ಶಿವಶರಣ ಬಸವಣ್ಣರನ್ನು ನಾವು ನೋಡಿಲ್ಲ ನಮಗೆ ನಮ್ಮ ಪ್ರಾಚಾರ್ಯರು ಮತ್ತು ನಮ್ಮಗುರುಗಳೇ ನಮಗೆ ಬಸವಣ್ಣರಿದ್ದಂತೆ…!!!

Listen to this article

ಶಿವಶರಣ ಬಸವಣ್ಣರನ್ನು ನಾವು ನೋಡಿಲ್ಲ ನಮಗೆ ನಮ್ಮ ಪ್ರಾಚಾರ್ಯರು ಮತ್ತು ನಮ್ಮಗುರುಗಳೇ ನಮಗೆ ಬಸವಣ್ಣರಿದ್ದಂತೆ.

ಹರಪನಹಳ್ಳಿ:
ಪಟ್ಟಣದ ಹೊರವಲಯದಲ್ಲಿರುವ ಹೊಸಪೇಟೆ ರಸ್ತೆಗೆ ಹೊಂದಿಕೊಂಡಿರುವ ಶ್ರೀ ನಂದಿ ರೆಸಾಟ್೯ನಲ್ಲಿ 1980-82ನೇ ಸಾಲಿನ 150 ಜನ ಶಿಕ್ಷಕ ತರಬೇತಿಯ ಹಳೆ ವಿದ್ಯಾರ್ಥಿಗಳ ವೃಂದದ ಶಿಕ್ಷಕ ತರಬೇತಿ ಕೇಂದ್ರ ಹರಪನಹಳ್ಳಿ ಇವರ ವತಿಯಿಂದ ಗುರು
ವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲ
ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ ಶಿವಮೂರ್ತಯ್ಯ ಟಿಎಂಎಇ ಶಿಕ್ಷಕರ ತರಬೇತಿ ಕೇಂದ್ರದ ನಿವೃತ್ತ ಪ್ರಾಚಾರ್ಯರು ಮಾಡಿದರು. ಅವರು ಉದ್ಘಾಟನಾ ನುಡಿಯಲ್ಲಿ ಮಾತನಾಡಿ 1970 ರಲ್ಲಿ ಟಿಎಂಎಇ ಶಿಕ್ಷಕರ ತರಬೇತಿ ಕೇಂದ್ರವು ಪ್ರಾರಂಭವಾಯಿತು. ಆ ತರಬೇತಿ ಕೇಂದ್ರದಲ್ಲಿ ಅಲ್ಲಿಂದ ಇಲ್ಲಿಯವರೆಗೆ ಅನೇಕ ಸಾವಿರಾರು ವಿದ್ಯಾರ್ಥಿಗಳು ಟಿಸಿಎಚ್ ತರಬೇತಿಯನ್ನು ಮುಗಿಸಿಕೊಂಡು ಹೋಗಿದ್ದಾರೆ ಅದರಲ್ಲಿ 1980-82ನೇ ಸಾಲಿನಲ್ಲಿ ಟಿಸಿ ಎಚ್ ತರಬೇತಿ ಮುಗಿಸಿಕೊಂಡು ಹೋದವರು ನೀವು ಆಗಿದ್ದೀರಿ ಈ ದಿನ ನಿಮ್ಮ ಮುಖಗಳನ್ನು ನೋಡಿದಾಗ ಅಂದಿನ ವಿದ್ಯಾರ್ಥಿಗಳಾಗಿ ನನಗೆ ನೀವು ಕಾಣುತ್ತಿದ್ದೀರಿ ನಿಮ್ಮ ಮುಖಗಳೆಲ್ಲ ನನಗೆ ನೆನಪಿವೆ ಆದರೆ ಹೆಸರುಗಳು ಮಾತ್ರ ನೆನಪಾಗುತ್ತಿಲ್ಲ ನೀವೆಲ್ಲರೂ ನನ್ನ ಶಿಷ್ಯರೆಂದು ಗುರುತಿಸಬಲ್ಲೆ ಈ ಸಂದರ್ಭದಲ್ಲಿ ನಿಮ್ಮೆಲ್ಲರನ್ನು ನೋಡಿದಾಗ ನನಗೆ ತುಂಬಾ ಆನಂದವಾಗಿದೆ ಎಲ್ಲರೂ ಉನ್ನತ ಹುದ್ದೆಯಲ್ಲಿ ಇದ್ದೀರಿ ವರ್ತಕರಾಗಿದ್ದೀರಿ, ರೈತರಿದ್ದೀರಿ ವಿವಿಧ ಇಲಾಖೆಯಲ್ಲಿ ಇದ್ದೀರಿ, ಈ ಸಂದರ್ಭದಲ್ಲಿ ನಿಮ್ಮ ಜೊತೆಯಲ್ಲಿ ತರಬೇತಿ ಪಡೆದ ಹಾಗೂ ನಿಮ್ಮನ್ನ್ ಆಗಲಿದೆ ಸ್ನೇಹಿತರನ್ನು ಸ್ಮರಿಸೋಣ ಎಂದರು. ನೀವು ಆಗ ಓದುತ್ತಿದ್ದ ಸಮಯದಲ್ಲಿ ನಿಮ್ಮ ಪೋಷಕರಿಗೆ ಜೀವನ ಮಾಡುವುದು ಕಷ್ಟದ ಜೀವನವಾಗಿತ್ತು. ನನ್ನದೊಂದು ಕಿವಿಮಾತು ಬೆತ್ತದ ಹಿಂದೆ ಕಹಿ ಇರುತ್ತದೆ ಅದರ ಹಿಂದೆ ಸಿಹಿ ಇರುತ್ತದೆ ಮಾತೃಭಾಷೆಗೆ ಹೆಚ್ಚಿನ ಒತ್ತನ್ನು ನೀಡಿ ಎಂದರು.

ಸಾಹಿತಿ ಚನ್ನಬಸಪ್ಪ ಹುಲಿಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಟಿಸಿಎಚ್ ತರಬೇತಿಯು ಮನುಷ್ಯರ ಪ್ರಗತಿಯ ದೂತಕವಾಗಿದೆ ಹಿಂದಿನ ದಿನಗಳಲ್ಲಿ ಶಿಕ್ಷಕರು ಮುಂದೆ ಇರುತ್ತಿದ್ದರು ಅದರೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳೆ ಮುಂದೆ ಶಿಕ್ಷಕರ ಅವರಿಂದ ಎನ್ನುವಂತಾಗಿದೆ.ನಾವು ತರಬೇತಿ ಪಡೆಯುವಂತ ದಿನಗಳಲ್ಲಿ ಊಟವಿಲ್ಲದೆ ಎಷ್ಟು ಬಾರಿ ಕಾಲೇಜಿಗೆ ಹೋಗಿರುವ ಅಲ್ಲದೆ ಹಲವು ರಾತ್ರಿಗಳು ಊಟವಿಲ್ಲದೆ ಮಲಗಿದ್ದು ಉಂಟು ಎಂದರು. ಒಂದು ಸಂತೋಷದ ವಿಷಯವೆಂದರೆ. ಈಗ 40ವರ್ಷದ ನಂತರ ನಾವು 150 ಜನರು ಒಬ್ಬರಿಗೊಬ್ಬರು ಇಲ್ಲಿ ಸೇರಲು ಶ್ರಮಿಸಿದ ನಮ್ಮೆಲ್ಲ ಸಹೋದರರಿಗೂ ಸಹೋದರಿಯರಿಗೂ ಮತ್ತು ಸ್ನೇಹಿತರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಈ ಒಂದು ಮಧುರ ಕ್ಷಣ ನನ್ನ ಪ್ರಾಣ ಇರುವವರೆಗೂ ಮರೆಯಲಾರೆ ಎಂದರು.

ಕನ್ನಡ ಉಪನ್ಯಾಸಕರಾದ ತಿಪ್ಪೇಸ್ವಾಮಿಯವರ ಮಾತನಾಡಿ ಗುರು ಮತ್ತು ಶಿಷ್ಯರ ಸಂಬಂಧಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಅದೊಂದು ಅಪಾರ ಸಂಬಂಧ ಎಷ್ಟು ಹಣ ಕೊಟ್ಟರು ಸಿಗಲಾರದು ಸಂಪತ್ತಾಗಿದೆ.ಗುರುಗಳಾದವರು ಗ್ರಾಮೀಣ ಪ್ರದೇಶದಲ್ಲಿ ತಮ್ಮ ವೃತ್ತಿ ಮಾಡುವಾಗ ಅಲ್ಲಿದ್ದ ಅಜ್ಞಾನ ಅಂಧಕಾರ ಮೌಢ್ಯತೆಯನ್ನು ತೊಳೆಯಬೇಕು ಅದುವೇ ಶಿಕ್ಷಕರ ಕರ್ತವ್ಯ ಎಂದರು.
ಕೆಎಂ ಪ್ರಸಾದಯ್ಯ ಉಪನ್ಯಾಸಕರು ಮಾತನಾಡಿ ಹಿಂದೆ ನೀವು ವಿದ್ಯಾರ್ಥಿಗಳಾಗಿದ್ದಾಗ ನಿಮಗೆ ವಿದ್ಯಾರ್ಥಿಗಳು ಎನ್ನುತ್ತಿದ್ದರು ಈಗ ನಿಮಗೆ ಜವಾಬ್ದಾರಿ ಬಂದು ಪೋಷಕರ ಸ್ಥಾನದಲ್ಲಿದ್ದೇವೆ ಹಲವು ಜನ ಶಿಕ್ಷಕರಾಗಿದ್ದರು ಹಲವು ಜನ ವರ್ತಕರ ಆಗಿದ್ದೀರಿ ಇನ್ನೂ ಕೆಲವು ಜನ ಉಪನ್ಯಾಸಕರಾಗಿದ್ದೀರಿ ಇನ್ನೂ ಕೆಲವು ಜನ ರೈತರ ಆಗಿದ್ದೀರಿ ಇನ್ನೂ ಕೆಲವು ಜನ ರಾಜಕೀಯ ಮುಖಂಡರು ಆಗಿದ್ದೀರಿ ಮತ್ತು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದೀರಿ ನಾನು ಹೇಳುವುದು ಒಂದೇ ಎಲ್ಲೇ ಇರಿ ಹೇಗೆ ಇರಿ ಆರೋಗ್ಯವಂತರಾಗಿ ಇರಿ ಇನ್ನೂ ನೂರಾರು ಕಾಲ ಸುಖವಾಗಿ ಬಾಳಿರಿ ಎಂದರು.

ಶಿಕ್ಷಣ ಇಲಾಖೆ ಉಪ ನೀರ್ದೆಶಕರಾದ ತಂಗೋಡ್ ರವರು ಮಾತನಾಡಿ ಭೂಮಿ ದುಂಡಾಗಿದೆ ಎಂದು ನಾವು ತಿಳಿಯಬೇಕು ಏಕೆಂದರೆ ನಲವತ್ತು ವರ್ಷ ಕಳೆದ ಮೇಲೆ ನಮ್ಮ ಗುರುಗಳು ನನ್ನ ಬುಜದ ಮೇಲೆ ಕೈಯಿಟ್ಟಾಗ ನನ್ನ ಜನ್ಮ ಸಾರ್ಥಕವಾಯಿತು ಎಂದು ನನಗೆ ಭಾಸವಾಗಿದೆ ಆನಂದ ಬೇರೆಲ್ಲೂ ನನಗೆ ಸಿಕ್ಕಿಲ್ಲ ಈ ಮೊದಲ ಕ್ಷಣವನ್ನು ಕಲ್ಪಿಸಿದ ಕಾರ್ಯಕಾರಿ ಸಮಿತಿಗೆ ನಾನು ಚಿರಋಣಿ ಎಂದರು. ಹತ್ತು ವರ್ಷದ ಹಿಂದೆ ನಾವೇನ್ ಆಗಿದ್ದೇವು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ವಿನಹ ಈಗ ನಾವು ಯಾವ ಹುದ್ದೆ ಎಲ್ಲಿದ್ದೇವೆ ಎಂಬುದನ್ನು ತೋರಿಸಬಾರದು ಸ್ನೇಹಕ್ಕೆ ಬೆಲೆ ನೀಡಬೇಕು ವಿನಹ ಹುದ್ದೆಗೆ ಅಲ್ಲ ಶ್ರೀಕೃಷ್ಣ ಪರಮಾತ್ಮ ತನ್ನ ಸ್ನೇಹಿತ ಸುಧಾಮನನ್ನು ಅಪ್ಪಿ ಆಲಂಗಿಸಿ ಕೊಂಡಂತೆ ನಾವು ಸಹ ಹಾಗೆ ಇರಬೇಕು ಸ್ನೇಹಕ್ಕೆ ಬೆಲೆ ಕೊಡಬೇಕು ಎಂದರು.ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ಅದನ್ನು ನಮಗೆ ನೀಡಿದ ಗುರುಗಳನ್ನು ಮರೆಯಬಾರದು ಶಿವಶರಣ ಬಸವಣ್ಣರನ್ನು ನಾವು ನೋಡಿಲ್ಲ ನಮ್ಮ ಪ್ರಾಚಾ
ರ್ಯರನ್ನು ಮತ್ತು ನಮ್ಮಗುರುಗಳನ್ನು ನೋಡಿದರೆ ನಮಗೆ ಅವರೇ ಬಸವಣ್ಣರಿದ್ದಂತೆ ಎಂದರು.

ಸೊರಟೂರ್ ನಿಂಗನಗೌಡ್ ರವರು ಮಾತನಾಡಿ ನಾನು ಭಾಷಣಕಾರ ನಲ್ಲ ಕೆಲಸಗಾರ ಏನಾದರೂ ಕೆಲಸವಿದ್ದರೆ ಹೇಳಿ ಮಾಡುತ್ತೇನೆ ಭಾಷಣ ಮಾಡಲು ಬರುವುದಿಲ್ಲ ನಾವು 40 ವರ್ಷಗಳ ಹಿಂದೆ ನೋಡಿದ್ದು ಆಗೋ ತರಗತಿಗಳಿಗೆ ಹೋಗಿದ್ದು ಆಗಿನ ಪರಸ್ಥಿತಿ ನನ್ನ ಕಣ್ಮುಂದೆ ಬಂದಿದೆ ನಮ್ಮ ನಿಮ್ಮ ಕೊನೆಯ ಉಸಿರಿರುವವರೆಗೂ ಹೀಗೆ ಸಂತೋಷದಿಂದ ಇರೋಣ ಎಂದರು.

ಕಾರ್ಯಕ್ರಮದಲ್ಲಿ ಎಚ್ ಕೆ ಉಮಾಪತಿ ನಿವೃತ್ತ ಶಿಕ್ಷಕರು, ಹಾಗೂ ಉಪನ್ಯಾಸಕರಾದ ಮಹೇಂದ್ರ ಬಾರಿಕರ್, ಮತ್ತು ನಿವೃತ್ತ ಮುಖ್ಯಗುರುಮಾತೆಯಾದ ಶಕುಂತಲಾ ಎಚ್ಎಸ್ ರವರು ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸುಮಿತ್ರಾಬಾಯಿ ಮಾತನಾಡಿ ನಮಗೆ ಪಾಠ ಮಾಡಿದ ಉಪನ್ಯಾಸಕರುಗಳ ವೇದಿಕೆಯಲ್ಲಿ ಅಧ್ಯಕ್ಷತೆ ಸ್ಥಾನ ವಹಿಸಿಕೊಂಡಿರುವುದು ನನ್ನ ಸೌಭಾಗ್ಯ ಎಂದರು.

ಶಿಕ್ಷಕರ ತರಬೇತಿ ಹಳೆವಿದ್ಯಾರ್ಥಿಗಳ ಕಾರ್ಯಕಾರಿ ಸಮಿತಿಯ
ಅಧ್ಯಕ್ಷರು ಆರ್ ಸುಮಿತ್ರ, ಉಪಾಧ್ಯಕ್ಷರು ಪಿ ವಿರುಪಾಕ್ಷಪ್ಪ, ಸಂಘಟನಾ ಕಾರ್ಯದರ್ಶಿ ಗಳು ಎಆರ್ ಮಂಜಪ್ಪ, ಎಚ್ಎಂ ಪ್ರಕಾಶ್.,ಬಿ ಪಾರ್ವತಿ.ಚಂದ್ರಶೇಖರಯ್ಯ,ಮುರುಗೇಶ್,ಆಂಜನೇಯ,ಮಹಾರುದ್ರಸ್ವಾಮಿ ಎಚ್ಎಮ್ಖಜಾಂಚಿ ಜಿ ಗುರುಶಾಂತಪ್ಪ, ಸದಸ್ಯರುಗಳಾದ ಕರಿಬಸಮ್ಮ, ಎನ್ ಬಿ ಸೊರಟೂರ್, ಟಿ ಲಕ್ಷ್ಮೀದೇವಿ,ಜೆ ಕೊಟ್ರೇಶ್ ಜೆ ಸಿದ್ದಮ್ಮ ಟಿ ಬಸವನಗೌಡ, ಜೆ ಪ್ರಭಾಕರ್, ಸುರೇಶ್ ಶೆಟ್ಟಿ, ಚನ್ನಬಸಪ್ಪ,ಒಳಗೊಂಡಿತ್ತು.

ಈ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷರಿಗೂ ಉದ್ಘಾಟಕರಿಗೂ ಮುಖ್ಯ ಅತಿಥಿಗಳು ವೇದಿಕೆಯ ಮೇಲೆ ಶಾಲು ಹೊದಿಸಿ ಹಾರ ಹಾಕಿ ಪುಸ್ತಕಗಳನ್ನು ಮತ್ತು ನೆನಪಿನ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಲಾಯಿತು. ಹಾಗೂ ಬಂದಿರುವ ಎಲ್ಲಾ ಸ್ನೇಹಿತ ಸ್ನೇಹಿತೆಯರಿಗೆ ಪುಸ್ತಕ, ನೆನಪಿನಕಾಣಿಕೆ ಮತ್ತು ಎಲ್ಲರೂ ಇರುವ ಭಾವಚಿತ್ರವನ್ನು ಪ್ರತಿಯೊಬ್ಬರಿಗೂ ನೀಡಲಾಯಿತು. ಎಲ್ಲರೂ ಒಟ್ಟಿಗೆ ಕುಳಿತು ಸಿಹಿ ಒಬ್ಬಟ್ಟಿನ ಹೋಳಿಗೆ ಊಟ ಸವಿದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend