ಡಾ.ಬಿ.ಆರ್.ಅಂಭೇಡ್ಕರವರ ಫೋಟೋ ಇಟ್ಟರೆ ಬರುವುದಿಲ್ಲ ಎಂದು, ಹೇಳಿದ ನ್ಯಾಯದೀಶರ ವಿರುದ್ಧ ಪ್ರತಿಭಟನೆ…!!”

Listen to this article

ಸಿಂಧನೂರು :ರಾಯಚೂರು ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಗಣರಾಜೋತ್ಸವ ದಿನದಂದು ಡಾ.ಬಿ.ಆರ್.ಅಂಭೇಡ್ಕರ ಅವರ ಫೋಟೋವನ್ನು ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯಾದೀಶರಾದ ಮಲ್ಲಿಕಾರ್ಜುನಗೌಡ ಇವರು ವೃತ್ತಿ ಗೌರವಕ್ಕೆ, ಅವಮಾನ ಮಾಡಿದ್ದಲ್ಲದೆ ಸಂವಿಧಾನಕ್ಕೆ ಮತ್ತು ಭಾರತರತ್ನ ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ವರಿಗೆ ಅವಮಾನ ಮಾಡಿದ್ದು ಜವಾಬ್ದಾರಿ ಸ್ಥಾನದಲ್ಲಿರುವ ನ್ಯಾಯಧೀಶರು ತಮ್ಮ ಸ್ಥಾನಕ್ಕೆ ಅರ್ಹತೆವುಳ್ಳವರಲ್ಲ ರಾಯಚೂರು ಜಿಲ್ಲಾ ಮುಖ್ಯನ್ಯಾಯಾಧೀಶರು, ದೇಶದ್ರೋಹ ಕೃತ್ಯವಾಗಿದೆ.ಕೂಡಲೇ ನ್ಯಾಯಧೀಶರಾದ ಮಲ್ಲಿಕಾರ್ಜುನಗೌಡರ ಮೇಲೆ ರಾಷ್ಟ್ರದ್ರೋಹಿ ಎಂದು ಪ್ರಕರಣವನ್ನು ದಾಖಲಿಸಬೇಕು.ಉಚ್ಚ ನ್ಯಾಯಾಲಯವೂ ಸ್ವಯಂ ಪ್ರೇರಿತರಾಗಿ (Higt Court Sumotu Power ) ಯಿಂದ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲು ಬಂಧಿಯನ್ನಾಗಿಸಬೇಕು ಮತ್ತು ನ್ಯಾಯಾಧೀಶರನ್ನು ವೃತ್ತಿಯಿಂದ ವಜಾಮಾಡಬೇಕು ಎಂದು ದಲಿತಪರ ಸಂಘಟನೆಗಳ ಒಕ್ಕುಟವು ಒತ್ತಾಸಿದೆ. ಒಂದು ವೇಳೆ ನ್ಯಾಯಾಧೀಶರನ್ನು ವಜಾ ಮಾಡದೇ ಬಂದಿಸದೆ ಹೋದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ನಗರದ ಪ್ರವಾಸಿಮಂದಿರದಿಂದ ಗಾಂಧಿ ವೃತ್ತದರವರೆಗೆ, ಕತ್ತೆಯ ಮೇಲೆ ನ್ಯಾಯಾಧೀಶರ ಭಾವಚಿತ್ರ ಇಟ್ಟು ಮೆರವಣಿಗೆ ಮುಖಾಂತರ ನ್ಯಾಯಾಧೀಶರ ವಿರುದ್ದ ದಿಕ್ಕಾರ ಕೂಗುತ್ತಾ ದಲಿತಪರ ಸಂಘಟನೆಗಳ ಒಕ್ಕೂಟ, ಸಿ.ಪಿ.ಐ.ಎಂ,ಮತ್ತು ಬಿ.ಎಸ್.ಪಿ.ಜಂಟಿಯಾಗಿ ಪಾದಯಾತ್ರೆ ಮೂಲಕ, ಗಾಂಧಿ ಸರ್ಕಲ್ ನಲ್ಲಿ ರಸ್ತೆ ಬಂದ ಮಾಡಿ ನ್ಯಾಯಾಧೀಶರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾನ್ಯ ದಂಡಧಿಕಾರಿಗಳಾದ ಮಂಜುನಾಥ್ ಬೋಗಾವತಿ ಅವರ ಮುಖಾಂತರ ಮಾನ್ಯ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಮುಖ್ಯನ್ಯಾಯದೀಶರಿಗೆ, ಮನವಿ ಪತ್ರ ಸಲ್ಲಿಸಿದರು.

ರಸ್ತೆತಡೆ ಚಳುವಳಿ ಸಂಧರ್ಭದಲ್ಲಿ ಅಂಬುಲೇನ್ಸ್ ಬಂದ ಕೂಡಲೇ ಪೋಲಿಸ್ ಇಲಾಖೆ ಮತ್ತು ಸಂಘಟನೆಯ ಮುಖಂಡರು ಅಂಬುಲೆನ್ಸ್ ಹೋಗಲು ಅನುವು ಮಾಡಿಕೊಟ್ಟರು. ನಂತರ ಬೇರೆ ವಾಹನಗಳನ್ನು ತಡೆಯಲು ಮುಂದಾದಾಗ ಪೋಲಿಸರ ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.ನಮಗೆ ನೋವಾಗಿದೆ, ಹೋರಾಟ ಮಾಡುವುದು ನಮ್ಮ ಹಕ್ಕು ಮಾಡುತ್ತಿದ್ದೇವೆ. ನಮಗೆ ರಕ್ಷಣೆ ಕೊಡಬೇಕಾದ ಪೋಲಿಸ್ ಇಲಾಖೆ ನಮ್ಮ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ವಾಗ್ವಾದಕಿಳಿದರು. ನಂತರ ಹಿರಿಯ ಮುಖಂಡರ ಮಧ್ಯಸ್ತಿಕೆಯಲ್ಲಿ ತಿಳಿಗೊಳಿಸಿ ಹೋರಾಟವನ್ನು ಅಂತಿಮಗೊಳಿಸಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅನುವೂ ಮಾಡಿಕೊಟ್ಟರು.ರಾಯಚೂರು ರಸ್ತೆ, ಗಂಗಾವತಿ ರಸ್ತೆ, ಕುಷ್ಟಗಿ ರಸ್ತೆಯಲ್ಲಿ ಒಂದುಕಿ.ಮೀ.ವರೆಗೆ ವಾಹನಗಳು ನಿಂತಿದ್ದವು.

ಈ ಸಂದರ್ಭದಲ್ಲಿ ಡಾ. ರಾಮಣ್ಣ ಗೊನ್ವಾರ್ , ಎಚ್ ಎನ್ ಬಡಿಗೇರ್ ಆರ್, ಅಂಬ್ರೋಸ್, ನರಸಪ್ಪ ಕಟ್ಟಿಮನಿ, ಅಮರೇಶ ಗಿರಿಜಾಲಿ, ಹನುಮಂತಪ್ಪ ಗೋಮರ್ಸಿ, ಮಹದೇವಪ್ಪ ದುಮತಿ, ಹನುಮಂತಪ್ಪ ವಕೀಲರು, ಶೇಖರಪ್ಪ ವಕೀಲರು ಧುಮತಿ, ಅಲ್ಲಮಪ್ರಭು ಸಿಂಧನೂರು, ಬಸವರಾಜ್ ಕುನ್ನಟಗಿ, ನಾಗರಾಜ ಪೂಜಾರಿ, ಶರಣಬಸವ ಮಲ್ಲಾಪುರ, ನಿರುಪಾದಿ ಸಾಸಲಮರಿ, ಪಂಪಾಪತಿ ಬೂದಿಹಾಳ, ಹನುಮಂತ ಹಂಪನಾಳ, ಗಂಗಾಧರ್ ಬುದ್ದಿನ್ನಿ, ರಾಮಕೃಷ್ಣ ಭಜಂತ್ರಿ, ಹನುಮಂತಪ್ಪ ಗೋಮರ್ಸಿ, ನಾಗರಾಜ ಸಾಸಲಮರಿ, ಹೇಡಿಗಿಬಾಳ ನಾಗರಾಜ ಇನ್ನೂ ನೂರಾರು ದಲಿತಪರ ಸಂಘಟನೆ ಮುಖಂಡರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend