ಭಾರತ🇮🇳ವಿದ್ಯಾರ್ಥಿ ಫೆಡರೇಶನ್ SFI52 ನೇ ಸಂಸ್ಥಾಪನಾದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು…!!!

Listen to this article

ಭಾರತ🇮🇳ವಿದ್ಯಾರ್ಥಿ ಫೆಡರೇಶನ್ SFI52 ನೇ ಸಂಸ್ಥಾಪನಾದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು.* ✍🏼🌹✊🏽 (1970-2021) *SFI…
——ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ——

ಸಂಗಾತಿಗಳೇ..
*ಭಾರತ🇮🇳 ವಿದ್ಯಾರ್ಥಿ ಫೆಡರೇಶನ್*_ (ಎಸ್ಎಫ್ಐ)
“ಸರ್ವರಿಗೂ ಸಮಾನ ಗುಣಮಟ್ಟದ ಮತ್ತು ವೈಜ್ಞಾನಿಕ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ದೇಶ ಅಗ್ರಗಣ್ಯ ವಿದ್ಯಾರ್ಥಿ ಸಂಘಟನೆಯಾಗಿದ್ದು. ಬ್ರಿಟಿಷ್ ವಸಾಹತು ಆಳ್ವಿಕೆಯಿಂದ ರಾಷ್ಟ್ರೀಯ ವಿಮೋಚನೆಗಾಗಿನ ಭಾರತೀಯ ಜನತೆಯ ಹೋರಾಟದ ಸಾಮ್ರಾಜ್ಯಶಾಹಿ-ವಿರೋಧಿ ದೇಶಪ್ರೇಮಿ, ಜಾತ್ಯತೀತ ,ಪ್ರಜಾಸತ್ತಾತ್ಮಕ ಮತ್ತು ಪ್ರಗತಿಪರ ಪರಂಪರೆಯ ಉತ್ತರಾಧಿಕತ್ವದ ಹಿರಿಮೆಯನ್ನು ಹೊಂದಿದೆ. ಸಾಮಾಜಿಕ ಬದಲಾವಣೆಗಾಗಿ ವಿಶಾಲ ಹೋರಾಟದ ಅವಿಭಾಜ್ಯ ಅಂಗ ಎಂದು ಎಸ್ಎಫ್ಐ ಯಾವಾಗಲೂ ತನ್ನನ್ನು ಪರಿಗಣಿಸಿ ಕೊಂಡಿದೆ. ನಮ್ಮ ದೇಶಪ್ರೇಮಿ ಭಗತ್ ಸಿಂಗ್ ಹಾಗೂ ಕ್ರಾಂತಿಕಾರಿ ಹುತಾತ್ಮ ಸಂಗಾತಿಗಳ ಆಶಯಗಳನ್ನು ಮತ್ತು ಪ್ರಗತಿಪರ ವಿದ್ಯಾರ್ಥಿ ಚಳುವಳಿಯ ಪರಂಪರೆಯನ್ನು ಮುಂದುವರೆಸುತ್ತಿದೆ.

*” ಸ್ವಾತಂತ್ರ್ಯ ,ಪ್ರಜಾಪ್ರಭುತ್ವ, ಸಮಾಜವಾದ “* ಎಂಬ ತನ್ನ ಘೋಷಣೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಇಂಥ ಪರಂಪರೆಯನ್ನು ಎತ್ತರಕ್ಕೆ ಎತ್ತಿಹಿಡಿದಿದೆ. ಆಗಸ್ಟ್ 12, 1936 ರಲ್ಲಿ ಸ್ಥಾಪನೆಯಾದ ದೇಶದ ಮೊದಲ ವಿದ್ಯಾರ್ಥಿ ಸಂಘಟನೆಯಾದ ಎಐಎಸ್ಎಫ್ ನ ಮೊದಲಿನ ಪರಂಪರೆ ಒಳಗೊಂಡ ಒಂದು ಸಮರಶೀಲ ವಿದ್ಯಾರ್ಥಿ ಸಂಘಟನೆಯನ್ನು *1970 ಡಿಸೆಂಬರ್ 27 ರಿಂದ 30ರವರೆಗೆ ಕೇರಳದ ತಿರುವನಂತಪುರಂ ನಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಸ್ಥಾಪಿಸಲ್ಪಟ್ಟಿತು.*

ಎಸ್ಎಫ್ಐ ಸಂಘಟನೆ ಸ್ವತಂತ್ರ, ವೈಜ್ಞಾನಿಕ, ಪ್ರಗತಿಪರ, ಪ್ರಜಾಸತ್ತಾತ್ಮಕ, ಮತ್ತು ಧರ್ಮ ನಿರಪೇಕ್ಷ ಗುಣ ಲಕ್ಷಣಗಳನ್ನು ಶ್ರದ್ದೆಯಿಂದ ರಕ್ಷಿಸಿಕೊಂಡಿದೆ.ಈ ಸಂಘಟನೆಯ ಎಲ್ಲ ಹಂತದ ಸಮಿತಿಗಳು ಸಾಮೂಹಿಕ ನಾಯಕತ್ವ, ಆಂತರಿಕ ಪ್ರಜಾಪ್ರಭುತ್ವದ ಸಂಘಟನಾ ವಿಧಾನಗಳನ್ನು ಅಳವಡಿಸಿಕೊಂಡಿರುವ ದೇಶದ ಅಗ್ರಗಣ್ಯ ವಿದ್ಯಾರ್ಥಿ ಸಂಘಟನೆಯಾಗಿದೆ. ಆದ್ದರಿಂದಲೇ ದೇಶಾದ್ಯಂತ ಎಸ್ಎಫ್ಐ ಸುಮಾರು 50 ಲಕ್ಷ ಸದಸ್ಯರನ್ನು ಒಳಗೊಂಡಿರುವುದು. ನಮ್ಮ ಎಸ್ಎಫ್ಐ ಸಂಘಟನೆಗೆ ತನ್ನದೇ ಆದ ಸಂವಿಧಾನ ಮತ್ತು ಕಾರ್ಯಕ್ರಮ ಹೊಂದಿದೆ.
ಆದ್ದರಿಂದಲೇ 1970 ರಲ್ಲಿ ಕೇವಲ 5000 ಸದಸ್ಯರಿಂದ ಪ್ರಾರಂಭವಾದ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಇಂದು ದೇಶಾದ್ಯಂತ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ- ಗುಜರಾತ್ ನಿಂದ ತ್ರಿಪುರಾದ ವರೆಗೂ ವಿಶಾಲ ಭಾರತಾದ್ಯಂತ ಬಹುತೇಕ ಎಲ್ಲಾ ರಾಜ್ಯಗಳ , ವಿಶ್ವವಿದ್ಯಾಲಯಗಳ, ಕ್ಯಾಂಪಸ್ ಗಳಲ್ಲಿ 50 ಲಕ್ಷದಷ್ಟು ಸದಸ್ಯರು ಹಾಗೂ ವಿಶಾಲ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಭಾರತ ದೇಶದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಆದ್ದರಿಂದಲೇ ಜೆಎನ್ಯು, ಪಾಂಡಿಚೇರಿ, ಜೈಪುರ್, ಅಹ್ಮದಾಬಾದ್, ಜಾಮೀಯಾ ಮಿಲಿಯಾ, ಕೊಲ್ಕತ್ತಾ, ಹೀಗೆ ದೇಶಾದ್ಯಂತ ನಡೆದ ಹಲವು ಕಡೆ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಎಡ, ಪ್ರಜಾಸತ್ತಾತ್ಮಕ, ದಲಿತ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟಗಳು ಜಯಭೇರಿ ಬಾರಿಸಿವೆ. ಇತ್ತಿಚಿನ ವರ್ಷಗಳಲ್ಲಿ ದೇಶಾದ್ಯಂತ ವಿದ್ಯಾರ್ಥಿ ಚಳುವಳಿಗಳು ದೊಡ್ಡ ಹೋರಾಟಗಳನ್ನು ನಡೆಸಿರುವುದನ್ನು ನಾವು ಗಮನಿಸಿರಬಹುದು.

ಆರಂಭದಿಂದಲೂ ಅಧ್ಯಯನ , ಹೋರಾಟ, ತ್ಯಾಗ ಪರಂಪರೆಯಿಂದ ನವ ಉದಾರವಾದಿ ಆರ್ಥಿಕ ನೀತಿಗಳಾದ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ, ಕೇಸರೀಕರಣ, ಕೋಮುವಾದಿ ಮತಾಂಧ, ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ರಾಜಿ ರಹಿತ ಸಮರಶೀಲ ಹೋರಾಟಗಳಲ್ಲಿ ಇದುವರೆಗೂ 276 ಜನ ಎಸ್ಎಫ್ಐ ಕಾರ್ಯಕರ್ತರು ಪ್ರಾಣ ತ್ಯಾಗ ಮಾಡಿರುವ ಸಂಘರ್ಷದ ಇತಿಹಾಸ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯದ್ದಾಗಿದೆ.

ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ಎಫ್ಐ ಹೋರಾಟದ ಘೋಷಣೆಯಾದ ” ಸರ್ವರಿಗೂ ಶಿಕ್ಷಣ ಸರ್ವರಿಗೂ ಉದ್ಯೋಗ” ವಿದ್ಯಾರ್ಥಿ ಸಮುದಾಯದಲ್ಲಿ ಒಂದು ಬಲವಾದ ಆಕರ್ಷಣೆಯನ್ನು ಗಳಿಸಿಕೊಂಡಿದೆ. ಸಾರ್ವಜನಿಕ ಶಿಕ್ಷಣ ಕ್ಷೇತ್ರದ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಅಧ್ಯಯನ ಮತ್ತು ಹೋರಾಟದೊಂದಿಗೆ ನಿರಂತರವಾಗಿ ವಿದ್ಯಾರ್ಥಿ ಸಮುದಾಯವನ್ನು ವೈಚಾರಿಕವಾಗಿ ಜಾಗೃತಗೊಳಿಸುತ್ತದೆ ನಾಯಕತ್ವ ಗುಣಗಳನ್ನು ರೂಪಿಸುತ್ತಿದೆ. ವಿದ್ಯಾರ್ಥಿ ದೆಸೆಯಲ್ಲಿ ಎಸ್ಎಫ್ಐ ನೊಂದಿಗೆ ತೊಡಗಿಸಿಕೊಂಡಿದ್ದವರು ಇಂದು ಸಮಾಜದ ವಿವಿಧ ಸ್ತರಗಳಲ್ಲಿ ಜನಪರವಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ನೋಡಬಹುದು. ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಗೆ ಈಗ ಸುವರ್ಣ ಮಹೋತ್ಸವ ಮುಗಿಸಿ 52 ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ.
ಈ *ಐದು ದಶಕಗಳ ಕ್ರಾಂತಿಕಾರಿ ವಿದ್ಯಾರ್ಥಿ ಚಳುವಳಿಯನ್ನು ದೇಶ, ನಾಡಿನಾದ್ಯಂತ ಕಟ್ಟಿ ಬೆಳೆಸಲು ತ್ಯಾಗ ಬಲಿದಾನ ಮಾಡಿದ, ನಿರಂತರವಾಗಿ ಶ್ರಮಿಸಿದ, ಎಸ್ಎಫ್ಐ ಹೋರಾಟಗಳಲ್ಲಿ ಭಾಗವಹಿಸಿದ್ದ ನಿಮ್ಮೆಲ್ಲರ ಆಶಯಗಳು , ಕನಸುಗಳನ್ನು ಸಾಕಾರಗೊಳಿಸಲು “ಸ್ವಾತಂತ್ರ್ಯ,ಪ್ರಜಾಪ್ರಭುತ್ವ, ಸಮಾಜವಾದ” ಶ್ವೇತಾ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುವ ದೃಢ ಸಂಕಲ್ಪದೊಂದಿಗೆ ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ನಿಮ್ಮೆಲ್ಲರಿಗೂ ಕ್ರಾಂತಿಕಾರಿ ಅಭಿವಂದನೆಗಳನ್ನು ಬಯಸುತ್ತದೆ.

ಭಾರತ ವಿದ್ಯಾರ್ಥಿ ಫೆಡರೇಶನ್
SFI_ಕರ್ನಾಟಕ ರಾಜ್ಯ ಸಮಿತಿ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend