ಕೆ.ವಿ.ಕೆ. ಮತ್ತು ರೈತರ ಖುಷ್ಕಿ ಬೇಸಾಯದ ಸಾಧನೆ ವೀಕ್ಷಿಸಿ ಅಭಿನಂದಿಸಿದ ಶಾಸಕ ಡಾ.ಜಿ.ಪರಮೇಶ್ವರ್..!!!

Listen to this article

ಕೆ.ವಿ.ಕೆ. ಮತ್ತು ರೈತರ ಖುಷ್ಕಿ ಬೇಸಾಯದ ಸಾಧನೆ ವೀಕ್ಷಿಸಿ ಅಭಿನಂದಿಸಿದ ಶಾಸಕ ಡಾ.ಜಿ.ಪರಮೇಶ್ವರ್

ಕೊರಟಗೆರೆ: ತಾಲೂಕಿನ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಕೇಂದ್ರ ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆಯನ್ನು ಹಿರೇಹಳ್ಳಿಯ ಕೆ.ವಿ.ಕೆ ವಿಜ್ಞಾನಿಗಳು ಮತ್ತು ನಮ್ಮ ರೈತರು ಶ್ರಮವಹಿಸಿ ಯಶಸ್ವಿಗೊಳಿಸಿರುವುದು ಒಣ ಬೇಸಾಯ ಪದ್ದತಿಯಲ್ಲಿ ರೈತರ ಜೀವನ ಮಟ್ಟ ಸುಧಾರಿಸುತ್ತದೆ ಎಂದು ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ತಾಲೂಕಿನ ಕೋಳಾಲ ಹೋಬಳಿಯ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಭಾರತೀಯ ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆಗೆ ಎಲೆರಾಂಪುರ ಗ್ರಾಮ ಪಂಚಾಯ್ತಿಗೆ ಕೇಂದ್ರ ಸರ್ಕಾರದ ಉತ್ತಮ್ ಪಂಚಾಯತ್ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಡಿ ನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಯೋಜನೆಯ ಸಮಗ್ರ ಅಭಿವೃದ್ದಿಯನ್ನು ಪರಿಶೀಲಿಸಿ ಮಾತನಾಡಿದರು.

2010 ರಲ್ಲಿ ಪ್ರಾರಂಭವಾದ ಈ ಯೋಜನೆ ಇಲ್ಲಿಯವರೆಗು ಬಹಳ ವ್ಯವಸ್ಥಿತವಾಗಿ ನಡೆದಿದೆ. ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಈ ಯೋಜನೆಯನ್ನು ಉತ್ತಮವಾಗಿ ಸಾಕಾರ ಮಾಡಿದ್ದಾರೆ. ನಮ್ಮ ರೈತರು ಇದನ್ನು ಒಪ್ಪಿಕೊಂಡು ಯಶಸ್ವಿಗೊಳಿಸಿದ್ದಾರೆ. ಈ ಯೋಜನೆ ಮಳೆಯಾದಾರಿತ ಖುಷ್ಕಿ ಬೇಸಾಯದ ರೈತರಿಗೆ ಅತ್ಯುತ್ತಮವಾಗಿ ಉಪಯುಕ್ತವಾಗಿದೆ. ಒಣಪ್ರದೇಶದಲ್ಲಿ ಲಾಭದಾಯಕ ಗೋಡಂಬಿ, ನಲ್ಲಿ, ಹುಣಸೆ ಸೇರಿದಂತೆ. ಇತರೆ ವಾಣಿಜ್ಯಬೆಳೆಗಳನ್ನು ಸಹ ಇಳಿಜಾರಿನ ಮಳೆನೀರನ್ನು ಉಪಯೋಗಿಸಿಕೊಂಡು ಬೆಳೆದಿರುವುದು ರೈತನ ಜೀವನ ಮಟ್ಟವನ್ನು ಸುಧಾರಿಸುತ್ತದೆ. ವ್ಯರ್ಥವಾಗಿ ಹರಿದುಹೋಗುವ ನೀರನ್ನು ತಡೆದುನಿಲ್ಲಿಸಿ ಉಪಯೋಗಮಾಡಿಕೊಂಡಿದ್ದು. ಕಡಿಮೆ ಮಳೆಯಲ್ಲಿಯೂ ನೀರನ್ನು ಸಂರಕ್ಷಣೆ ಮಾಡಿ ಬೇಸಾಯ ಮಾಡಿದ್ದು ಸುಮಾರು 85 ಕೃಷಿ ಹೋಂಡಾಗಳನ್ನು ಹಲವು ಚೆಕ್ ಡ್ಯಾಂ, ನಾಲಾ ಬದು, ಹೂಳೆತ್ತುವಿಕೆ, ಕೊಳವೆಬಾವಿ ಅಭಿವೃದ್ದಿ ಸೇರಿದಂತೆ ಮಾಡಿರುವ ಈ ಕೆಲಸಗಳು ನಿಜಕ್ಕು ಅಕಾಲಿಕ ಮಳೆಯನ್ನು ಕಡಿಮೆ ನೀರಿನ ಪ್ರಮಾಣವನ್ನು ತಡೆದುಕೊಳ್ಳುವ ಕೃಷಿ ಪದ್ದತಿಯಾಗಿದ್ದು, ಕೊರಟಗೆರೆ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಬಯಲು ಸೀಮೆಯ ಮಳೆಯಾಧಾರಿತ ಪ್ರದೇಶಗಳ ಒಣ ಬೇಸಾಯಕ್ಕೆ ಈ ಯೋಜನೆ ವಿಸ್ತಾರವಾಗಬೇಕಿದ್ದು, ರಾಜ್ಯ ಸರ್ಕಾರವು ಇದಕ್ಕೆ ಕೈಜೋಡಿಸಬೇಕಾಗಿದೆ. ಯೋಜನೆ ಯಶಸ್ವಿಗೆ ಕೃಷಿ ವಿಜ್ಞಾನಿಗಳು, ರೈತರು ಗ್ರಾಮ ಪಂಚಾಯತಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಹಿರೇಹಳ್ಳಿಯ ಕೆ.ವಿ.ಕೆ. ವಿಜ್ಞಾನಿ ಹಾಗೂ ಆಡಳಿತಾಧಿಕಾರಿ ಲೋಗಾನಂದನ್ ಮಾತನಾಡಿ, ಈ ಯೋಜನೆ ಜಲಾನಯನ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಿದ್ದು 2010 ರಲ್ಲಿ ನಮ್ಮ ಇಲಾಖೆಯ ಡಿ.ಜಿ. ರವರು ಉದ್ಘಾಟನೆ ಮಾಡಿದ್ದು ಯಶಸ್ವಿಗೆ ಎಲ್ಲರು ಕಾರಣರಾಗಿದ್ದಾರೆ. ಈ ಯೋಜನೆಯಲ್ಲಿ 2.00 ಲಕ್ಷ ಕ್ಯೂಬಿಕ್ ಲೀಟರ್ ನೀರನ್ನು ಸಂರಕ್ಷಿಸಲಾಗಿದೆ. ಯೋಜನೆಯಲ್ಲಿ ಕಡಿಮೆ ನೀರಿನ ವಾಣಿಜ್ಯ ಬೆಳೆಗಳ ಕೃಷಿಯೊಂದಿಗೆ ನೂತನ ಸಂಶೋಧನೆಯ ಭತ್ತ, ತೊಗರಿ, ರಾಗಿ ಬೆಳೆಗಳನ್ನು ಬೆಳೆಯಲಾಗಿದೆ. ಕಷ್ಟಕರ ವಾತಾವರಣದಲ್ಲಿಯು ಸಹ ಕೃಷಿ ಮಾಡುವ ಸಂಶೋಧನೆಯ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿ.ನಾಗೇನಹಳ್ಳಿಯ ರೈತರ ಗ್ರಾಮ ವಿಕಾಸ ಚೇತನಕ್ಕೆ ಅರ್ಧ ಎಕರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಎಕರೆ ಹಾಗೂ ಸ್ತ್ರೀ ಶಕ್ತಿ ಕೇಂದ್ರಕ್ಕೆ ಅರ್ಧ ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.ಕೆ.ವಿ.ಕೆ. ಮತ್ತು ರೈತರ ಖುಷ್ಕಿ ಬೇಸಾಯದ ಸಾಧನೆ ವೀಕ್ಷಿಸಿ ಅಭಿನಂದಿಸಿದ ಶಾಸಕ ಡಾ.ಜಿ.ಪರಮೇಶ್ವರ್

g parameshwar

ಕೊರಟಗೆರೆ: ತಾಲೂಕಿನ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಕೇಂದ್ರ ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆಯನ್ನು ಹಿರೇಹಳ್ಳಿಯ ಕೆ.ವಿ.ಕೆ ವಿಜ್ಞಾನಿಗಳು ಮತ್ತು ನಮ್ಮ ರೈತರು ಶ್ರಮವಹಿಸಿ ಯಶಸ್ವಿಗೊಳಿಸಿರುವುದು ಒಣ ಬೇಸಾಯ ಪದ್ದತಿಯಲ್ಲಿ ರೈತರ ಜೀವನ ಮಟ್ಟ ಸುಧಾರಿಸುತ್ತದೆ ಎಂದು ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ತಾಲೂಕಿನ ಕೋಳಾಲ ಹೋಬಳಿಯ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಭಾರತೀಯ ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆಗೆ ಎಲೆರಾಂಪುರ ಗ್ರಾಮ ಪಂಚಾಯ್ತಿಗೆ ಕೇಂದ್ರ ಸರ್ಕಾರದ ಉತ್ತಮ್ ಪಂಚಾಯತ್ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಡಿ ನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಯೋಜನೆಯ ಸಮಗ್ರ ಅಭಿವೃದ್ದಿಯನ್ನು ಪರಿಶೀಲಿಸಿ ಮಾತನಾಡಿದರು.

2010 ರಲ್ಲಿ ಪ್ರಾರಂಭವಾದ ಈ ಯೋಜನೆ ಇಲ್ಲಿಯವರೆಗು ಬಹಳ ವ್ಯವಸ್ಥಿತವಾಗಿ ನಡೆದಿದೆ. ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಈ ಯೋಜನೆಯನ್ನು ಉತ್ತಮವಾಗಿ ಸಾಕಾರ ಮಾಡಿದ್ದಾರೆ. ನಮ್ಮ ರೈತರು ಇದನ್ನು ಒಪ್ಪಿಕೊಂಡು ಯಶಸ್ವಿಗೊಳಿಸಿದ್ದಾರೆ. ಈ ಯೋಜನೆ ಮಳೆಯಾದಾರಿತ ಖುಷ್ಕಿ ಬೇಸಾಯದ ರೈತರಿಗೆ ಅತ್ಯುತ್ತಮವಾಗಿ ಉಪಯುಕ್ತವಾಗಿದೆ. ಒಣಪ್ರದೇಶದಲ್ಲಿ ಲಾಭದಾಯಕ ಗೋಡಂಬಿ, ನಲ್ಲಿ, ಹುಣಸೆ ಸೇರಿದಂತೆ. ಇತರೆ ವಾಣಿಜ್ಯಬೆಳೆಗಳನ್ನು ಸಹ ಇಳಿಜಾರಿನ ಮಳೆನೀರನ್ನು ಉಪಯೋಗಿಸಿಕೊಂಡು ಬೆಳೆದಿರುವುದು ರೈತನ ಜೀವನ ಮಟ್ಟವನ್ನು ಸುಧಾರಿಸುತ್ತದೆ. ವ್ಯರ್ಥವಾಗಿ ಹರಿದುಹೋಗುವ ನೀರನ್ನು ತಡೆದುನಿಲ್ಲಿಸಿ ಉಪಯೋಗಮಾಡಿಕೊಂಡಿದ್ದು. ಕಡಿಮೆ ಮಳೆಯಲ್ಲಿಯೂ ನೀರನ್ನು ಸಂರಕ್ಷಣೆ ಮಾಡಿ ಬೇಸಾಯ ಮಾಡಿದ್ದು ಸುಮಾರು 85 ಕೃಷಿ ಹೋಂಡಾಗಳನ್ನು ಹಲವು ಚೆಕ್ ಡ್ಯಾಂ, ನಾಲಾ ಬದು, ಹೂಳೆತ್ತುವಿಕೆ, ಕೊಳವೆಬಾವಿ ಅಭಿವೃದ್ದಿ ಸೇರಿದಂತೆ ಮಾಡಿರುವ ಈ ಕೆಲಸಗಳು ನಿಜಕ್ಕು ಅಕಾಲಿಕ ಮಳೆಯನ್ನು ಕಡಿಮೆ ನೀರಿನ ಪ್ರಮಾಣವನ್ನು ತಡೆದುಕೊಳ್ಳುವ ಕೃಷಿ ಪದ್ದತಿಯಾಗಿದ್ದು, ಕೊರಟಗೆರೆ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಬಯಲು ಸೀಮೆಯ ಮಳೆಯಾಧಾರಿತ ಪ್ರದೇಶಗಳ ಒಣ ಬೇಸಾಯಕ್ಕೆ ಈ ಯೋಜನೆ ವಿಸ್ತಾರವಾಗಬೇಕಿದ್ದು, ರಾಜ್ಯ ಸರ್ಕಾರವು ಇದಕ್ಕೆ ಕೈಜೋಡಿಸಬೇಕಾಗಿದೆ. ಯೋಜನೆ ಯಶಸ್ವಿಗೆ ಕೃಷಿ ವಿಜ್ಞಾನಿಗಳು, ರೈತರು ಗ್ರಾಮ ಪಂಚಾಯತಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಹಿರೇಹಳ್ಳಿಯ ಕೆ.ವಿ.ಕೆ. ವಿಜ್ಞಾನಿ ಹಾಗೂ ಆಡಳಿತಾಧಿಕಾರಿ ಲೋಗಾನಂದನ್ ಮಾತನಾಡಿ, ಈ ಯೋಜನೆ ಜಲಾನಯನ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಿದ್ದು 2010 ರಲ್ಲಿ ನಮ್ಮ ಇಲಾಖೆಯ ಡಿ.ಜಿ. ರವರು ಉದ್ಘಾಟನೆ ಮಾಡಿದ್ದು ಯಶಸ್ವಿಗೆ ಎಲ್ಲರು ಕಾರಣರಾಗಿದ್ದಾರೆ. ಈ ಯೋಜನೆಯಲ್ಲಿ 2.00 ಲಕ್ಷ ಕ್ಯೂಬಿಕ್ ಲೀಟರ್ ನೀರನ್ನು ಸಂರಕ್ಷಿಸಲಾಗಿದೆ. ಯೋಜನೆಯಲ್ಲಿ ಕಡಿಮೆ ನೀರಿನ ವಾಣಿಜ್ಯ ಬೆಳೆಗಳ ಕೃಷಿಯೊಂದಿಗೆ ನೂತನ ಸಂಶೋಧನೆಯ ಭತ್ತ, ತೊಗರಿ, ರಾಗಿ ಬೆಳೆಗಳನ್ನು ಬೆಳೆಯಲಾಗಿದೆ. ಕಷ್ಟಕರ ವಾತಾವರಣದಲ್ಲಿಯು ಸಹ ಕೃಷಿ ಮಾಡುವ ಸಂಶೋಧನೆಯ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿ.ನಾಗೇನಹಳ್ಳಿಯ ರೈತರ ಗ್ರಾಮ ವಿಕಾಸ ಚೇತನಕ್ಕೆ ಅರ್ಧ ಎಕರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಎಕರೆ ಹಾಗೂ ಸ್ತ್ರೀ ಶಕ್ತಿ ಕೇಂದ್ರಕ್ಕೆ ಅರ್ಧ ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend