ಬಂಜಾರ ಅಸ್ಮಿತೆಯನ್ನು ಸಂರಕ್ಷಿಸಿ – ಎನ್ ಅನಂತನಾಯಕ…!!!

Listen to this article

ಬಂಜಾರ ಅಸ್ಮಿತೆಯನ್ನು ಸಂರಕ್ಷಿಸಿ
– ಎನ್ ಅನಂತನಾಯಕ

ಉಳ್ಳವರ ವಿಕಾರತೆ ಮತ್ತು ಆರ್ಥಿಕತೆಯ ಅರಾಜಕತೆ ಸಮಾಜದಲ್ಲಿ ಮತ್ತಷ್ಟು ಅಸಮಾನತೆಯನ್ನು ಬಿತ್ತುತ್ತಿದೆ. ಘನತೆಯ
ಬಂಜಾರರ ಗೋರ್ ಧರ್ಮ, ಜನ ಸಂಸ್ಕೃತಿಗಳ ಸಂರಕ್ಷಣೆ ಯುವಜನರು ಮುಂದಾಗಬೇಕು ಎಂದು ಹೈಕೋರ್ಟ್ ನ್ಯಾಯವಾದಿ ಎನ್ ಅನಂತನಾಯಕ ಅಭಿಪ್ರಾಯಪಟ್ಟರು.

ಹರಪನಹಳ್ಳಿ ಸಮೀಪದ ಸಮತಾ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಂಜಾರ ಯುವಜನ ಸಮಾವೇಶದಲ್ಲಿ “ಬಂಜಾರರ ಪರಂಪರೆ ಮತ್ತು ಸಮಕಾಲೀನ ತಲ್ಲಣಗಳು” ಕುರಿತು ಮಾತನಾಡಿದ ಹೈಕೋರ್ಟ್ ನ್ಯಾಯವಾದಿ ಎನ್ ಅನಂತನಾಯ್ಕ ಅವರು ‘ಭಾಷೆ ಉಳಿಯದೆ, ಜನಸಂಸ್ಕ್ರತಿ ಉಳಿಯದು. ಮೂಲನಿವಾಸಿ ಸಮುದಾಯಗಳ ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ. ಬಂಜಾರರ ಚರಿತ್ರೆಯನ್ನು ದಾಖಲಿಸುವಲ್ಲಿ ಇತಿಹಾಸಕಾರರು ಪಕ್ಷಪಾತಿಗಳಾಗಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ಲಂಬಾಣಿ ಭಾಷೆಗೆ ಸಂವಿಧಾನಿದ ಎಂಟನೇ ಪರಿಚ್ಛೇದದಲ್ಲಿ ಸೇರಿಸಿ ಮಾನ್ಯತೆ ನೀಡಲಿ.

ಇಂದಿಗೂ ಲಂಬಾಣಿ ತಾಂಡಗಳು ಕಂದಾಯ ಗ್ರಾಮಗಳಾಗಿಲ್ಲ. ಬಡತನದಿಂದಾಗಿ ಮಕ್ಕಳ ಮಾರಾಟದಂತಹ ಪಿಡುಗು ಇವತ್ತಿಗೂ ಸಮಾಜವನ್ನು ಕಾಡುತ್ತಿದ್ದೆ. ರಾಜ್ಯದ ಅತಿ ಹೆಚ್ಚು ಅಪೌಷ್ಟಿಕತೆಯ ಮಕ್ಕಳು ತಾಂಡಗಳಲ್ಲಿ ಸಿಗುತ್ತಾರೆ.‌ ಶ್ರೀಸೇವಾಲಾಲ್ ಅವರ ಆಧ್ಯಾತ್ಮ ಗುಣ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಾಮಾಜಿಕ ನ್ಯಾಯದ ಪಥದಲ್ಲಿ ಬಂಜಾರ ಸಮುದಾಯ ಸಾಗಬೇಕಿದೆ. ಸಮಸ್ತ ಬಂಜಾರರಿಗೆ ಸೇವಾಲಾಲ್ ಕಣ್ಣು, ಅಂಬೇಡ್ಕರ್ ಮಿದುಳು ಇದ್ದಂತೆ. ಹಾಗಾಗಿ ಸೇವಾಲಾಲ್, ಮೀಟೂಭೂಕ್ಯ, ನಾನು ಸಾಧ್ ಸುಧಾರಕರ ಜೀವನವನ್ನು ಅಧ್ಯಯನ ಮಾಡಲು ಮುಂದಾಗೋಣ. ಆ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಮುಂದಾಗೋಣ ಎಂದು ಅನಂತನಾಯ್ಕ ಹೇಳಿದರು.
.,.,.,.,.,.,.,.

ಸಮಸ್ಯೆಗಳೇ ಬಂಜಾರ ಸಮುದಾಯದ ಶತ್ರುಗಳು.
– ಡಾ ಆರ್ ಎನ್ ರಾಜನಾಯ್ಕ

ಸರ್ಕಾರಗಳ ನಿರ್ಲಕ್ಷ್ಯತನ ನಮ್ಮ ಸಮುದಾಯಗಳ ಹಿಂದುಳಿಯುವಿಕೆಗೆ ಮುಖ್ಯ ಕಾರಣ. ಶಿಕ್ಷಣ ಮಾತ್ರ ಈ ಸಮುದಾಯಗಳನ್ನು ಅಭಿವೃದ್ಧಿ ಪಡಿಸುತ್ತದೆ. ಯಾವುದೇ ಮಕ್ಕಳು ಶಾಲೆಯಿಂದ ಹೊರ ಉಳಿಯದಂತೆ ಎಚ್ಚರಿಕೆವಹಿಸಿ. ನೌಕರರು ತಾಂಡದ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಕರೆ ನೀಡಿದರು. ವೃತ್ತಿ ಕೌಶಲ್ಯ ಮತ್ತು ಸ್ವಾಭಿಮಾನದಿಂದ ಯುವಜನರು ಸಂಘಟಿತರಾಗಬೇಕು.
,.,.,.,.,.,.,.,.,,.,.,.,.,.,..,.,.

ಜಾಗತಿಕ ಅವಕಾಶಗಳಿಗಾಗಿ ಬಂಜಾರ ಯುವಜನರು ತೆರೆದುಕೊಳ್ಳಿ
-ಡಾ ಗಿರೀಶ್ ಮೂಡ್

ಸ್ಪರ್ಧಾತ್ಮಕ ಯುಗದಲ್ಲಿ ಬಂಜಾರ ಯುವಜನರು ಮುಖ್ಯವಾಹಿನಿಗೆ ಬರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅರಿಯಬೇಕು. ಸ್ವಯಂ ಉದ್ಯೋಗ ಸ್ವಾವಲಂಬನೆ ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತಿ ಪರಂಪರೆಯನ್ನು ರೂಡಿಸಿಕೊಳ್ಳುತ್ತಲೆ ಜಾಗತಿಕವಾಗಿ ಬೆಳೆಯಬೇಕು. ಮೌಡ್ಯತೆ, ಕಂದಾಚಾರ ತೊರೆಯಬೇಕು. ಬಾಲ್ಯ ವಿವಾಹಗಳ ವಿರುದ್ಧ ಹೋರಾಡಬೇಕು

,.,.,.,.,.,.,.,.

ಶುಭಾಶಯ ಕೋರಿದವರು;

ನಮ್ಮ ತಂದೆ ಎಂಪಿ ಪ್ರಕಾಶ್ ವಕೀಲರಾಗಿದ್ದಾಗ ಹೆಚ್ಚು ಜನ ಲಂಬಾಣಿಗರು ಕಕ್ಷಿದಾರರಾಗಿದ್ದರು. ಬಂಜಾರರ ದೀಪಾವಳಿ ಮತ್ತು ತೀಜ್ ಹಬ್ಬಗಳು ನನಗೆ ತುಂಬಾ ಇಷ್ಟ. ನಾನು ಅವುಗಳಲ್ಲಿ ಭಾಗವಹಿಸಿದ್ದೇನೆ. ಲಂಬಾಣಿ ಉಡುಪುಗಳು ಅಕರ್ಣಿಯವಾಗಿವೆ ಎಂದು ಕಾಂಗ್ರೆಸ್ ಮುಖಂಡರಾದ ಎಂಪಿ ಲತಾ ಮಲ್ಲಿಕಾರ್ಜುನ ಹೇಳಿದರು.

ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣ ಶುಭಾಶಯ ಕೋರಿ ಮಾತನಾಡಿದರು.

ಕಾರ್ಯಕ್ರಮ ಆಯೋಜಕರಾದ ಈಶ್ವರ ಅಭಿವ್ಯಕ್ತಿ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದ ಮುಖಂಡರಾದ ಎಲ್ ಪ್ರಕಾಶ್ ನಾಯ್ಯ, ರಾಜು ನಾಯ್ಕ ಉದ್ಗಟ್ಟಿ, ವೆಂಕಟೇಶ ನಾಯ್ಕ ಉಪಸ್ಥಿತಿ ಇದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend