ಇಂದು ನೋಮ್ ಚಾಮಸ್ಕಿಯವರ 93 ವರ್ಷದ ಹುಟ್ಟುಹಬ್ಬ. ಹಿರಿಯ ಮನುಕುಲದ ಮಾತುಗಾರನಿಗೆ ಶುಭಾಶಯಗಳು…!!!

Listen to this article

ಇಂದು ನೋಮ್ ಚಾಮಸ್ಕಿಯವರ 93 ವರ್ಷದ ಹುಟ್ಟುಹಬ್ಬ. ಹಿರಿಯ ಮನುಕುಲದ ಮಾತುಗಾರನಿಗೆ ಶುಭಾಶಯಗಳು.. ಜಗತ್ತಿನ ಕಾರ್ಪೋರೇಟ್ ಕಪಿಮುಷ್ಟಿಯ ಪ್ರಜಾಪ್ರಭುತ್ವದ ಬಗ್ಗೆ ರಾಜಕೀಯವಾಗಿ ಬಹಳ ದಿಟ್ಟತನದಿಂದ ಮಾತಾಡುತ್ತಾ ಬಂದಿರುವ *ಪಬ್ಲಿಕ್‌ ಇಂಟಲೆಕ್ಚ್ವಲ್. ಒಂದರ್ಥದಲ್ಲಿ ಮನುಕುಲದ ಮಾತುಗಾರ ಪಬ್ಲಿಕ್ ಇಂಟಲೆಕ್ಚವಲ್ಸ್ ಹೊಣೆಗಾರಿಕೆ ಏನು ಎಂದು ಜಗತ್ತಿನ ಎದುರು ಮಂಡಿಸಿ ಲೇಖಕರು, ಪತ್ರಕರ್ತರು, ಕವಿಗಳು, ವಿದ್ವಾಂಸರ ಹೊಣೆಗಾರಿಕೆಯನ್ನು ಎಚ್ಚರಿಸಿದ್ದಾರೆ. ಅಮೇರಿಕಾದ ರಾಜಕೀಯ ಅಧಿಕಾರಶಾಹಿಗೆ ನಿರಂತರ ವಿರೋಧಪಕ್ಷದಂತೆ ಕೆಲಸ‌ ಮಾಡಿದ್ದಾರೆ. ತಮ್ಮದೇ ಸರಿ ಎನ್ನುವ ಸ್ವಯಂಘೋಷಿತ ಅನಾರ್ಕಿಸ್ಟರ ಬಗೆಗೆ ಚಾಟಿ ಬೀಸಿದ್ದಾರೆ. ಯಾವುದೇ ಸಿದ್ದಾಂತಗಳ ಹಂಗಿಲ್ಲದೆ ಸಮಾಜದ ಸ್ವಾಸ್ಥಕ್ಕಾಗಿ ಹೋರಾಡುವಂತರ ಜನಸಮೂಹದ ‘ಲಿಬರ್ಟೇರಿಯನಿಸಂ’ ಬಗ್ಗೆ ಮಾತನಾಡುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ವಿಶ್ವಾಸವೆಂದರೆ ‘ಭಯ’ ಎನ್ನುವಂತಾಗಿದೆ. ಹಾಗಾಗಿ ಜಾಗತಿಕ ರಾಜನೀತಿಯನ್ನು ಹೆಚ್ಚು ಮಾನವೀಯಗೊಳಿಸಬೇಕಿದೆ ಎನ್ನುತ್ತಾರೆ. ಈಗ ಜಗತ್ತಿನಲ್ಲಿ ಅಧಿಕಾರಶಾಹಿ ಮತ್ತು ಕ್ರೋನಿ ಕ್ಯಾಪಿಟಲಿಸ್ಟ್ ಗಳು ತಮ್ಮ ಹಿಡಿತದ ಮಾಧ್ಯಮಗಳ ಮೂಲಕ ತಮಗೆ ಬೇಕಾದ ಜನರ ಒಪ್ಪಿಗೆಯನ್ನು (ಮ್ಯಾನುಪ್ಯಾಕ್ಚರಿಂಗ್ ಕನ್ಸಂಟ್) ಉತ್ಪಾದಿಸಿಕೊಳ್ಳುತ್ತಿದ್ದಾರೆ. ಈ ಉತ್ಪಾದನೆ ಜಾಗತಿಕವಾಗಿ ಮನುಷ್ಯರನ್ನು ಕಡುಕಷ್ಟ ಮತ್ತು ಅತೀವ ದುಃಖದಲ್ಲಿ ಮುಳುಗಿಸುತ್ತದೆ. ಎನ್ನುತ್ತಾರೆ. ಚಾಮಸ್ಕಿ ನಿನ್ನೆ ನಡೆದ Online ಸಂದರ್ಶನದಲ್ಲಿ ಸಮಕಾಲೀನ ಬಿಕ್ಕಟ್ಟುಗಳ ಬಗೆಗೆ ದೀರ್ಘವಾಗಿ ಮಾತನಾಡಿದ್ದರು. ಆಸಕ್ತರು ಆಲಿಸಬಹುದು.
https://youtu.be/Zs-k1npk0Q8..

ವರದಿ. ಅಜಯ್, ಚ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend