ಹಲವು ಕಾಮಗಾರಿಗಳಿಗೆ ಅಡಿಗಲ್ಲು ಪೂಜೆ ನೆರವೇರಿಸಿದರ ಪ್ರಿಯಾಂಕ ಖರ್ಗೆ…!!!

Listen to this article

ವಾಡಿ ಪಟ್ಟಣದಲ್ಲಿ ಇಂದು ಬರೋಬ್ಬರಿ ರೂ‌ 5.55 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕೆಳಗೆ ನೀಡಿರುವ ಕಾಮಗಾರಿಗಳಿಗೆ ಇಂದು ಅಡಿಗಲ್ಲು ನೆರವೇರಿಸಿದ ಪ್ರಿಯಾಂಕಾ ಖರ್ಗೆ .

ಕಾಮಗಾರಿಗಳ ವಿವರ :

1) ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ವತಿಯಿಂದ ವಾಡಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಮುಖ್ಯ ಪೈಪ್ ಲೈನ್ ಅಳವಡಿಕೆ ಅಡಿಗಲ್ಲು. ಅಂದಾಜು ಮೊತ್ತ 56 ಲಕ್ಷ .

2) PWD ಇಲಾಖೆ ವತಿಯಿಂದ ವಾಡಿ ಪಟ್ಟಣದ ಬಳವಡಿಗಿ ಗ್ರಾಮದಿಂದ ಶ್ರೀನಿವಾಸ ಚೌಕ ವರೆಗೆ ಪುಟ್ ಪಾತ್ ನಿರ್ಮಾಣ ಹಾಗೂ ಬೀದಿ‌ದೀಪ‌ ಅಳವಡಿಕೆಗೆ ಅಡಿಗಲ್ಲು. ಅಂದಾಜು ಮೊತ್ತ ರೂ 250 ಲಕ್ಷ.

3) PWD ಇಲಾಖೆ‌ವತಿಯಿಂದ ವಾಡಿ ಪಟ್ಟಣದ ವಾರ್ಡ್‌ ಬಂಬರ ೭ ಹಾಗೂ ವಾಡರ್ ನಂಬರ ೮ ರಲ್ಲಿ ನಿರ್ಮಿಸಲಾಗುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅಡಿಗಲ್ಲು. ಅಂದಾಜು ಮೊತ್ತು ರೂ 100 ಲಕ್ಷ.

4) PWD ವತಿಯಿಂದ ವಾಡಿ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಪ್ರೌಢಶಾಲೆ ಕೋಣೆಯ ಉದ್ಘಾಟನೆ. ‌ಅಂದಾಜು ಮೊತ್ತ ರೂ 17 ಲಕ್ಷ.

5) ಪುರಸಭೆ ವತಿಯಿಂದ ವಾಡಿ ಪಟ್ಟಣದಲ್ಲಿ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದ ಉದ್ಘಾಟನೆ. ಅಂದಾಜು ಮೊತ್ತ ರೂ 13.25 ಲಕ್ಷ.

6) ಪುರಸಭೆ ವತಿಯಿಂದ ವಾಡಿ ಪಟ್ಟಣದ ಶುದ್ದಿಕರಣ ಘಟಕಕ್ಕೆ ಬಣ್ಣ ಬಳೆಯುವುದು ಉದ್ಘಾಟನೆ.‌ ಅಂದಾಜು ಮೊತ್ತ ರೂ 5 ಲಕ್ಷ.

7) ಪುರಸಭೆ ವತಿಯಿಂದ ವಾಡಿ ಪಟ್ಟಣದ ವಾರ್ಡ್ ನಂಬರ 7 ರಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿ ಉದ್ಘಾಟನೆ. ಅಂದಾಜು ಮೊತ್ತ ರೂ 10 ಲಕ್ಷ.

8 ) ಪುರಸಭೆ ವತಿಯಿಂದ ವಾರ್ಡ್ ನಂಬರ 18 ರಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಉದ್ಘಾಟನೆ. ಅಂದಾಜು ಮೊತ್ತ ರೂ 11 ಲಕ್ಷ.

9) ಪುರಸಭೆ ವತಿಯಿಂದ ವಾಡಿ ಪಟ್ಟಣದ ಬಲರಾಮ್ ಚೌಕದಿಂದ ಘನತ್ಯಾಜ್ಯ ಘಟಕದ ವರೆಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಉದ್ಘಾಟನೆ.‌ ಅಂದಾಜು ಮೊತ್ತ ರೂ 8 ಲಕ್ಷ.

10) ಪುರಸಭೆ ವಾಡಿ ವತಿಯಿಂದ ವಾಡಿ ಪಟ್ಟಣದ ವಾರ್ಡ್ ನಂಬರ 7 ರಲ್ಲಿ ಪೈಪ್ ಲೈನ್ ಅಳವಡಿಸುವುದು ಹಾಗೂ ವಾರ್ಡ ನಂಬರ 12 ರಲ್ಲಿ ಕೊಳೆವೆ ಬಾವಿ ಕೊರೆದು ಮೋಟರ್ ಅಳವಡಿಕೆ ಕಾಮಗಾರಿ ಉದ್ಘಾಟನೆ. ಅಂದಾಜು ಮೊತ್ತ ರೂ 14.50 ಲಕ್ಷ.

11) ಪುರಸಭೆ ವತಿಯಿಂದ ವಾಡಿ ಪಟ್ಟಣದಲ್ಲಿ ಕುಡಿಯುವ ನೀರಿನ ಘಟಕದಲ್ಲಿ ಮೋಟರ್ ಅಳವಡಿಕೆ ಹಾಗೂ ವಾರ್ಡ್ ನಂಬರ 12 ರಲ್ಲಿ ಮೋಟರ್ ರಿಪೇರಿ ಮತ್ತು ಜಾಕ್ ವೆಲ್ ಟ್ಯಾಂಕ್ ಹೂಳೆತ್ತುವ ಕಾಮಗಾರಿಗೆ ಅಡಿಗಲ್ಲು. ಅಂದಾಜು ಮೊತ್ತ ರೂ 11 ಲಕ್ಷ.

12) ಪುರಸಭೆ ವತಿಯಿಂದ ವಿವಿಧ ವಾರ್ಡ್ಗಳಲ್ಲಿ ಮೋಟಾರ್ ಅಳವಡಿಕೆ ಹಾಗೂ ಪೈಪ್ ಲೈನ್ ಅಳವಡಿಕೆಗೆ ಅಡಿಗಲ್ಲು. ಅಂದಾಜು ಮೊತ್ತ ರೂ‌10.07 ಲಕ್ಷ.

13) ಪುರಸಭೆ ವತಿಯಿಂದ ವಾಡಿ ಪಟ್ಟಣದಲ್ಲಿ ಪುರಸಭೆ ಕಾರ್ಯಾಲಯ ನವೀಕರಣ ಹಾಗೂ‌ ಪೀಠೋಪಕರಣ ಖರೀದಿ ಅಡಿಗಲ್ಲು. ಅಂದಾಜು ಮೊತ್ತ ರೂ 20.78 ಲಕ್ಷ.

14) ಪುರಸಭೆ ವತಿಯಿಂದ ವಾಡಿ ಪಟ್ಟಣದಲ್ಲಿ ಸಿಸಿ ಟಿವು ಕ್ಯಾಮರ ಅಳವಡಿಕೆ ಕಾಮಗಾರಿಗೆ ಅಡಿಗಲ್ಲ. ಅಂದಾಜು ಮೊತ್ತ ರೂ 10 ಲಕ್ಷ.

15) ಪುರಸಭೆ ವತಿಯಿಂದ ವಾರ್ಡ್ ನಂಬರ್ 23 ಹಾಗೂ 02 ರಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು. ಅಂದಾಜು ಮೊತ್ತ ರೂ 9 ಲಕ್ಷ.

16) ಪುರಸಭೆ ವತಿಯಿಂದ ವಾರ್ಡ್ ನಂಬರ 22 ರಲ್ಲಿ ಸಿಸಿ.ರಸ್ತೆ, ಚರಂಡಿ, ಅಶೋಕ‌ ಸ್ಥಂಭ ನಿರ್ಮಾಣ‌ ಕಾಮಗಾರಿಗೆ ಅಡಿಗಲ್ಲು. ಅಂದಾಜು‌ ಮೊತ್ತ ರೂ 10 ಲಕ್ಷ.

17) ಪಂಚಾಯತ ರಾಜ್‌ಇಂಜೀನಿಯರಿಂಗ್ ಇಲಾಖೆ ವತಿಯಿಂದ ವಾಡಿ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು. ಅಂದಾಜು ಮೊತ್ತ ರೂ 16 ಲಕ್ಷ.

ಅಭಿವೃದ್ಧಿ ಬಯಸಿ ನನ್ನನ್ನು ಆರಿಸಿದ ಚಿತ್ತಾಪುರ ಕ್ಷೇತ್ರಕ್ಕೆ ಪ್ರತಿನಿತ್ಯ ಇಂತಹ ಯೋಜನೆಗಳನ್ನು ಜಾರಿಗೊಳಿಸುವುದೇ ನನ್ನ ಗುರಿಯಾಗಿರಲಿದೆ.

ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವುದು ಘೋಷಣೆಯಾಗಿತ್ತು. ಆದರೆ, ಭ್ರಷ್ಟ ಬಿಜೆಪಿ ಸರ್ಕಾರ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಎಂದು ವ್ಯಾಖ್ಯಾನ ಬದಲಿಸಿದೆ. ಜನರ ಹಾಗೂ ರೈತರ ಪರ ಯೋಜನೆ ಜಾರಿಗೊಳಿಸದ ಬಿಜೆಪಿ ನಾಯಕರು ಪೈಪೋಟಿಗೆ ಬಿದ್ದವರಂತೆ ಆಡಿಯೋ, ವಿಡಿಯೋ‌ ತಯಾರಿಸಿ‌ ಬಿಡುಗಡೆ ಮಾಡುವುದರಲ್ಲೇ ಬಿಜಿ ಆಗಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ. ಸಿಲೆಂಡರ್ ರೇಟ್ ದುಪ್ಪಟ್ಟಾಗಿದೆ‌ ಇದು ಮೋದಿ ಅವರ ‘ಅಚ್ಛೇ ದಿನ್’.

ಜಿಲ್ಲೆಯಲ್ಲಿ ಗಾಂಜಾದಂತ ಮಾದಕಪದಾರ್ಥಗಳು ಖುಲ್ಲಾಂ ಖುಲ್ಲ ಮಾರಾಟವಾಗುತ್ತಿದೆ. ಗಾಂಜಾ ಜಪ್ತಿ ಮಾಡಲು ಬೇರೆ ರಾಜ್ಯದಿಂದ ಪೊಲೀಸರು ಕಲಬುರಗಿಗೆ ಬರಬೇಕಾಯ್ತು‌. ಪೊಲೀಸರು ದುಷ್ಕರ್ಮಿಗಳೊಂದಿಗೆ ಕೈ‌ಜೋಡಿಸಿರುವುದು ಅವರಿಗೆ ಗೊತ್ತಾಗಿದೆ.

ಬಿಜೆಪಿಯವರಿಗೆ ಗಾಂಧಿ ಆದರ್ಶವಲ್ಲ ಅವರಿಗೆ ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆ ಮಾತ್ರ ಆದರ್ಶ. ತಮ್ಮನ್ನು ತಾವು ದೇಢಭಕ್ತರು ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರನ್ನ ವಂಶವಾಧಿಗಳು ಎಂದು ಕರೆಯುತ್ತಾರೆ. ಯಾಕೆ ಅವರ ಲೀಡರ್ ಗಳ ಮಕ್ಕಳು ರಾಜಕೀಯಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದರು.

ಆರ್ಟಿಕಲ್ 371 (ಜೆ) ಪ್ರಕಾರ ಈ ಭಾಗದ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದೇವೆ. ಈಗ ಅಧಿಕಾರಕ್ಕೆ‌ ಬಂದ ಎಂಪಿ ಉಮೇಶ್ ಜಾಧವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಬದಲು ಬರೀ ಪತ್ರಿಕೆಗಳಲ್ಲಿ ಮೋದಿ ತರ ಫೋಸ್ ಕೊಟ್ಟು ಎರಡನೆಯ ಮೋದಿಯಾಗಿದ್ದಾರೆ ಎಂದು ವ್ಯಂಗ್ಯ ವಾಡಿದರು.

ವಾಡಿ ನ್ಯೂ ಟೌನ್ ಗೆ ಈಗಾಗಲೇ ರೂ 200 ಕೋಟಿ ಖರ್ಚಾಗಿದೆ. ಇನ್ನೂ ರೂ 400 ಕೋಟಿ ಬೇಕು. ನಾನು‌ ಹೇಗಾದರೂ ಮಾಡಿ ಅನುದಾನ ತಂದು ಯೋಜನೆಯನ್ನು ಪೂರ್ಣಗೊಳಿಸುತ್ತೇನೆ. ಅಭಿವೃದ್ದಿ ವಿಚಾರದಲ್ಲಿ ಬಹಿರಂಗ ಚರ್ಚೆ ನಡೆಸುವುದಿದ್ದರೆ ವಾಡಿಯಲ್ಲೇ ಒಂದು ವೇದಿಕೆ ನಿರ್ಮಿಸುತ್ತೇವೆ ತಾಕತ್ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು‌ ಬಿಜೆಪಿ ನಾಯಕರಿಗೆ ನನ್ನ ಸವಾಲನ್ನು ನೀಡಿದ್ದೇನೆ.

ವೇದಿಕೆಯ ಮೇಲೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹೆಮೂದ್ ಸಾಹೇಬ್, ಭೀಮಣ್ಣ ಸಾಲಿ, ನಾಗರೆಡ್ಡಿ ಕರದಾಳ, ಶಿವಾನಂದ ಪಾಟೀಲ್, ಶಿವರುದ್ರ ಭೇಣಿ, ಚಿದಾನಂದ ಸ್ವಾಮಿ, ಅಣ್ಣಾರಾವ್ ಪಾಟೀಲ ಸೇರಿದಂತೆ ಮತ್ತಿತರಿದ್ದರು ಜೊತೆಗಿದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend