ಕೂಡ್ಲಿಗಿ:ಪೇಟೆ ದೈವಸ್ಥರ ಹಬ್ಬ,ಶ್ರೀಪೇಟೆಬಸವೇಶ್ವರ ಕಾರ್ತೀಕೋತ್ಸವ…!!!

Listen to this article

ಕೂಡ್ಲಿಗಿ:ಪೇಟೆ ದೈವಸ್ಥರ ಹಬ್ಬ,ಶ್ರೀಪೇಟೆಬಸವೇಶ್ವರ ಕಾರ್ತೀಕೋತ್ಸವ..

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮೂಲ ದೇವಸ್ಥಾನವಾದ,ಶ್ರೀಪೇಟೆಬಸವೇಶ್ವರ ಕಾರ್ತೀಕೋತ್ಸವ ಡಿ30ರಂದು ಸಂಜೆ ಜರುಗಿತು.ಕಾರ್ತೀಕೋತ್ಸವ ನಿಮಿತ್ತ ನಂದಿಕೋಲು ಸಮ್ಮಾಳ ವಾದ್ಯವೃಂದ ಸಮೇತ ಪಲ್ಲಕ್ಕಿ ಉತ್ಸವ ಜರುಗಿತು,ಮಕ್ಕಳು ಮಹಿಳೆಯರು ನಾಗರೀಕರು ನೂರಾರು ಭಕ್ತಾದಿಗಳು ಭಕ್ತಿ ಶ್ರದ್ಧೆಯಿಂದ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡರು.ಗುರುವಾರ ರಾತ್ರಿ ಕಾರ್ತೀಕೋತ್ಸವ ಪ್ರಯುಕ್ತ ವಿವಿದ ಧಾರ್ಮಿಕ ಕೈಂಕರ್ಯಗಳು ಜರುಗಿದವು,ಶ್ರೀಸಿದ್ದಯ್ಯನಗುಡ್ಡಕ್ಕೆ ಬಸವೇಶ್ವರ ಪಲ್ಲಕ್ಕಿಯೊಂದಿಗೆ ತೆರಳುವ ಪೇಟೆಯ ಭಕ್ತಾದಿಗಳು,ಗುಡ್ಡದ ಶ್ರೀಸಿದ್ದಯ್ಯಗೆ ಕಾರ್ತೀಕೋತ್ಸ ದೀಪೋತ್ಸವದೊಂದಿಗೆ ವಿಷೇಶ ಪೂಜೆಗೈಯ್ಯುತ್ತಾರೆ.ಬೆಳ್ಳಂಬೆಳಿಗ್ಗೆ ಬಸವೇಶ್ವರ ದೇವರ ಪಲ್ಲಕ್ಕಿ ಶ್ರೀಊರಮ್ಮ ದೇವಿ ಹೊಂಡಕ್ಕೆ ತೆರಳಿ,ಶ್ರೀಗಂಗೆ ಪೂಜೆಗೈದು ಸಮ್ಮಾಳ ಸೂಸ್ತ್ರ ಪೂಜೆ ಮುಗಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಪಲ್ಲಕ್ಕಿ ಸನ್ನಿದಾನಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಮಹಿಳೆಯರು ವೃದ್ಧರಾದಿಯಾಗಿ, ಶೈವ ಪಂಥದವರ ಧಾರ್ಮಿಕ ನಡೆಯ ಶ್ರೀವೀರಭದ್ರೇಶ್ವರ ಸೂಸ್ತ್ರವನ್ನು ಧರಿಸಿ ಹರಕರ ತೀರಿಸುತ್ತಾರೆ. ಗುರುವಾರ ಹಾಗೂ ಶುಕ್ರವಾರದಂದು ಜರುಗುವ ಕಾರ್ತೀಕೋತ್ಸವದಲ್ಲಿ,ಶ್ರೀ ವೀರಭದ್ರೇಶ್ವರ ಹಲಗೆ ಉಳ್ಳವರು ಧಾರ್ಮಿಕ ವಿಧಿ ವಿಧಾನಗಳನ್ನ ಅನುಸರಿಸುವ ಮೂಲಕ ಶ್ರದ್ಧೆ ತೋರುತ್ತಾರೆ.ಅವರು ಹಾಕುವ ಸಸ್ತ್ರವನ್ನು ಭಕ್ತರು ಬಹು ಶ್ರದ್ಧಾಭಕ್ತಿಯಿಂದ ಧರಿಸಿ ತಮ್ಮ ಹರಕೆ ತೀರಿಸುತ್ತಾರೆ.ನಂದಿಕೋಲು ಸಮ್ಮಾಳದ ಮೇಳದ ತಾಳಕ್ಕೆ ಹೆಜ್ಜೆಹಾಕುತ್ತಾ,ಭಕ್ತಿ ಭಾವದ ಕಾರ್ತೀಕೋತ್ಸವವನ್ನು ಶೈವಪಂಥದವರು ಪ್ರತಿ ಭಾರಿಯ ಕಾರ್ತೀಕ ಮಾಸದಲ್ಲಿ ಅಚರಿಸುವುದು ವಾಡಿಕೆಯಾಗಿದೆ.ಕಾರ್ತಿಕೋತ್ಸವದಲ್ಲಿ ಶ್ರೀ ಪೇಟೆಬಸವೇಶ್ವರ ದೇವಸ್ಥಾನದ ಭಕ್ತಮಂಡಳಿ,ಪಟ್ಟಣದ ವೀರಶೈವ ಸಮಾಜದ ಮುಖಂಡರು ನಾಗರೀಕರು ಮಹಿಳೆಯರು,ಮಕ್ಕಳು ಹಾಗೂ ವಿವಿದ ಸಮುದಾಯಗಳ ಮುಖಂಡರು ಭಕ್ತರು ಭಾಗಿಯಾಗುತ್ತಾರೆ,ಪೇಟೆಯ ಎಲ್ಲಾ ಕೋಮಿನವರ ಮನೆ ಮನೆಗಳಲ್ಲಿ ಸಿಹಿಖಾಧ್ಯ ಮಾಡಲಾಗಿರುತ್ತದೆ, ಮನೆಮಂದಿಯಲ್ಲಾ ಮಡಿ ಮುಡಿಯಿಂದಿದ್ದು ಹಬ್ಬದ ಸಂಭ್ರಮದಲ್ಲಿರುತ್ತಾರೆ. ಶುಕ್ರವಾರದಂದು ಒತ್ತಾರೆ ಎದ್ದು ಮನೆಯಂಗಳವನ್ನು ಒಪ್ಪವಾಗಿಸಿ ರಂಗೋಲಿ ಹಾಕಿ ಮನೆಯಂಗಳವನ್ನು ಸಿಂಗರಿಸುತ್ತಾರೆ. ಪಟ್ಟಣದ ಮೂಲ ಸ್ಥಳ ಇದಾಗಿರುವುದರಿಂದಾಗಿ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.ಅಂತಿಮ ವಾಗಿ ದೇವರ ಪ್ರಸಾಧ ಸೇವೆನೆ ಇರುತ್ತದೆ,ಸರ್ವ ಧರ್ಮಿಯರಲ್ಲರೂ ಒಗ್ಗೂಡಿ ಏಕ ಪಂಥಿಯಲ್ಲಿ ಸಾಮೂಹಿಕ ಪ್ರಸಾಧ ಸೇವನೆ ಕಾರ್ಯ ನೆರವೇರಿಸಲಾಗುತ್ತದೆ. ಪಟ್ಟಣದಲ್ಲಿಯೇ ಅತ್ಯಂತ ವಿಶಿಷ್ಟ ಪೂರ್ಣವಾಗಿ ಶ್ರದ್ಧಾಭಕ್ತಿಯಿಂದ ಹಬ್ಬದ ರೀತಿಯಲ್ಲಿ, ಶ್ರೀಪೇಟೆಬಸವೇಶ್ವರ ಕಾರ್ತೀಕೋತ್ಸವವನ್ನು ಸರ್ವಜನಾಂಗದವರೆಲ್ಲರೂ ಒಗ್ಗೂಡಿ ಆಚರಿಸುವ ಮೂಲಕ ಸೌಹಾರ್ದತೆ ಮೆರೆಯುತ್ತಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend