ಅಧಿಕಾರಿಗಳ ನಿರ್ಲಕ್ಷದಿಂದ ಆಕ್ರಮ ಮರಳು ದಂಧೆ – KRS ಪಕ್ಷ ಆರೋಪ…!!!

Listen to this article

ಅಧಿಕಾರಿಗಳ ನಿರ್ಲಕ್ಷದಿಂದ ಆಕ್ರಮ ಮರಳು ದಂಧೆ –
KRS ಪಕ್ಷ ಆರೋಪ

ಸಿಂಧನೂರು: ತಾಲೂಕಿನ ಸುತ್ತ ಮುತ್ತಲ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಇದರ ಭಾಗವಾಗಿ ಇಂದು ಹಾಡುಹಗಲೇ ತಾಲೂಕಿನ ಒಳಬಳ್ಳಾರಿ ರಸ್ತೆ ಮಾರ್ಗವಾಗಿ ಮರಳುನ್ನ ಸಾಗಿಸುತ್ತಿದ್ದ ಒಂದು ಟ್ರಾಕ್ಟರ್ ಕೆ. ಆರ್. ಎಸ್ ಪಕ್ಷಕ್ಕೆ ಸಿಕ್ಕು ಬಿದ್ದಿದ್ದು ಅಕ್ರಮ ಮರಳು ಸಾಗಾಣಿಕೆ ದಂಧೆ ಸಾಮಾನ್ಯ ವಾಗಿದ್ದು ಇಂತಹ ಅವ್ಯಹಾರವನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ವಿಫಲ ಆಗಿದ್ದು , ಮರಳು ತಪಾಸಣೆ ಕೇಂದ್ರಗಳನ್ನು ತೆರೆಯದ ಕಾರಣದಿಂದ ಆಕ್ರಮ ಮರಳು ಗಣಿಗಾರಿಕೆ ಮಾಲೀಕರು ಯಾವುದೇ ಅಧಿಕಾರಿಯ ಹಾಗೂ ಕಾನೂನಿನ ಭಯವಿಲ್ಲದೆ ಗಣಿಗಾರಿಕೆ ನಡೆಸುತ್ತಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಮರಳು ಸಾಗಾಣಿಕೆ ತಡೆಯಲು ವಿಶೇಷ ಅಧಿಕಾರಿಗಳನ್ನು ಹಾಗೂ ತನಿಖಾ ಕೇಂದ್ರಗಳನ್ನು ನಿರ್ಮಿಸಿದೆ ಆದರೆ ಸಿಂಧನೂರು ತಾಲೂಕಿನಲ್ಲಿ ಯಾವುದೇ ಒಂದು ಕಡೆಯಲ್ಲಿ ಚೆಕ್ ಪೋಸ್ಟ್ ಗಳನ್ನೂ ರಚಿಸಿಲ್ಲ ಒಂದು ವೇಳೆ ಚೆಕ್ ಪೋಸ್ಟ್ ಗಳು ಇದ್ದರೂ ಸಹ ಮೇಲಾಧಿಕಾರಿಗಳ ಸರಿಯಾದ ನಿರ್ವಹಣೆ ಇಲ್ಲದೆ ತಪಾಸಣಾ ಕೇಂದ್ರಗಳು ಪಾಳು ಬಿದ್ದಿರುವ ಉದಾಹರಣೆ ಕಣ್ಣಾರೆ ಕಾಣಬಹುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಿಂಧನೂರು ತಾಲೂಕ ಘಟಕ ಆರೋಪಿಸಿದೆ.ತಾಲೂಕಿನ ಇನ್ನೂ ಹಲವಾರು ಸಾರ್ವಜನಿಕ ಕುಂದು ಕೊರತೆಗಳು ಹಾಗೂ ಸಾಮಾಜಿಕ ಸಮಸ್ಯೆಗಳು ರೈತರ, ಸೈನಿಕರ ,ಕೂಲಿ ಕಾರ್ಮಿಕರ ಸಮಸ್ಯೆಗಳು ಇದ್ದು ಇವೆಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಕೆ. ಆರ್. ಎಸ್ ಪಕ್ಷ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ.ತಾಲೂಕಿನಲ್ಲಿ ಸ್ವಚ್ಚ ಪ್ರಾಮಾಣಿಕ ಪ್ರಾದೇಶಿಕ ಜನಪರ ರಾಜಕಾರಣಕ್ಕೆ ಕೆ. ಆರ್. ಎಸ್. ಪಕ್ಷ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು , ಅನ್ಯಾಯ, ಆಕ್ರಮ, ಭ್ರಷ್ಟ ಅಧಿಕಾರಿ ಮತ್ತು ಇಲಾಖೆಯ ಅವ್ಯವಸ್ತೆಯನ್ನು ಬಯಲು ಮಾಡುತ್ತಿದೆ ಎಂದು ತಾಲೂಕು ಅಧ್ಯಕ್ಷರಾದ ನೀರುಪಾದಿ ಕೆ. ಪತ್ರಿಕೆ ಹೇಳಿಕೆ
ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend