ನ್ಯಾಷನಲ್ 800ಮೀಟರ್ ಓಟ ಚಿನ್ನಕ್ಕೆ ಮುತ್ತಿಟ್ಟ ಕಮಲಾಕ್ಷಿ ತೀರ್ಥಭಾವಿ…!!!

Listen to this article

ನ್ಯಾಷನಲ್ 800ಮೀಟರ್ ಓಟ ಚಿನ್ನಕ್ಕೆ ಮುತ್ತಿಟ್ಟ ಕಮಲಾಕ್ಷಿ ತೀರ್ಥಭಾವಿ.
ಸಿಂಧನೂರು. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತೀರ್ಥಬಾವಿ ಗ್ರಾಮದ ಹಳ್ಳಿ ಪ್ರತಿಭೆ. ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿಯಲ್ಲಿ ಬಿ ಎ ಐದನೇ ಸೆಮಿಸ್ಟರ್ ಓದುತ್ತಿದ್ದು ಮಸ್ಕಿಯ ಬಾಲಕಿಯರ ವಸತಿ ನಿಲಯದಲ್ಲಿ ಇರುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ಬಿಜಾಪುರದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ದೆಹಲಿಯ ಆಗ್ರದಲ್ಲಿ ಜನವರಿ 8,9,10 ರಂದು ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದು ಜಯಶೀಲಳಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವರ ತಂದೆ ದ್ಯಾಮನಗೌಡ ಮತ್ತು ಅವರ ಸಹೋದರ ಮುದುಕನ ಗೌಡ ಬೆನ್ನೆಲುಬಾಗಿ ನಿಂತು ಇವರ ಸಾಧನೆಗೆ ಸಹಕಾರಿಯಾಗಿದ್ದಾರೆ. ಚಿನ್ನದ ಪದಕಕ್ಕೆ ಮುತ್ತಿಟ್ಟ ಕಮಲಾಕ್ಷಿ ಯನ್ನು ಸಂದರ್ಶಿಸಿದಾಗ ತಾನು ಕ್ರೀಡೆಯ ಜೊತೆಗೆ ಭಾರತೀಯ ಸೇನೆಗೆ ಸೇರಬೇಕು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು. ಎಲ್ಲರ ಪ್ರೀತಿ ಅಭಿಮಾನ ಹೀಗೆ ಇರಲಿ ನಿಮ್ಮೆಲ್ಲರ ಆಶೀರ್ವಾದ ಹೀಗೆ ಇದ್ರೆ ಅಂತರಾಷ್ಟ್ರೀಯ ಮಟ್ಟದಲ್ಲೂ ಜಯಸಾಧಿಸಿ ಬರುತ್ತೇನೆ. ಹಾಗೂ ನಾನು ದೆಹಲಿಗೆ ತೆರಳಲು ಸಹಾಯ ಮಾಡಿದ ಮಸ್ಕಿ ಕ್ಷೇತ್ರದ ಶಾಸಕರು ಬಸನಗೌಡ ತುರುವಿಹಾಳ, ಹಾಗೂ ಶಿವಣ್ಣ ನಾಯಕ ವೆಂಕಟಾಪುರ್ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರು ಮಸ್ಕಿ, ಹನುಮಂತ ಗ್ರಾಮ ಪಂಚಾಯತಿ ಅಧ್ಯಕ್ಷರಿಗು ಧನ್ಯವಾದ ಹೇಳಿದರು. ಮುಂದೆ ನಡೆಯುವ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಊರು ನಮ್ಮ ಜಿಲ್ಲೆಗೆ ಹೆಸರು ತರುವಂತಹ ಕೆಲಸ ಮಾಡುತ್ತೇನೆ ಎಂದು ಹೇಳಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend