ಕಷ್ಟ ಪಟ್ಟು ಶಾಲೆಗೆ ಬರುವುದಕ್ಕಿಂತ ಇಷ್ಟಪಟ್ಟು ಶಾಲೆಗೆ ಬನ್ನಿ:- p.s.i. ತಿಮ್ಮಣ್ಣ ಚಾಮನೂರು…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
**ಹೊಸಹಳ್ಳಿ, ಶ್ರೀ ಶರಣ ವಿದ್ಯಾಸಂಸ್ಥೆಯ ಆವರಣದಲ್ಲಿ 73 ನೇಯ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು

ಕಷ್ಟ ಪಟ್ಟು ಶಾಲೆಗೆ ಬರುವುದಕ್ಕಿಂತ ಇಷ್ಟಪಟ್ಟು ಶಾಲೆಗೆ ಬನ್ನಿ:- p.s.i. ತಿಮ್ಮಣ್ಣ ಚಾಮನೂರು.
ಪಟ್ಟಣದ ಶ್ರೀ ಶರಣೇಶ್ವರ ವಿದ್ಯಾ ಸಂಸ್ಥೆಯಆವರಣದಲ್ಲಿ ಏರ್ಪಡಿಸಿದ್ದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲೆಯ ಮಕ್ಕಳ ಕುರಿತು ವಿದ್ಯಾಭ್ಯಾಸದ ಬಗ್ಗೆ ಮಾತನಾಡಿದರು.ನಿಮ್ಮ ತಂದೆ ತಾಯಿಗಳು ಕೂಲಿ ಮಾಡುತ್ತಾರೋ. ವ್ಯವಸಾಯ ಮಾಡುತ್ತಾರೊ. ನನಗೆ ಗೊತ್ತಿಲ್ಲ.ಆದರೆ ನಮ್ಮ ಮಕ್ಕಳು ವಿದ್ಯಾವಂತರಾಗಲಿ ಬುದ್ಧಿವಂತರಾಗಲಿ ಿ ಸಮಾಜದಲ್ಲಿ ಒಂದು ಒಳ್ಳೆಯ ಉನ್ನತ ಸ್ಥಾನದಲ್ಲಿ ಬೆಳೆಯಲಿ ಎಂದು ನಿಮ್ಮನ್ನು ಶಾಲೆಗೆ ಕಳಿಸುತ್ತಾರೆ.ನೀವು ತಂದೆತಾಯಿಗಳಿಗೆ ಗುರುಹಿರಿಯರಿಗೆ. ಶಾಲೆಯಲ್ಲಿ ಪಾಠ ಕಲಿಸುವ ಶಿಕ್ಷಕರಿಗೆ ಗೌರವ. ಕೊಟ್ಟು ಅವರು ಹೇಳಿಕೊಡುವ ಪಾಠಪ್ರವಚನಗಳನ್ನು ಭಕ್ತಿಯಿಂದ ನಿಷ್ಠೆಯಿಂದ ಕೇಳಿ ಸಮಾಜದ ಏಳಿಗೆಗೆತಂದೆ-ತಾಯಿಗಳಿಗೆ ಗೌರವ ತರುವ ಮಕ್ಕಳಾಗಿ ರಿ. ಯಾರು ಒತ್ತಡಕ್ಕೆ ಮಣಿದು ಕಷ್ಟಪಟ್ಟು ಶಾಲೆಗೆ ಬರುವುದಕ್ಕಿಂತ ಇಷ್ಟಪಟ್ಟು ಶಾಲೆಗೆ ಬನ್ನಿ ಒಳ್ಳೆಯ ವಿದ್ಯಾವಂತರಾಗಿ ಬುದ್ಧಿವಂತರಾಗಿ.ಎಂದು ಮಾತನಾಡಿದರು,ಹಾಗೂ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ಬಾಲ್ಯ ವಿವಾಹ ಕುರಿತು, ಮಕ್ಕಳ ಸಹಾಯವಾಣಿ, ಹಾಗೂ ಅನಿವಾರ್ಯ ಪ್ರಸಂಗದಲ್ಲಿ ತೊಂದರೆಯಾದಾಗ ಪೊಲೀಸ್ ಇಲಾಖೆಗೆ ಕರೆ ಮಾಡುವ ವಿಚಾರವಾಗಿ ಕೆಲವು ದೂರವಾಣಿ ನಂಬರುಗಳನ್ನು ಶಾಲಾ ಮಕ್ಕಳಿಗೆ ಹೇಳಿಇನ್ನೂ ಅನೇಕ ಕಾನೂನು ವಿಚಾರವಾಗಿ ಮಕ್ಕಳಿಗೆ ಈ ಸಂದರ್ಭದಲ್ಲಿ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರು ಆದ ಕೆಎಂ ಶಶಿಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು 73ನೇ ಗಣರಾಜ್ಯೋತ್ಸವದ ಬಗ್ಗೆ.ಹಾಗೂ ಸವಿಂದಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರಜೀವನಾಧಾರಿತ ಕೆಲವು ವಿಚಾರಗಳನ್ನು ಹಾಗೂ ಸವಿಂದಾನದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಕೆಎಂಎಸ್ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ರವರು ಮಾತನಾಡಿ ಭಾರತ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರು. ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ತಂದುಕೊಟ್ಟವರು ಅಂಬೇಡ್ಕರ್ ರ ವರು. ಇವರು ಯಾವುದೇ ಜಾತಿಗೆ ಸೀಮಿತವಾಗಿರಲಿಲ್ ಪ್ರತಿಯೊಂದು ಜಾತಿಯ ವರ್ಗದಲ್ಲಿ ಕೂಡ ಬಡತನ ರೇಖೆಗಿಂತ ಕೆಳಗಿರುವವರೆ ಲ್ಲ ರು ದಲಿತರು.ಪ್ರತಿಯೊಬ್ಬರು ಕೂಡ ಮತದಾನದ ಹಕ್ಕನ್ನು ಚಲಾಯಿಸುವಂತೆ ಮತದಾನದ ಹಕ್ಕನ್ನು ಜಾರಿಗೆ ತಂದರು ಎಂದು ಹೇಳಿ ಇನ್ನೂ ಅನೇಕ ವಿಚಾರವಾಗಿ ಸವಿಂದಾನ ಕುರಿತು ಮಾತನಾಡಿದರು. ವಿದ್ಯಾನಿಕೇತನ ಶಾಲೆಯ ಮುಖ್ಯಗುರುಗಳಾದ ಅಜೀಜ್. ಶಿಕ್ಷಕ ರಾಜು ನಾಯಕ್. ಹಾಗೂ ಶಾಲೆಯ ಮಕ್ಕಳು ಸವಿಂದಾನ ಕುರಿತು ಮಾತನಾಡಿದರು ಕಾರ್ಯಕ್ರಮದಲ್ಲಿ ಎಲ್ ಕೆಜಿ ಮಕ್ಕಳು ಹಾಗೂ ಒಂದರಿಂದ ಆರನೆಯ ತರಗತಿ ಮಕ್ಕಳು ವಿವಿಧ ರಾಜ್ಯಗಳ ಉಡುಪುಗಳನ್ನು ತೊಟ್ಟು ರಾಜ್ಯಗಳಿಗೆ ಸಂಬಂಧಪಟ್ಟ ಭಾಷೆ ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಹಾಗೂ ರಾಜ್ಯಗಳು ಯಾವ ವಿಚಾರಕ್ಕೆ ಪ್ರಾಮುಖ್ಯತೆ ಪಡೆದಿವೆ ಎಂಬುದನ್ನು ಮತ್ತು ಯಾವ ಯಾವ ಇಲಾಖೆಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಯಾವ ಕೆಲಸಗಳನ್ನು ನಿರ್ವಹಿಸುತ್ತದೆ ಎಂಬುದನ್ನು ಕೂಡ, ಮಕ್ಕಳು ಈ ವೇದಿಕೆಯಲ್ಲಿ ಪರಿಚಯ ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಮಂಜುನಾಥ್. ಕೈಗಾರಿಕಾ ತರಬೇತಿ ಕೇಂದ್ರದ ಉಪನ್ಯಾಸಕರಾದ ಕೆಎಂ ಚನ್ನವೀರ ಸ್ವಾಮಿ. ನಾಗೇಶ್ ಗಿರೀಶ್. ಶಾಲೆಯ ಶಿಕ್ಷಕರಾದ ಶಬೀ ರನ್, ಶಹಜಾನ್. ಆಶಾ. ಶಹ ಗುಪ್ತ.ನೇತ್ರಾವತಿ. ರುದ್ರಾoಬಾ ಶಜೀದ್.. ಬೋಧಕೇತರ ಸಿಬ್ಬಂದಿಗಳಾದ ವಿಜಯಕುಮಾರ್ ಹಾಗೂ ದಂಡೆಪ್ಪ. ಶಾಲೆಯ ಸಿಬ್ಬಂದಿ ವರ್ಗ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಉಡುಗೆ-ತೊಡುಗೆಗಳು ಆಂಗ್ಲ ಭಾಷೆಯಲ್ಲಿ ಮಾತನಾಡುವ ಶೈಲಿಗಳನ್ನು ನೋಡಲು ಮತ್ತು ಕೇಳಲು ಒಂದು ವಿಶೇಷವಾಗಿತ್ತು..

ವರದಿ. ಡಿ ಎಂ ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend