುಗಿಸಿ ಬಂದ ರಾಕೇಶ್ ಟಿಕಾಯತ್ BSP ಬೆಂಬಲಿಸುತ್ತಿದ್ದಾರೆ.
ನಿರ್ಭಯಾ ಅತ್ಯಾಚಾರ ಕೇಸ್ ನ ಆರೋಪಿಗಳನ್ನು ಗಲ್ಲಿಗೇರಿಸಿದ ಸೀಮಾ ಕುಶ್ವಾ ಕೂಡ BSP ಸೇರ್ಪಡೆಯಾಗಿದ್ದಾರೆ.

ಈ ಮೇಲಿನ paper statements ನೋಡಿದ್ರೆ ಗೊತ್ತಾಗುತ್ತೆ.
BSP ಯನ್ನೇ ಜನರು ಪುನಃ ಅಪೇಕ್ಷಿಸುತ್ತಿದ್ದಾರೆ.
BJP ಯು ಮಕಾಡೆ ಮಲಗಿದೆ.
ಎಂದು ವರದಿಯಾಗಿದೆ.
NDTV ಸರ್ವೇಯಲ್ಲಿ ಶೇಕಡಾ 70% ಜನರು BSP ಯನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಬಿತ್ತರಿಸುತ್ತಿದೆ.

ಉತ್ತರಪ್ರದೇಶದ ಏಷಿಯಾನೆಟ್ ಸುವರ್ಣ ಕೂಡ 222 ಸೀಟ್ ಗಳನ್ನು BSP ಗೆಲ್ಲಲಿದೆ ಎಂದು ವರದಿ ಮಾಡಿದೆ.
ABP & ಆಜ್ ತಕ್ ನ್ಯೂಸ್ ಕೂಡ 250 ಕ್ಕೂ ಹೆಚ್ಚು BSP ಪಾಲಾಗಲಿದೆ ಎಂದಿದೆ.
ಅಲ್ಲಿನ TV9 ವರದಿಯಲ್ಲಿ ಉತ್ತರಪ್ರದೇಶದ ಶೇಕಡಾ 65% ದಲಿತರು BSP ಬೆಂಬಲಿಸಲಿದ್ದಾರೆ ಎಂದಿದೆ.

ಆದರೆ ಉತ್ತರಪ್ರದೇಶದಲ್ಲಿರುವ ಒಟ್ಟಾರೆ ಶೇಕಡಾ 24% ದಲಿತರಲ್ಲಿ ಅಂದಾಜು 21% ಜನರು BSP ಪರ ಇದ್ದಾರೆ ಎಂಬುದು ಈಗಾಗಲೆ ಗೊತ್ತಿರುವ ಕಥೆ.
ಇನ್ನುಳಿದ ಕೇವಲ 3% ಜನಸಂಖ್ಯೆ ಮಾತ್ರ ಉಳಿದ ಪಕ್ಷಗಳಿಗೆ ಹಂಚಿ ಹೋಗಿದೆ ಅಷ್ಟೆ.
ಹಾಗಾಗಿಯೇ ಬೆಹನ್ಜೀಯವರು 14% ಇರುವ ಬ್ರಾಹ್ಮಣರ ಸಮಾವೇಶ ಮಾಡಿ ದಲಿತರು+ಬ್ರಾಹ್ಮಣರು ಕಾಂಬಿನೇಶನ್ ಅಡಿಯಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ.
ಇನ್ನು OBC ಮತ್ತು ಅಲ್ಪಸಂಖ್ಯಾತರ ಮತ ಹೆಚ್ಚಲ್ಲದಿದ್ದರೂ ಆ ರಾಜ್ಯದಲ್ಲಿ ಒಂದು ಪಕ್ಷ ಗೆಲ್ಲಲು ಬೇಕಾದ 40% ಓಟ್ ಶೇರ್ ಗಳನ್ನು ಪಡೆಯಲಿದೆ.
ಅದಕ್ಕೆ ಬೇಕಾದ ತಯಾರಿ ಈಗಾಗಲೇ ನಡೆಯುತ್ತಿದೆ.

ಈಗಾಗಲೇ ಅಮಿತ್ ಷಾ ಗೆ ಖಾರವಾಗಿ ಉತ್ತರಿಸಿದ ಬೆಹನ್ಜೀ..
ಪದೇ ಪದೇ ದೊಡ್ಡ ದೊಡ್ಡ ಸಮಾವೇಶ ಮಾಡುವಷ್ಟು ಹಣದ ಹೊರೆಯನ್ನು ನನ್ನ ಜನರು ಹೊರಲಾರರು.
ಏಕೆಂದರೆ ಬೇರೆ ಪಕ್ಷಗಳಂತೆ ಬಂಡವಾಳಶಾಹಿಗಳ ಹಣದಲ್ಲಿ ನಡೆಸುವ ಪಕ್ಷ ನಮ್ಮದಲ್ಲ.
ನಮ್ಮ ಪಕ್ಷ ಸಂಘಟನಾ ಕೌಶಲತೆ ಬೇರೆಯೇ ಇದೆ.
ಇತರೆ ಪಕ್ಷಗಳ ಸಂಘಟನಾ ಕೌಶಲವನ್ನು ಕಾಪಿ ಮಾಡುವ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ.

40 ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಪಕ್ಷ ಸಂಘಟನೆ ಮಾಡಿರುವ ಬೆಹನ್ಜೀ ಮುಂದೆ ಹಣ- ಹೆಂಡ ಹಂಚಿ ಧರ್ಮದ ಹೆಸರಲ್ಲಿ ಮತ ಯಾಚನೆ ಮಾಡುವ ಇತರೆ ಪಕ್ಷಗಳು ಮುಗ್ಗರಿಸಲಿವೆ.

” ಬೆಹನ್ಜೀ ತುಮ್ ಸಂಘರ್ಷ್ ಕರೋ..
ಹಮ್ ತುಮ್ಹಾರೆ ಸಾಥ್ ಹೋ..”
ಎಂಬ ಜನರು ಬೆಹನ್ಜೀ ಜೊತೆ ಇರೋವರೆಗೂ ಈ ಚಳುವಳಿ ನಿರಂತರ.

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend