ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮೇಲಿನ ಹಲ್ಲೆ ಖಂಡಿಸಿ ತಹಸೀಲ್ದಾರ್ ಮುಕಾಂತರ ಗೃಹ ಮಂತ್ರಿಗಳಿಗೆ ಮನವಿ…!!!

Listen to this article

ಹೂವಿನಹಡಗಲಿ:-
ಬಂಗ್ಲೆ ಮಲ್ಲಿಕಾರ್ಜುನರ ಮೇಲೆ ನೆಡೆದ ಹಲ್ಲೆಗೆ ಖಂಡಿಸಿ ಮಾನ್ಯ ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿ. ಹಾಗೂ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪತ್ರಕರ್ತ ಮಿತ್ರರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮೇಲಿನ ಹಲ್ಲೆಗೆ ಯತ್ನ ನಿಜವಾಗಿಯೂ ಖಂಡನೀಯವಾಗಿದ್ದು,ಜಿ ಬುಳ್ಳಪ್ಪ ರವರು ಕೂಡಲೇ ಆರೋಪಿಗಳನ್ನು ಬಂದಿಸಿ ಕ್ರಮ ಕೈಗೊಳ್ಳಬೇಕಿದೆ ಎಂದರು. ಮಲ್ಲಿಕಾರ್ಜುನ್ ಬಂಗ್ಲೆಯವರು ಒಬ್ಬ ಹೋರಾಟದ ಮನೋಭಾವ ಇರುವ ಪತ್ರಕರ್ತರಾಗಿದ್ದು, ಅನ್ಯಾಯವನ್ನು ಎಲ್ಲೆ ಕಂಡರು ಅದನ್ನು ಖಂಡಿಸುತ್ತಾರೆ ಹಾಗೂ ಪ್ರತಿಭಟಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ, ಈ ಹಿಂದೆ ರಾಜ್ಯ ಪತ್ರಕರ್ತ ಸಂಘದಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಬಯಲಿಗೆಳೆದು ಸಾಕಷ್ಟು ಶತ್ರುಗಳನ್ನು ಕಟ್ಟಿಕೊಂಡಿದ್ದಾರೆ. ಹಾಗೇ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿಯೂ ಕೂಡ ಪತ್ರಕರ್ತ ಸಂಘದಿಂದ ಶೋಷಿತರಾದ ಪತ್ರಕರ್ತರ ಬೆಂಬಲಕ್ಕೂ ನಿಂತಿರುವ ಬಂಗ್ಲೆಯವರು ಒಬ್ಬ ಹುಟ್ಟು ಹೋರಾಟಗಾರ ಎಂದರೆ ತಪ್ಪಲ್ಲ. ಇವರ ಹಾಗೂ ಇವರ ಕುಟುಂಬದ ಮೇಲಿನ ಹಲ್ಲೆಗೆ ಯತ್ನ ಪ್ರಕರಣವನ್ನು ಹಗುರವಾಗಿ ಪರಿಗಣಿಸದೆ ಕೂಡಲೆ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳನ್ನು ಬಂದಿಸಬೇಕಿದೆ ಹಾಗೂ ಮಲ್ಲಿಕಾರ್ಜುನ್ ಬಂಗ್ಲೆಯವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ತಾಸಿಲ್ದಾರರಿಗೆ ಮನವಿಮಾಡಿಕೊಳ್ಳಲಾಯಿತು,ಈ ಸಂದರ್ಭದಲ್ಲಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಗೌರವ ಅಧ್ಯಕ್ಷರಾದ ಜಿ ಬುಳ್ಳಪ್ಪ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಹೆಚ್ ಹನುಮಂತಪ್ಪ. ಮತ್ತು ಮೌಲ್ಯಸಮಾಜ ಪತ್ರಿಕೆ ಸಂಪಾದಕರಾದ ಎಂ ಗೋಣಿಸ್ವಾಮಿ,ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಂ ಚಿದಾನಂದ, ಜಿ ಬಸವರಾಜ,ಎಸ್ ಪಕ್ಕಿರೇಶ,ಸಿ ಹೆಚ್ ಶ್ರೀಧರ,ಕೆ ಶೇಖಪ್ಪ ಮಂಜುನಾಥ ಮಡ್ಡಿ ಇನ್ನು ಮುಂತಾದವರು ಉಪಸ್ಥಿತರಿದ್ದರು….

ವರದಿ. ಅಜಯ್, ಚ. ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend