ವಿಜಯ ನಗರ ಜಿಲ್ಲಾ ಹರಪನಹಳ್ಳಿ ತಾಲೂಕ ವಾಲ್ಮೀಕಿ ಸಮಾಜದ 7.5% ಮೀಸಲಾತಿಗಾಗಿ ಮೇ 20 ರಂದು ಹೋರಾಟ…!!!

Listen to this article

ವಿಜಯ ನಗರ ಜಿಲ್ಲಾ ಹರಪನಹಳ್ಳಿ ತಾಲೂಕ ವಾಲ್ಮೀಕಿ ಸಮಾಜದ 7.5% ಮೀಸಲಾತಿಗಾಗಿ ಮೇ 20 ರಂದು ಹೋರಾಟ –

ಹರಪನಹಳ್ಳಿ : ಮೇ.15. ವಾಲ್ಮೀಕಿ ನಾಯಕ ಸಮಾಜಕ್ಕೆ 7.5 % ಮೀಸಲಾತಿಗಾಗಿ ಆಗ್ರಹಿಸಿ ಸಮಾಜದ ಪ್ರಸನ್ನನಂದಾ ಮಹಾಸ್ವಾಮಿಗಳು ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಹೋರಾಟ ಮಾಡುತ್ತಿದ್ದರೂ, ಸಹ ಕನಿಷ್ಠ ಸೌಜನ್ಯ ತೋರಿಸದ ಸರಕಾರದ ನಡೆಯನ್ನು ವಾಲ್ಮೀಕಿ ಸಮಾಜ ಉಗ್ರವಾಗಿ ಖಂಡಿಸುತ್ತೇವೆ ಎಂದು ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷರಾದ ಉಚ್ಚೆಂಗೆಪ್ಪ.ಕೆ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಾಜದ ಜಂಟಿಯಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ 7.5% ಮೀಸಲಾತಿ ಕೊಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾತು ಕೊಟ್ಟ ಯಡಿಯೂರಪ್ಪ ಮತ್ತು ಶ್ರೀರಾಮುಲು ಈಗ ಮಾತು ಈಡೇರಿಸದೇ ವಚನ ಭ್ರಷ್ಟಾರಾಗಿದ್ದಾರೆ ಎಂದರು.

ಮೇ 20 ರಂದು ಹೋರಾಟಕ್ಕೆ ಬೆಂಬಲಿಸಿ ಇಡೀ ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಿಸಲಾತಿಗಾಗಿ ಆಗ್ರಹಿಸಿ ಎಸ್ ಸಿ ,ಎಸ್ ಟಿ ಜನಾಂಗದಿಂದ ಬೃಹತ್ ಪ್ರಮಾಣದಲ್ಲಿ ಹರಪನಹಳ್ಳಿ ತಾಲ್ಲೂಕಿನ ಮಧಕರಿ ವೃತ್ತದಿಂದ ಮೆರವಣಿಗೆ ಮುಖಾಂತರ ಮಾನವ ಸರಪಳಿ ಮೂಲಕ ತಹಶೀಲ್ದಾರರ ಮೂಲಕ ಸರಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು.

7.5 ಮೀಸಲಾತಿಗಾಗಿ ಆಗ್ರಹಿಸಿ ಸಮಾಜದ ಸ್ವಾಮೀಜಿಗಳು ಬೆಂಗಳೂರು ಫ್ರಿಡಂ ಪಾರ್ಕನಲ್ಲಿ ಹೋರಾಟ ಮಾಡುತ್ತಿದ್ದು ಮೇ 20ಕ್ಕೆ 100 ದಿನಗಳಾಗಲಿದ್ದು ಸರಕಾರದ ನಿರ್ಲಕ್ಷ್ಯದ ವಿರುದ್ಧ ಸ್ವಾಮಿಗಳ ಹೋರಾಟಕ್ಕೆ ಬೆಂಬಲಿಸಿ ಮೇ 20ರಂದು ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ.

ಸಮಾಜದ ಬಗ್ಗೆ ಕಳಕಳಿ ಇರುವ ಸಮಾಜದ ಚುನಾಯಿತ ಪ್ರತಿನಿಧಿಗಳು ಪಕ್ಷಭೇದ ಮರೆತು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಮಾಜದ ಮುಖಂಡರಾದ ಉಚ್ಚೆಂಗೆಪ್ಪ . ಕೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಉಚ್ಚೆಂಗೆಪ್ಪ . ಕೆ ಹಾಗೂ ದಲಿತ ಸಮುದಾಯದ ಮುಖಂಡರು. ಪ್ರತಾಪ್ ಸಿ, ಹನುಮಂತಪ್ಪ ಯರಬಳ್ಳಿ, ಎಂ.ವಿ.ಅಂಜಿನಪ್ಪ ಲಕ್ಕಳ್ಳಿ ಹನುಮಂತಪ್ಪ , ಕಂಚಿಕೇರಿ ವಿಜಯಲಕ್ಷ್ಮೀ, ಸಣ್ಣಹಾಲಪ್ಪ ರವರುಗಳು ಮೀಸಲಾತಿ ಕುರಿತು ಮಾತನಾಡಿದರು. ಇನ್ನೂ ಕೆಲವು ಮುಖಂಡರು
ಪತ್ರಿಕಾಗೋಷ್ಠಿಯಲ್ಲಿ ಇದ್ದರು..

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend