ಕೋವಿಡ್-19 ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿ – ಶಾಸಕರು ವೆಂಕಟರಾವ್ ನಾಡಗೌಡ…!!!

Listen to this article

ಕೋವಿಡ್-19 ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿ – ಶಾಸಕರು ವೆಂಕಟರಾವ್ ನಾಡಗೌಡ.

ಸಿಂಧನೂರು: ಕೋವಿಡ್ ಪರಿಸ್ಥಿತಿಯ ಅನುಗುಣವಾಗಿ ಇಂದು ಎಲ್ಲಾ ತಾಲೂಕು ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚೆ ಮಾಡಿ ಮೊದಲನೆಯ ಎರಡನೆಯ ಅಲೆಯಲ್ಲಿ ಮಾಡಿದ ತಪ್ಪನ್ನು ಮೂರನೇ ಅಲೆಯಲ್ಲಿ ಮರುಕಳಿಸದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ನಾಲ್ಕು ದಿನದಲ್ಲಿ ಸೋಂಕಿತರ ಸಂಖ್ಯೆ ಎರಡುನೂರು ಗಡಿದಾಟಿದೆ. ತಾಲೂಕಿನಲ್ಲಿ 5 ರಿಂದ 43 ಕೇಸುಗಳು ಪತ್ತೆಯಾಗಿವೆ. ದಿನೇದಿನೇ ಕೇಸುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿ ನಾಳೆಯಿಂದಲೇ ಶಿವಜ್ಯೋತಿ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಲಾಗುತ್ತದೆ. ಹೊರರಾಜ್ಯದಿಂದ ಮತ್ತು ಬೆಂಗಳೂರಿನಿಂದ ಬರುವಂತಹ ಮಾರ್ಗ ಮಧ್ಯೆ ದಡೇಸುಗೂರು ಹತ್ತಿರ ಚೆಕ್ ಪೋಸ್ಟ್ ಮತ್ತು ಹಂಚಿನಾಳಕ್ಯಾಂಪಿನ ಶಾಂತಿನಗರ ಚೆಕ್ಪೋಸ್ಟ್ ಗಳಲ್ಲಿ ವೈದ್ಯಾಧಿಕಾರಿಗಳ ತಂಡ ಮತ್ತು ಪೊಲೀಸ್ ಇಲಾಖೆ ಕೋವಿಡ್ ಕಾರ್ಯಚರಣೆ ಸೇವೆಯಲ್ಲಿ ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮತ್ತು ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಾಜರಾತಿ ಇರುವ ಮಕ್ಕಳಿಗೆ ಪ್ರೌಢಶಾಲೆಗಳಲ್ಲಿ 90% ಲಸಿಕೆ ಹಾಕಲಾಗಿದೆ ಇನ್ನುಳಿದ ವಿದ್ಯಾರ್ಥಿಗಳಿಗೆ ಲಸಿಕೆ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ. ಇನ್ನು ಕಾಲೇಜು ವಿದ್ಯಾರ್ಥಿಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರು 2119 ಜನ ಇದ್ದಾರೆ. ಸಂಬಂಧಪಟ್ಟ ಕಾಲೇಜಿನ ಪ್ರಿನ್ಸಿಪಾಲರಿಗೆ ಖಾಸಗಿ ಕಾಲೇಜುಗಳ ಅಸೋಸಿಯೇಷನ್ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಕಾಲೇಜುಗಳಲ್ಲಿ 82% ಫಸ್ಟ್ ಡೋಸ್, 78% ಸೆಕೆಂಡ್ ಡೋಸ್ ಪಿಯುಸಿ ವಿದ್ಯಾರ್ಥಿಗಳಲ್ಲಿ ಮುಗಿದಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಂದು ಕುಟುಂಬಕ್ಕೆ ಒಂದೇ ಶೌಚಾಲಯ ಮತ್ತು ಸ್ನಾನದ ಕೋಣೆ ಇರುವ ವ್ಯಕ್ತಿಗಳಿಗೆ ಪಾಸಿಟಿವ್ ಸೋಂಕು ಕಂಡು ಬಂದರೆ ಅಂತವರು ಕೋವಿಡ್ ಕೇರ್ ಸೆಂಟರಿಗೆ ಒಳಗಾಗಬೇಕಾಗುತ್ತದೆ ಎಂದರು.ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-19 ಪಾಸಿಟಿವ್ ಕೇಸ್ ಹೆಚ್ಚಾಗಿ ಕಂಡುಬರುವುದರಿಂದ ನಾವೆಲ್ಲರೂ ಕೋವಿಡ್ ನಿಯಮಗಳನ್ನು ಸರಿಯಾಗಿ ಮಾಸ್ಕ್ ದರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಯಾರು ಲಸಿಕೆ ಹಾಕಿಕೊಂಡಿರುವದಿಲ್ಲ ಅಂಥವರನ್ನು ಗುರುತಿಸಿ ಲಸಿಕೆ ಹಾಕಿಸುವುದರ ಮೂಲಕ ನಿಯಮಗಳನ್ನು ಕಟ್ಟುನಿಟ್ಟಾಗಿ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ ಕೊರೊನಾ ವಾರಿಯರ್ಸ್ ಜೊತೆ ಸಹಕರಿಸಿರಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರದ ಮಿನಿ ವಿಧಾನಸೌಧದ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕರು ವೆಂಕಟರಾವ್ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ಕೋವಿಡ್-19 ಮುಂಜಾಗ್ರತೆ ಕ್ರಮದ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಗ್ರೇಡ್ 2 ತಹಶೀಲ್ದಾರ್, ಆರೋಗ್ಯಾಧಿಕಾರಿಗಳು, ಸಮಾಜಕಲ್ಯಾಣ, ಸೇರಿದಂತೆ ಇತರರು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend