ಚಂಪಾ ನುಡಿ ನಮನ ಆನ್ಲೈನ್ ಕಾರ್ಯಕ್ರಮ…!!”

Listen to this article

ಚಂಪಾ ನುಡಿ ನಮನ
ಆನ್ಲೈನ್ ಕಾರ್ಯಕ್ರಮ

ಚಂಪಾ ಸಾಹಿತ್ಯ ಮೌಲ್ಯಗಳು ಅನನ್ಯ
ಬಂಜಗೆರೆ ಜಯಪ್ರಕಾಶ್

ಹೂವಿನ ಹಡಗಲಿ: ಚಂದ್ರಶೇಖರ ಪಾಟೀಲ್ ರವರ ಸಾಹಿತ್ಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ಬಳ್ಳಾರಿ ವಿಜಯನಗರ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ರವಿವಾರ ಆಯೋಜಿಸಿದ್ದ ಚಂದ್ರಶೇಖರ ಪಾಟೀಲ್ ರವರ ನುಡಿ ನಮನ ಚಂಪಾ ಕಾವ್ಯ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಕ್ಕೆ ಆಗ್ರಸ್ಥಾನ ಅನುಷ್ಠಾನಕ್ಕೆ ಒತ್ತಾಯಿಸಿ
ಗೋಕಾಕ್ ಚಳುವಳಿ ಸಂಘಟಿಸಿದ ಕೀರ್ತಿ ಚಂಪಾ ಅವರಿಗೆ ಸಲ್ಲುತ್ತದೆ.
ಬಂಡಾಯ ಸಾಹಿತ್ಯ ಸಂಘಟನೆ, ಸಂಕ್ರಮಣ ಪತ್ರಿಕೆ ಮೂಲಕ ಹೊಸ
ಕವಿ ಲೇಖಕರಿಗೆ ಬರವಣಿಗೆ
ಗೀಳು ಹಚ್ಚಿಸಿದ್ದರು ಎಂದು ತಿಳಿಸಿದರು.

ಟೀಕೆ ಹರಿತವಾದ
ವ್ಯಂಗ್ಯ ವಿಡಂಬನೆ ಮೊನಚಾದ ಮಾತುಗಳು
ಚಂಪಾ ಅವರ ಅನನ್ಯವಾದ ವಿಶಿಷ್ಟ ಗುಣ.
ಕನ್ನಡದಲ್ಲಿ ಅಸಂಗತ ನಾಟಕಗಳು ಬರೆದು ನಾವೀನ್ಯತೆ ತಂದ ಹೆಗ್ಗಳಿಕೆ ಇವರದು. ಚಂಪಾ ಪ್ರತಿಪಾದಿಸಿದ ಬರೆದ ಸಾಹಿತ್ಯ ಮೌಲ್ಯಗಳನ್ನು ಮುಂದುವರೆಸುವ ಕಾರ್ಯ ಆಗಬೇಕಾಗಿದೆ ಎಂದರು.

ಚಂಪಾ ಕಾವ್ಯ ಓದು:
ಪ್ರಮೋದ್ ತುರವಿಹಾಳ
ಪರಶುರಾಮ ನಾಗೋಜಿ. ಸುಧಾ ಚಿದಾನಂದ ಗೌಡ. ಭಾರತಿ ಮೂಲಿಮನಿ. ಶಂಕರ್ ಬೆಟಗೇರಿ. ಡಾ. ಅರವಿಂದ ಪಾಟೀಲ್ .ಎಲ್ ಹಾಲ್ಯಾನಾಯ್ಕ್ . ಕೆ ವೀರಭದ್ರ ಗೌಡ
ಅಶ್ವಿನಿ ಮದನಕರ್ .ವಿಶಾಲ ಮ್ಯಾಸರ್ .ನಾಗರಾಜ ಗಂಟಿ. ಪ್ರಭಾ ಪಾಟೀಲ್, ಜಯಸೂರ್ಯ ,ಬಸಂತ್ ಲಕ್ಷ್ಮಿ
ಚಂದ್ರಶೇಖರ ಪಾಟೀಲ್ ರವರ ಕವಿತೆಗಳನ್ನು ಓದಿದರು.
ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಭಾಗವಹಿಸಿ ಅರ್ಥಪೂರ್ಣ
ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಳ್ಳಾರಿ ಬಂಡಾಯ ಸಾಹಿತ್ಯ ಸಂಘಟನೆಯ
ಸಂಚಾಲಕ ಪಿ ಆರ್ ವೆಂಕಟೇಶ್, ಸುರೇಶ ಅಂಗಡಿ,ಬಿ ಅರುಣ್ ಕುಮಾರ್ ನಿರ್ವಹಿಸಿದರು.ಚಂಪಾ ನುಡಿ ನಮನ

ಸಂಚಾಲಕ ಪಿ ಆರ್ ವೆಂಕಟೇಶ್, ಸುರೇಶ ಅಂಗಡಿ,ಬಿ ಅರುಣ್ ಕುಮಾರ್ ನಿರ್ವಹಿಸಿದರು…

ವರದಿ. ಅಜಯ್, ಚ. ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend