ರೈತರ ಹಬ್ಬ ಸುಗ್ಗಿಯ ಹಬ್ಬವೇ ಮಕರಸಂಕ್ರಮಣ.ಎಂ.ಪಿ. ಲತಾ ಮಲ್ಲಿಕಾರ್ಜುನ್…!!!

Listen to this article

ಜನಪದ ಸಂಭ್ರಮದ ಸಂಕ್ರಾಂತಿ

ರೈತರ ಹಬ್ಬ ಸುಗ್ಗಿಯ ಹಬ್ಬವೇ ಮಕರಸಂಕ್ರಮಣ.

ವರ್ಷವಿಡೀದುಡಿದು, ದಣಿದಿರುವಂತ ರೈತ ತನ್ನ ಶ್ರಮದ ಬದುಕಿಗೆ, ಗೌರವ ಕೊಡುವ ಹಿನ್ನೆಲೆಯ ಹಬ್ಬವೇ, ಈ ಮಕರ ಸಂಕ್ರಮಣ.

ರೈತ ತಾನು ಬೆಳೆದ ದವಸ-ಧಾನ್ಯ, ಕಾಳು-ಕಡಿಗೆ ಪೂಜ್ಯನೀಯ ಸ್ಥಾನ ಕೊಡುವಂತ ಹಿನ್ನೆಲೆಯ, ತರಹೇವಾರಿ ಭಕ್ಷ್ಯ-ಭೋಜನಗಳನ್ನು ತಯಾರಿಸಿ ತಾನೂ ಮತ್ತು ತನ್ನವರನ್ನೂ ಪ್ರೀತಿಯಿಂದ ಆಹ್ವಾನಿಸಿ,
ಜೊತೆ ಜೊತೆಗೆ, ಸವಿಯುವ ಹಬ್ಬವೇ ಈ ಮಕರ ಸಂಕ್ರಮಣ

ಸಂಕ್ರಮಣ ಅಂದರೆ ಬದಲಾವಣೆ.

ಬದುಕಿನಲ್ಲೂ ಬದಲಾವಣೆ, ಭಾವನೆಯಲ್ಲೂ ಬದಲಾವಣೆ.

ಮನುಷ್ಯ ರಾಗ-ದ್ವೇಷಗಳಿಂದ ಹೊರಬಂದು, ಪ್ರತಿಯೊಬ್ಬರಿಗೂ ಪ್ರೀತಿಯ ಸಿಂಚನವನ್ನು ಪಸರಿಸುವ ಹಬ್ಬವೇ ಈ ಮಕರ ಸಂಕ್ರಮಣ.

ಮೊಟ್ಟಮೊದಲ ಬಾರಿಗೆ 2018ರಲ್ಲಿ ಹರಪನಹಳ್ಳಿಯ ಧೀಮಂತ ನಾಯಕ, ಅಂದಿನ ಶಾಸಕರಾಗಿ ದ್ದಂತ ಮಾನ್ಯ ಎಂಪಿ ರವೀಂದ್ರ ಅವರು,

ಇಡೀ ಹರಪನಹಳ್ಳಿ ತಾಲೂಕಿನ ಜನರನ್ನು ಒಂದೆಡೆ ಸೇರಿಸಿ ಜನಪದ ಸಂಭ್ರಮದೊಂದಿಗೆ ಆಚರಿಸಿದ್ದ ಹಬ್ಬವೇ ಈ ಮಕರಸಂಕ್ರಮಣ.

ತಂದೆ ಎಂಪಿ ಪ್ರಕಾಶ್, ಸಹೋದರ ಎಂಪಿ ರವೀಂದ್ರ ರವರ ಹೆಜ್ಜೆಗಳಲ್ಲಿ ಹೆಜ್ಜೆಗಳನ್ನಿಡುತ್ತಿರುವ, ಹರಪನಹಳ್ಳಿಯ ಜನಸಾಮಾನ್ಯರ ನಾಯಕಿ, ನಮ್ಮೆಲ್ಲರ ಪ್ರೀತಿಯ ಅಕ್ಕ ಎಂಪಿ ಲತಾ ಮಲ್ಲಿಕಾರ್ಜುನ್, ಪ್ರಕಾಶ್ ಕುಟುಂಬದ ಕನಸು- ಕನವರಿಕೆಗಳ ಮುಂದುವರಿಕೆಯ ಭಾಗವಾಗಿ ಈ ವರ್ಷ 2022 ಜನವರಿ 14ನೇ ತಾರೀಕು ಶುಕ್ರವಾರ.

ನಿಟ್ಟೂರು ಗ್ರಾಮದ (ಮರಳು ಪಾಯಿಂಟ್) ತುಂಗಭದ್ರ ತಟದ, ನಿಸರ್ಗದ ರಮಣೀಯ ಸೊಬಗಿನಲ್ಲಿ ಜನಪದ ಸಂಭ್ರಮದೊಂದಿಗೆ ನೆರವೇರಲಿದೆ

ತಮಗೆಲ್ಲರಿಗೂ ಈ ಮೂಲಕ ಪ್ರೀತಿಯ ಆಹ್ವಾನವನ್ನು ನೀಡಲಿದ್ದೇನೆ..

ವಿನಮ್ರಪೂರ್ವಕವಾಗಿ ಎಂಪಿ ಲತಾ ಮಲ್ಲಿಕಾರ್ಜುನ್
ಪ್ರಧಾನ ಕಾರ್ಯದರ್ಶಿ
ರಾಜ್ಯ ಮಹಿಳಾ ಕಾಂಗ್ರೆಸ್ಹರಪನಹಳ್ಳಿ.

ವರದಿ. ಪ್ರತಾಪ್. ಸಿ. ಹರಪನಹಳ್ಳಿ

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend