ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಅಂಬೇಡ್ಕರ್ ಫೋಟೋ  ತೆಗೆಸಿದ್ದು ಒಂದು ಪ್ರತ್ಯೇಕ ಪ್ರಕರಣವೋ?

Listen to this article

ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಅಂಬೇಡ್ಕರ್ ಫೋಟೋ  ತೆಗೆಸಿದ್ದು ಒಂದು ಪ್ರತ್ಯೇಕ ಪ್ರಕರಣವೋ?

ಅಥವಾ

ಮಲ್ಲಿಕಾರ್ಜುನ ಗೌಡನಿಂದ ಮೋದಿಯವರಿಗೆ ಅಧಿಕೃತವಾಗಿ  ಜಾರಿಯಾಗುತ್ತಿರುವ   ಆರೆಸ್ಸೆಸ್ ಕಾರ್ಯಕ್ರಮವೋ?”

” ಅಂಬೇಡ್ಕರ್-ಗಾಂಧಿ ನಿರಾಕರಣಾಯ ಸಾವರ್ಕರ ಸಂಸ್ಥಾಪನಾಯ …!”

 

– ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಫೋಟೋ ತೆಗೆಯದ ಹೊರತು  ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿ-ಅಧಿಕೃತವಾಗಿ ಘೋಷಣೆ

– ಬೆಂಗಳೂರಿನ ಸಮೀಪದ ಒಂದು ಶಾಲೆಯಲ್ಲಿ ಗಾಂಧಿ-ಅಂಬೇಡ್ಕರ್ರ ಫೋಟೋಗಳನ್ನೂ ಇಡದೆ ಆರೆಸ್ಸೆಸ್ ರಚಿತ ಹಿಂದೂತ್ವ  ಮಾತೆಯನ್ನಿಟ್ಟು ಕಾರ್ಯಕ್ರಮ..

ಮತ್ತೊಂದು ಶಾಲೆಯಲ್ಲಿ ಅಂಬೇಡ್ಕರ್ ರಚಿತ ಸಂವಿಧಾನಕ್ಕೆ ಕಾಲ ಮುಗಿದಿದೆಯೇ ಎಂಬ ಬಗ್ಗೆ ಚರ್ಚಾ ಸ್ಪರ್ಧೆ

– ದೆಹಲಿಯ ಗಣರಾಜ್ಯೋತ್ಸವ ಪೆರೇಡಿಗೆ ಬಹುಜನರ ಗುರು, ಬ್ರಾಹ್ಮಣ್ಯ ವಿರೋಧಿ ನಾರಾಯಣಗುರುವಿನ ಹಾಗೂ ಸಾವರ್ಕರ್ ವಿರೋಧಿಯಾಗಿದ್ದ ನೇತಾಜಿಯ ಸ್ತಬ್ಧಚಿತ್ರ ಪ್ರದರ್ಶನ ನಿರಾಕರಣೆ.

ನಾರಾಯಣಗುರುವಿನ ಬದಲಿಗೆ ಬ್ರಾಹ್ಮಣ ವೇದಾಂತಿ ಶಂಕರಾಚಾರ್ಯರ ಸ್ಥಬ್ದಚಿತ್ರ ಕಳಿಸುವಂತೆ ಅಧಿಕೃತ ಸಲಹೆ

– ” *ಅಂಬೇಡ್ಕರ್ ಪ್ರತಿಪಾದಿಸಿದ  ದಮನಿತ ಜನರ  ಹಕ್ಕು ಆಧಾರಿತ ಮತ್ತು ಹಕ್ಕು ರಕ್ಷಣೆಯ ಸಮಾಜ -ಸಂವಿಧಾನ ಕಟ್ಟಿದ್ದರಿಂದ ಭಾರತ ಹಿಂದುಳಿದಿದೆ..ಆದ್ದರಿಂದ ಮುಂದಿನ 25 ವರ್ಷ ಭಾರತದ ಜನರು ಕರ್ತವ್ಯವನ್ನು ಪಾಲಿಸುತ್ತಾ ಹಕ್ಕುಗಳನ್ನು ಮರೆಯಬೇಕು”*
ಎಂದು ಮೋದಿ ಕರೆ…

ಅದನ್ನೇ ನಿನ್ನೆ ಬೊಮ್ಮಾಯಿ ಕೂಡಿದ ನಿಷ್ಠಾವಂತ ಗಿಳಿಯ ರೀತಿ ಮರುಉಲಿ

– ” *ಭಾರತದ ನ್ಯಾಯಸಂಹಿತೆ ಪಾಶ್ಚಿಮಾತ್ಯ ಹಕ್ಕು ಸಿದ್ಧಾಂತಗಳಿಂದ ದುಷ್ಟ್ರಭಾವಕ್ಕೊಳಗಾಗಿದೆ . ವಸಾಹತೀಕರಣಕ್ಕೊಳಪಟ್ಟಿದಕ್ಷಿಣ ಭಾರತದಲ್ಲೇ ಮನು, ಚಾಣಕ್ಯ, ಕೌಟಿಲ್ಯನಂಥ ದೇಸೀ ನ್ಯಾಯವಿಶಾರದರಿದ್ದಾರೆ. ಭಾರತದ ನ್ಯಾಯಸಂಹಿತೆ ಅದನ್ನು ಅಳವಡಿಸಿಕೊಂಡು ವಸಾಹತುಶಾಹಿ ಪ್ರಭಾವದಿಂದ ಮುಕ್ತವಾಗಬೇಕು”*
ಎಂದು ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶ ಅಬ್ದುಲ್ ನಜೀರ್ ಸಾಬ್ ಬಹಿರಂಗ ಘೋಷಣೆ

– ಭಾರತೀಯರ ಹಕ್ಕುಗಳನ್ನು ಕಾಯಬೇಕಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಅಧ್ಯಕ್ಷ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಮತ್ತು ಮೋದಿ ಭಕ್ತ ಅರುಣ್ ಮಿಶ್ರಾ ರಿಂದ
” *ಹಕ್ಕುಗಳ ರಾಜಕಾರಣದಿಂದ ಭಾರತದ ಭದ್ರತೆಗೆ ಅಪಾಯ”*

ಎಂಬ ವಿಷಯದ ಸುತ್ತಾ ದೇಶಾದ್ಯಂತ ವಿಚಾರ ಸಂಕಿರಣ ಆಯೋಜನೆ

– ಗುಜರಾತಿನ ಶಾಲೆಗಳಲ್ಲಿ ಅಂಬೇಡ್ಕರ್ ಬುದ್ಧ ಧರ್ಮ ಸ್ವೀಕಾರ ವಿಷಯದ ಪಠ್ಯದಲ್ಲಿ  ವೈದಿಕ ಸಂಕೇತಗಳನ್ನು ತಿರಸ್ಕರಿಸಲು ಕರೆ ನೀಡಿದ್ದ 22 ಪ್ರತಿಜ್ಞೆಗಳಿಗೆ  ಕಡಿತ

– ” *ಅಂಬೇಡ್ಕರ್ ಸಂಸ್ಕೃತ ವನ್ನು ರಾಷ್ಟ್ರಭಾಷೆ ಮಾಡಬೇಕೆಂದು ಕರೆ ನೀಡಿದ್ದರು, ಆರೆಸ್ಸಸ್ಸನ್ನು ಮೆಚ್ಚಿಕೊಂಡಿದ್ದರು, ಹಿಂದೂ ಸುಧಾರಣೆ ಬಯಸಿದ್ದರೆ ವಿನಾ ಹಿಂದೂ ನಿರಾಕರಣೆ ಮಾಡಿರಲಿಲ್ಲ”* ಎಂದು ಮೋದಿ ಸರ್ಕಾರ ಅಧಿಕೃತ ಅಪಪ್ರಚಾರ

– ಕಳೆದ ಕೆಲವು ವರ್ಷಗಳಿ ಅಂಬೇಡ್ಕರ್ ಬರಹಗಳ ಬದಲಿಗೆ ಅಂಬೇಡ್ಕರ ಹುಟ್ಟಿಬೆಳೆದ ಸ್ಥಳಗಳನ್ನು *ಪಂಚಕ್ಷೇತ್ರ* ಗಳೆಂದು ವೈದಿಕ ನಾಮಕಾರಣ ಮಾಡಿ ತಾವೂ ಅಂಬೇಡ್ಕರ್ವಾದಿಗಳೆಂದು ಮೋದಿ ಸರ್ಕಾರದ ಪ್ರತಿಪಾದನೆ

– ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಯ ದಿನಾಚರಣೆ ಮಾಡುವ ಸಂಘಪರಿವಾರದ ಅಂಗಸಂಸ್ಥೆಗಳಿಗೆ ಪರೋಕ್ಷ ಕುಮ್ಮಕ್ಕು

– ಸಾವರ್ಕರ್ ಅನ್ನು ಮತ್ತು ಗೋಡ್ಸೆಯನ್ನು ವೈಭವೀಕರಿಸುವ *ಗಾಂಧಿಯನ್ನು  ನಾನೇಕೆ ಕೊಂದೆ* ಎಂಬ ಪುಸ್ತಕ ಹಾಗೂ ಚಲಚಿತ್ರಕ್ಕೆ ಸರ್ಕಾರದ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ

– ” *ಹಿಂದೂ ರಾಷ್ಟ್ರ ಸಾಕಾರವಾದರೆ ಭಾರತದ ಅವನತಿ”*
ಎಂದು ಘೋಷಿಸಿದ್ದ ಅಂಬೇಡ್ಕರ್ ತಿಳವಳಿಕೆಗೆ ತದ್ವಿರುದ್ಧವಾಗಿ ಹಿಂದೂ ರಾಷ್ಟ್ರ ಸಿದ್ಧಾಂತಿ ಸಾವರ್ಕರ್ ನ ಫೋಟೋವನ್ನು ಮೋದಿ ಸರ್ಕಾರವೇ ಸಂಸತ್ ಭವನದಲ್ಲಿ ಅನಾವರಣ ..ಸಾವರ್ಕರ್ ಗೆ ಭಾರತ ರತ್ನ ಕೊಡುವ ಪ್ರಯತ್ನ

– 2019 ರ ನಂತರ ಮೋದಿಯಿಂದ ಮೊದಲುಗೊಂಡು ಬಿಜೆಪಿ ಹಾಗೂ ಸಂಘಪರಿವಾರದ ಪ್ರತಿಯೊಬ್ಬ ನಾಯಕರ ಬಾಯಿಯಲ್ಲಿ ತೀವ್ರಗೊಂಡ ಸಾವರ್ಕರ್ ಜಪ.

ಗಾಂಧಿ ಅಂಬೇಡ್ಕರ್ ಗೆ ಪರ್ಯಾಯವಾಗಿ  ಸಾವರ್ಕರ್ – ಪಟೇಲ್ ಪುನರ್ ಸ್ಥಾಪನೆಯ ಬೃಹತ್ ಯೋಜನೆ ..

– ಕರ್ನಾಟಕದಲ್ಲೂ ಈವರೆಗೆ ಚಾಲ್ತಿಯಲ್ಲಿ ಇಲ್ಲದಿದ್ದ ಸಾವರ್ಕರ್ ಹೆಸರು, ಪುಸ್ತಕಗಳ ಅಧಿಕೃತ ಪ್ರಚಾರ.

ರಸ್ತೆಗಳಿಗೆ ನಾಮಕರಣ. ಪುಸ್ತಕಗಳ ಅನಾವರಣ.
ಅದರಲ್ಲಿ ಮಾಜಿ ದಲಿತ ಚಿಂತಕರ ಭಾಗವಹಿಸುವುವಿಕೆ.

*ಒಂದೇ.. ಎರಡೇ.. ಇವ್ಯಾವು ಬಿಡಿಬಿಡಿ ಘಟನಗಳಲ್ಲ…ಅಂಬೇಡ್ಕರ್ ವಾದವನ್ನು ಒಳಗಿಂದ ಕೊಲ್ಲುತ್ತಾ ಮನುವಾದೀ ಬ್ರಾಹ್ಮಣ್ಯ ವನ್ನು ಸ್ಥಾಪಿಸುವ ಬೃಹತ್ ಯೋಜನೆಯ ವಿವಿಧ ಮುಖಗಳು. ಅದರ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳು..*

ರಾಯಚೂರಿನ ಪ್ರಕರಣ ಈ ಆತಂಕಕಾರಿ ವಿದ್ಯಮಾನದ ಒಂದು ಘಟನೆಯಷ್ಟೇ.

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ರು  ಅಂಬೇಡ್ಕರ್ ಫೋಟೋವನ್ನು ತೆಗೆಸುವ ಮೂಲಕ ಹಾಲಿ ಇರುವ ಸರ್ಕಾರೀ ನಿಯಮಗಳಿಗೆ, ಆದೇಶಗಳಿಗೆ ಮತ್ತು ರಾಷ್ಟ್ರ ಲಾಂಛನಗಳಿಗೆ ಗೌರವ ತೋರಬೇಕೆಂಬ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ .

ಕಾನೂನಿಗಿಂತ ತನ್ನ ವೈಯಕ್ತಿಕ ಪೂರ್ವಗ್ರಹಗಳನ್ನು ಆಚರಿಸಿದ್ದಾರೆ . ಹಾಗೂ ಸಂವಿಧಾನವನ್ನು ಮೌಲ್ಯಗಳನ್ನು ಎತ್ತಿಹಿಡಿಯುತ್ತೇನೆಂಬ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೇ. .

*ಆದ್ದರಿಂದ ರಾಯಚೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ನ್ನು ಸೇವೆಯಿಂದ  ವಜಾ ಮಾಡಬೇಕು ಮತ್ತು ಕಾನೂನು ಉಲ್ಲಂಘನೆಯ ಕಲಮುಗಳನ್ವಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು..*

*ಆದರೆ, ಇದು ಕೇವಲ ಒಬ್ಬ ಮಲ್ಲಿಕಾರ್ಜುನ ಗೌಡ ರನ್ನು ಶಿಕ್ಷಿಸುವುದರಿಂದ ಬಗೆಹರಿಯುವ ಸಮಸ್ಯೆಯೇ?*

ಇಂದು ನ್ಯಾಯಾಂಗ ಹಾಗೂ ಅಧಿಕಾರಶಾಹಿಯ ಬಹುಪಾಲು ಮಂದಿಯಲ್ಲಿ   ದಲಿತ ವಿರೋಧೀ, ಮುಸ್ಲಿಂ ವಿರೋಧೀ ಮತ್ತು ಮಹಿಳಾ ವಿರೋಧಿ ಮನುವಾದಿ ಹಾಗೂ ಹಿಂದುತ್ವವಾದಿ ಆಲೋಚನೆಗಳೇ ಆಳವಾಗಿ ಬೇರೂರಿವೆ.

ಮೋದಿ ರೆಜೀಮ್ ಮತ್ತು ಸಂಘಪರಿವಾರ ಆ ಮಾನವವಿರೋಧಿ ಚಿಂತನೆಗಳ ಪುನುರುತ್ತಾನವನ್ನು ಯೋಜಿತವಾಗಿ ಪೋಷಿಸುತ್ತಿದೆ.

ಮಲ್ಲಿಕಾರ್ಜುನ ಗೌಡ ರಿಂದ ಹಿಡಿದು ಮೋದಿಯವರಿಗೆ..

ಕೆಳಹಂತದ ನ್ಯಾಯಾಲಯ ಗಳಿಂದ ಹಿಡಿದು ಸುಪ್ರೀಂ ವರೆಗೆ..

ವ್ಯಾಪಿಸಿರುವ ಈ ಮನುವ್ಯಾಧಿಯನ್ನು ಓಡಿಸಲು…

ಏನು ಮಾಡಬೇಕು ?
ಏನೇನು ಮಾಡಬೇಕು?
ಎಷ್ಟು ಕಾಲ ಮಾಡಬೇಕು?

ಜಸ್ಟ್ ಆಸ್ಕಿಂಗ್

ಪ್ರತಾಪ್ ಛಲವಾದಿ
ಹರಪನಹಳ್ಳಿ ತಾಲೂಕ ಛಲವಾದಿ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿ ಹರಪನಹಳ್ಳಿ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend