ಮುದ್ದೆಬಿಹಾಳ್ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು…!!!

Listen to this article

ಮುದ್ದೆಬಿಹಾಳ್ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ವರದಿಗಾರರ ಮೇಲಿನ ಗುಂಡಾವರ್ತನೆಯನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.

ಹರಪನಹಳ್ಳಿ : (ವಿಜಯನಗರ ಜಿಲ್ಲೆ) :- ಕನ್ನಡಪ್ರಭ ವರದಿಗಾರರ ಮೇಲೆ ಗುಂಡಾವರ್ತನೆ ನಡೆಸಿದ ಮುದ್ದೆಬಿಹಾಳ್ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿಯವರ ಸರ್ವಾಧಿಕಾರ ಧೋರಣೆ ಮತ್ತು ಗುಂಡಾವರ್ತನೆಯನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಾದ ಟಿ.ವಿ ಪ್ರಕಾಶರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಐಬಿ ವೃತ್ತದಿಂದ ಮಿನಿ ವಿಧಾನ ಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಮುದ್ದೆಬಿಹಾಳ್ ಶಾಸಕ ಎ.ಎಸ್ ಪಾಟೀಲ ನಡಹಳ್ಳಿಯವರ ವಿರುದ್ದ ಘೋಷಣೆಗಳನ್ನು ಕೂಗುತ್ತ ಬೃಹತ್ ಪ್ರತಿಭಟಿಸಿ ಹರಪನಹಳ್ಳಿ ಉಪ ವಿಭಾಗದ ವಿಭಾಗಾಧಿಕಾರಿಗಳಾದ ಟಿ.ವಿ ಪ್ರಕಾಶ್‌ರವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮಾಳ್ಗಿಯವರು ಮಾತನಾಡಿ ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎತ್ತಿ ತೋರಿಸಿ, ಅವುಗಳು ಬಗೆಹರಿಯುವಂತೆ ಮಾಡುವುದು ಪತ್ರಕರ್ತರ ಹಕ್ಕು ಮತ್ತು ಕರ್ತವ್ಯವಾಗಿದೆ. ಆದರೆ ಮುದ್ದೇಬಿಹಾಳ್ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ತಮ್ಮ ತಪ್ಪನ್ನು ಮರೆಮಾಚಲು ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ:- ಇದೇ ಅಕ್ಟೋಬರ್ 17ರಂದು ನಾಡಿನ ಪ್ರಮುಖ ದಿನಪತ್ರಿಕೆಯಾದ ಕನ್ನಡಪ್ರಭದಲ್ಲಿ ಮುದ್ದೆಬಿಹಾಳ್ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳಿಗೆ ಮಂಜೂರಾದಂತಹ 19ಕೋಟಿ ರೂ.ಗಳ ಕಾಮಗಾರಿಗಳನ್ನು ತಾಲೂಕಿನ ಬೇರೆ ರಸ್ತೆ ಕಾಮಗಾರಿಗಳಿಗೆ ಬಳಕೆಯಾದ ಹಿನ್ನಲೆಯ ಕುರಿತಂತೆ ಕನ್ನಡಪ್ರಭ ಪತ್ರಿಕೆಯಲ್ಲಿ “ರಸ್ತೆಯ ಅನುಧಾನ ವರ್ಗಾವಣೆ ಖಂಡನೆ” ಎಂಬ ಶೀರ್ಷಿಕೆಯೊಂದಿಗೆ ಬಂದಂತಹ ವರದಿಗೆ ತೀವ್ರ ಅಕ್ರೋಶಗೊಂಡಂತಹ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ್ ತಾಲೂಕಿನ ಶಾಸಕರಾದ ಎ.ಎಸ್.ಪಾಟೀಲ್ ನಡಹಳ್ಳಿಯವರು ಸರ್ವಾಧಿಕಾರ ಧೋರಣೆ ಹಾಗೂ ವರದಿಗಾರನಿಗೆ ಮೊಬೈಲ್ ಮೂಲಕ ಜೀವ ಬೆದರಿಕೆ ಹಾಕಿದ್ದಲ್ಲದೇ ಬೋಳಿಮಗನೇ ಎಂಬ ಅವಾಚ್ಯ ಶಬ್ದಗಳನ್ನು ಉಪಯೋಗಿಸಿರುವುದು ನಿಜಕ್ಕೂ ಇದು ಮಾಧ್ಯಮ ಕಗ್ಗೋಲೆಯೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

ಇಡೀ ರಾಜ್ಯದ ಬಹುತೇಕ ವರದಿಗಾರರಿಗೆ ಸೇವಾ ಭದ್ರತೆಯ ಜೊತೆಗೆ ಪ್ರಾಣ ರಕ್ಷಣೆ ಇಲ್ಲದಂತಾಗಿರುವ ಇಂದಿನ ಸ್ಥಿತಿಯಲ್ಲಿ ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾದ ರವಿ ಹೆಗ್ಡೆಯವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಾಕ್ಷಿ ಆಧಾರಗಳ ಸಮೇತ ತಪ್ಪಿತಸ್ಥ ಸ್ಥಾನದಲ್ಲಿ ನಿಂತಿರುವ ಶಾಸಕರಾದ ಎ.ಎಸ್ ಪಾಟೀಲ ನಡಹಳ್ಳಿ ಮೇಲೆ ಕೂಡಲೇ ಎಫ್.ಐ.ಆರ್ ದಾಖಲಿಸಿ ಪತ್ರಕರ್ತರ ರಕ್ಷಣೆ ಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನರವರು ಹಾಗೂ ಐ.ಎಫ್.ದಬ್ಲೂ ಜೆ ಯ ರಾಷ್ಟ್ರೀಯ ಅಧ್ಯಕ್ಷರು ಕನ್ನಡ ಸುದ್ದಿ ಸಂಪದಾಕರಾಗಿ ಕಾರ್ಯನಿರ್ವ ಹಿಸುತ್ತಿರುವ ಬಿ.ವಿ ಮಲ್ಲಿಕಾರ್ಜುನಯ್ಯನವರು ಈ ಕೂಡಲೇ ಶಾಸಕರ ಮೇಲೆ ಕೇಸ್ ದಾಖಲಾಗಿ ಬಂಧನವಾಗುವವರೆಗೂ ಹೋರಾಟದ ಮುಂದಾಳತ್ವ ವಹಿಸುವುದರ ಜೊತೆಗೆ ಪತ್ರಕರ್ತರ ಬೆನ್ನಲುಬಾಗಿ ನಿಲ್ಲಬೇಕೆಂದು ಮನವಿ ಕೊಡುವುದರ ಮೂಲಕ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿಯವರು ಕೂಡಲೇ ಶಾಸಕರ ಮೇಲೆ ಐ.ಪಿ.ಸಿ504 ಪತ್ರಕರ್ತರ ಜೀವ ಬೆದರಿಕೆ ಹಿನ್ನಲೆಯ ಐಪಿಸಿ 506ಕೇಸ್ ದಾಖಲಾಗುವಂತೆ ಕ್ರಮ ವಹಿಸಬೇಕು ಹಾಗೂ ಶಾಸಕರ ರಾಜಿನಾಮೆ ಪಡೆದು ಮಾದ್ಯಮರಂಗದ ಪ್ರತಿನಿಧಿಗಳಿಗೆ ಆಗಿರುವ ಅನ್ಯಾಯವನ್ನು ಈ ಕೂಡಲೇ ಸರಿಪಡಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಆಗ್ರಹಿಸುತ್ತದೆ ಎಂದರು.

 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಸಮಿತಿ ಸದಸ್ಯರಾದ ಹುಣ್ಸಿಹಳ್ಳಿ ಕೊಟ್ರೇಶ್ ಮಾತನಾಡಿ ಸುದ್ದಿ ಬರೆಯುವುದು ಪತ್ರಕರ್ತರ ಹಕ್ಕು ಅದನ್ನು ಯಾರು ಕಸಿದುಕೊಳ್ಳಲು ಅಥವಾ ಪತ್ರಕರ್ತರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ, ಗೂಂಡಾಗಿರಿ, ದುರ್ವರ್ತನೆ, ದಬ್ಬಾಳಿಕೆ ಹಾಗೂ ದೌರ್ಜನ್ಯವೆಸಗುವುದು ನಾಗರಿಕ ಸಂಸ್ಕೃತಿಯೂ ಅಲ್ಲ ಹಾಗಾಗಿ ವಿಜಯಪುರ ಜಿಲ್ಲೆ ಮುದ್ದೆಬಿಹಾಳ್ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಯವರ ಪತ್ರಕರ್ತರ ಮೇಲಿನ ಗೂಂಡಾವರ್ತನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಮುದ್ದೆಬಿಹಾಳದ ವರದಿಗಾರರಾದ ನಾರಾಯಣ ಮಾಯಾಚಾರಿ ಜೊತೆಗೆ ಕನ್ನಡಪ್ರಭ ಸ್ಥಾನಿಕ ಸಂಪಾದಕರಾದ ಬ್ರಹ್ಮನಂದನಿಗೂ ಶಾಸಕರು ತಮ್ಮ ಪೋನಿನ ಸಂಭಾಷಣೆಯಲ್ಲಿ ನಿಂಧಿಸುತ್ತಿರುವುದನ್ನು ನೋಡಿದರೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಕಾರ್ಯ ನಿರ್ವಹಿಸಬೇಕಾದ ಮಾಧ್ಯಮದವರು ಕೆಲ ಕುತಂತ್ರಿ ಹಾಗೂ ಗುಂಡಾವರ್ತನೆಯ ಜನಪ್ರತಿನಿಧಿಗಳ ಮಧ್ಯೆ ನಲಗುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಉಪಾಧ್ಯಕ್ಷರಾದ ಬಿ.ನಾಗರಾಜ್, ಸಹ ಕಾರ್ಯದರ್ಶಿಯಾದ ಹೆಚ್.ಕೆ ಅರ್ಜುನ, ಸಂಘಟನಾ ಕಾರ್ಯದರ್ಶಿಯಾದ ಬಿ.ರಮೇಶ್, ಕೋಶಾಧ್ಯಕ್ಷರಾದ ಬಸವರಾಜ್ ದೊಡ್ಮನಿ, ಪದಾಧಿಕಾರಿಯಾದ ಶಬ್ಬೀರ್, ಪ್ರತಾಪ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend