ತಾಯಿ ಮತ್ತು ಮಕ್ಕಳ ಆಸ್ಪತ್ರೆ ಶಂಕುಸ್ಥಾಪನೆ ಸ್ಥಳಕ್ಕೆ ಬಸನಗೌಡ ಬಾದರ್ಲಿ ಬೇಟಿ…!!!

Listen to this article

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಶಂಕುಸ್ಥಾಪನೆ ಸ್ಥಳಕ್ಕೆ ಬಸನಗೌಡ ಬಾದರ್ಲಿ ಬೇಟಿ.

ಸಿಂಧನೂರು :ಜೋಳ ಖರೀದಿ ಕೇಂದ್ರದಲ್ಲಿ ಕಳೆದ ಗುರುವಾರ ದಿವಸ ಕ್ಯಾಬಿನೆಟ್ ಸಬ್ ಮೀಟಿಂಗ್ನಲ್ಲಿ 20 ಕ್ವಿಂಟಾಲ್ ಗಿಂತ ಹೆಚ್ಚಿಗೆ ಮಾಡುವ ಸಂಭಂದ ಮಂತ್ರಿಗಳು, ಶಾಸಕರು, ಸದಸ್ಯರು ಸಭೆ ಕರೆದು, ಭಾಗವಹಿಸಿ ಒಂದು ವಾರದ ನಂತರ ನಿರ್ಧಾರ ಮಾಡಲಾಗುವುದೆಂದು ಸಭೆಯನ್ನುಮುಂದೂಡಲಾಗಿತ್ತು.ನಾಳೆ ಗುರುವಾರಕ್ಕೆ ಒಂದು ವಾರ ಆಗುತ್ತೆ ಸರಕಾರ ಮುಖ್ಯಮಂತ್ರಿಗಳು,ಸಚಿವರು, ಅಧಿಕಾರಿಗಳು ಯಾವುದೇ ಆದೇಶ ಹೊರಡಿಸಿಲ್ಲ,ನೀವು ಹೇಳಿದ ಕಾಲಾವಕಾಶದಲ್ಲಿ ಆದೇಶ ಮಾಡದೇ ಹೋದಲ್ಲಿ ಪಕ್ಷತೀತವಾಗಿ ರೈತರ ಸಭೆ ಕರೆದು ಹೋರಾಟದ ರೂಪರೇಷೆಗಳನ್ನು ಕೈಗೊಳ್ಳಲಾಗುವುದು.
ಹೋರಾಟ ಒಂದು ಪಕ್ಷಕ್ಕೆ ಸೀಮಿತವಾಗದೇ ಎಲ್ಲಾ ರೈತರನ್ನು ಒಗ್ಗೂಡಿಸಿ ಪಕ್ಷಾತೀತವಾಗಿ ಹೋರಾಟಕ್ಕೆ ಚಿಂತಕರು,ರೈತಹೋರಾಟಗಾರರ ಸಭೆ ಕರೆದು ಹೋರಾಟಕ್ಕೆ ಬೆಂಬಲ ಪಡೆದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ನಗರದಿಂದ 8 ಕಿ.ಮೀ. ಹೊರವಲಯದ ಕಲ್ಲೂರು ಗ್ರಾಮದಲ್ಲಿ ಶಂಕುಸ್ಥಾಪನೆಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಳಕ್ಕೆ ಬೇಟೆ ನೀಡಿದ ಸಂಧರ್ಭದಲ್ಲಿ ಮಾಧ್ಯಮದೊಂದಿಗೆ ಮಾಜಿ ಯುವ ರಾಜ್ಯಧ್ಯಕ್ಷರು ಬಸನಗೌಡ ಬಾದರ್ಲಿಯವರು ಮಾತನಾಡಿದರು.

ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊಂದಿತ್ತು.2012 ರ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ 371ಜೆ ಕಲಂ ತಿದ್ದುಪಡಿದ ತಂದ ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯುವಕರಿಗೆ ಉದ್ಯೋಗದಲ್ಲಿ ಅವಕಾಶಗಳನ್ನು ದೊರಕಿದವು. 541 ಪಿಎಸ್ಐ ಹುದ್ದೆ ಕರೆಯಲಾಗಿತ್ತು ಇದರಲ್ಲಿ ನಮ್ಮ ಭಾಗದ ಯುವಕರಿಗೆ ಶಿಕ್ಷಣದಲ್ಲಿ ಉದ್ಯೋಗದಲ್ಲಿಅನ್ಯಾಯವಾಗಿದೆ. ಇದನ್ನು ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ನಗರದಿಂದ 8ಕಿ.ಮೀ.ದೂರ ಇದೆ. ಹಾಗೂ ಹಿರಿಯರು ಅಂತ್ಯಕ್ರಿಯೆಗೊಂಡ ಸ್ಮಶಾನ ಸ್ಥಳದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಶಂಕುಸ್ಥಾಪನೆ ಮಾಡಿದ್ದು ದುರುದ್ದೇಶವಾಗಿದೆ. ನೀವು ಮಂತ್ರಿಗಳಾಗಿ, ಶಾಸಕರಾಗಿ ಕೆಲಸ ಮಾಡಿದ್ದೀರಿ ಅಧಿಕಾರಿ ಸಭೆ ಕರೆದು ತಾಲೂಕಿನ ಹಾರದ ಭಾಗದಲ್ಲಿ ಸರಕಾರಿ ಜಾಗ ಗುರುತಿಸಿ ಆಸ್ಪತ್ರೆ ನಿರ್ಮಾಣ ಮಾಡಬೇಕು. ಈ ಆಸ್ಪತ್ರೆ ಅಲ್ಲಿ ಮಾಡುವರಿಂದಾಗಿ ಜನರಿಗೆ ಅನುಕೂಲಕ್ಕಿಂತ, ಅನಾನುಕೂಲಗಳು ಜಾಸ್ತಿ ಎಂದು ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಿರಿಯರ ಆತ್ಮಗಳು ಇಲ್ಲಿ ಇರುವ ಕಾರಣ ಅವರಿಗೆ ಶಾಂತಿ ನೀಡಬೇಕು ಹಾಗೂ ಹೆರಿಗೆಯಾದ ತಾಯಿ ಮಗುವಿಗೂ ಒಳ್ಳೆಯದು ಆಗಬೇಕು. ಆದ್ದರಿಂದ ಕೂಡಲೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಜನಸಾಮಾನ್ಯರಿಗೆ ಅನುಕೂಲವಾಗುವ ಸೂಕ್ತ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು. ನಾವು ಯಾರ ಪರವಾಗಿಯೂ ಇಲ್ಲ, ಯಾರ ವಿರುದ್ಧವಾಗಿಯೂ ಇಲ್ಲ, ಆಸ್ಪತ್ರೆಯ ವಿಷಯದಲ್ಲಿ ರಾಜಕೀಯ ಮಾಡುತಿಲ್ಲ ಜನರ ಸಮಸ್ಯೆಗೆ ಸ್ಪಂದನೆನೀಡಿ ನಾವು ಇಲ್ಲಿಗೆ ಬೇಟಿ ನೀಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಿವುಕುಮಾರ ಜವಳಿ, ವೆಂಕಟೇಶ್ ರಾಗಲಪರ್ವಿ, ಶೇಕರಯ್ಯ, ಖಾಜಾಹುಸೇನ ರೌಡಕುಂದಾ, ಶಂಕರಗೌಡ ಇತರರಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend