ರಂಗಭಾರತಿ ಉಚಿತ ಅಭಿನಯ ಕಾರ್ಯಗಾರದಲ್ಲಿ ರಷ್ಯಾದ ನೀಳ್ಗತೆ ಕುರಿತು ಪ್ರೋ.ಶಾಂತಮೂರ್ತಿ.ಬಿ ಕುಲಕರ್ಣಿ ಅವರಿಂದ ಚರ್ಚೆ !!

Listen to this article

ರಂಗಭಾರತಿ ಉಚಿತ ಅಭಿನಯ ಕಾರ್ಯಗಾರದಲ್ಲಿ ರಷ್ಯಾದ ನೀಳ್ಗತೆ ಕುರಿತು ಪ್ರೋ.ಶಾಂತಮೂರ್ತಿ.ಬಿ ಕುಲಕರ್ಣಿ ಅವರಿಂದ ಚರ್ಚೆ !!

ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ಪಟ್ಟಣದ ನಾಡಿನ ಸಾಂಸ್ಕೃತಿಕ ರಾಯಭಾರಿ ಶ್ರೀ ಎಂ ಪಿ ಪ್ರಕಾಶ್ ರವರ ಕನಸಿನ ಕೂಸು ರಂಗಭಾರತಿ ಯಲ್ಲಿ ಅಭಿನಯ ಕಾರ್ಯಗಾರದ ಭಾಗವಾಗಿ ನಾಟಕ ಪ್ರದರ್ಶನಕ್ಕೆ ‘ನಿಕೊಲಾಯ್ ಗೊಗಲ್ ರವರ ಓವರ್ ಕೋಟ್ ‘ ರಷ್ಯಾ ಮೂಲದ ನೀಳ್ಗತೆ ಯನ್ನ ಅಯ್ದುಕೊಂಡಿದ್ದು ಮೂಲಕತೆಯನ್ನ ಪ್ರೋ. ಶಾಂತಮೂರ್ತಿ ಬಿ ಕುಲಕರ್ಣಿ ಅವರು ಕನ್ನಡಕ್ಕೆ ಅನುವಾಸಿದ್ದು. ಅನುವಾದ ಅನುಭವ ಮತ್ತು ಕತೆಯ ಕುರಿತು ಶಿಭಿರಾರ್ಥಿಗಳೊಂದಿಗೆ ಚರ್ಚೆ ಮಾಡಿದರು.
ರಂಗಭಾರತಿ ಎಂ.ಪಿ. ಪಿ ಅವರ ಕಾಲದಿಂದಲೂ ವಿಭಿನ್ನ ಪ್ರಯೋಗಗಳನ್ನ ಮಾಡುತ್ತಾ ಬಂದಿದೆ. ಅದರಲ್ಲಿ ಅನೇಕ ಅನುವಾದದ ಪರಂಪರೆ ಇದೆ.ಅವು ಯಶಸ್ಸುನ್ನು ಕಂಡಿವೆ. ಈ ಅನುವಾದ ಪರಂಪರೆ ಈಗ ಮುಂದುವರೆಯುತ್ತಿರುವುದು ಸಂತಸದ ಸಂಗತಿ. ರಷ್ಯಾದಲ್ಲಿ ಸದಾ ಹಿಮ ಸುರಿಯುವ ವಾತಾವರಣ ಅಲ್ಲಿ ಬದುಕಲು ಓವರ್ ಕೋಟ್ ಮೂಲಭೂತ ಅವಶ್ಯ. ಮತ್ತು ಅಲ್ಲಿನ ಶ್ರೇಣೀಕೃತ ವ್ಯವಸ್ಥೆಯ ನಡುವೆ ಸಾಧಾರಣ ಮನುಷ್ಯ ಬದುಕನ್ನು ಕತೆ ಒಳಗೊಂಡಿದೆ.ಇದನ್ನ ಸದಾ ಬಿಸಿಲನ್ನೇ ಎದೆ ತೆರೆದು ನೋಡುವ ಬಿಸಿಲನಾಡಿನ ಕಲಾವಿದ ಅಭಿನಯಿಸುತ್ತಿದ್ದಿರಿ.‌ ಇದು ಖಂಡಿತ ಯಶಸ್ವಿ ಆಗುವ ಭತವಸೆಯನ್ನ ವ್ಯಕ್ತಪಡಿಸಿದರು. ಈ ನೀಳ್ಗತೆಯ ರಂಗರೂಪ ಮತ್ತು ನಿರ್ದೇಶನದ ಹೊಣೆಯನ್ನ ಅಜಯ.ಚಲವಾದಿ.ಮತ್ತು ಮಂಜು.ಕೊಂಬಳಿ ಹೊತ್ತಿದ್ದು ನಿಮ್ಮ ಪ್ರಯೋಗಕ್ಕೆ ಶುಭ ಹಾರೈಸಿದರು. ರಂಗಭಾರತಿಯ ಹಿರಿಯ ಕಲಾವಿರಾದ ಜಯಣ್ಣ. ಕೊಟ್ರುಸ್ವಾಮಿ ಪಿ.ಎಂ. ಉಪಸ್ಥಿತರಿದ್ದರು…

ವರದಿ. ಅಜಯ್, ಚ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend