ಚಿತ್ರೀಕರಣ ಬರದಿಂದ ಸಾಗುತ್ತಿರುವ “ಕರಿಯ ಐ ಲವ್ ಯೂ…!!!

Listen to this article

ಚಿತ್ರೀಕರಣ ಬರದಿಂದ ಸಾಗುತ್ತಿರುವ “ಕರಿಯ ಐ ಲವ್ ಯೂ”
ವಿಜಯನಗರ ಜಿಲ್ಲೆ. ಹಗರಿ ಬೊಮ್ಮನಹಳ್ಳಿ. ಶ್ರೀ ಮಂಜುನಾಥ ಪ್ರೊಡಕ್ಷನ್ಸ್ ರವರ. ಕರಿಯ ಐ ಲವ್ ಯೂ. ಕನ್ನಡ ಚಲನಚಿತ್ರ ಚಿತ್ರೀಕರಣವು ಹ.ಬೊ‌ಹಳ್ಳಿ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿದೆ. ಈ ಚಿತ್ರದ ನಿರ್ದೇಶನವನ್ನು ಶ್ರೀ ತಿಪ್ಪೇಶ್ ರವರು ವಹಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಚಿತ್ರೀಕರಣಕ್ಕೆ ಸುತ್ತಮುತ್ತಲಿನ ನಾಗರಿಕರು ನಮಗೆ ಒಳ್ಳೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಮತ್ತು ಚಿತ್ರದ ವಿಶೇಷ ಇದು ಒಂದು ಹಳ್ಳಿಯ ಪ್ರೀತಿಯ ಕಥೆ ಒಬ್ಬ ಕಾಲೇಜು ವಿದ್ಯಾರ್ಥಿನಿ ಒಬ್ಬ ಅವಿದ್ಯಾವಂತ ಕರಾಬ್ ಹುಡುಗ ಆಟೋ ಚಾಲಕನನ್ನೂ ಪ್ರೀತಿಸುತ್ತಾಳೆ ಈ ಪ್ರೀತಿ ಕೊನೆಯವರೆಗೂ ಸಿಗುತ್ತಾ ಇಲ್ಲ ವೂ ಅದು ಗುಪ್ತವಾಗಿ ಯೆ ಇರುತ್ತದೆ. ಚಿತ್ರದಲ್ಲಿ ಹಳ್ಳಿಯ ಪ್ರೇಮಿಗಳ ಕಥೆಯ ಹೈಲೈಟ್ ನಮ್ಮ ವೀಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡಿ ಮುಂದಿನ ಪ್ರೇಮಿಗಳ ಕಥೆ ಏನಾಗಬಹುದು ತಿಳಿದುಕೊಳ್ಳಿ ಎಂದರು. ನಂತರ ನಾಯಕ ನಟ ಮಂಜುನಾಥ ಮಠದ್ ಮಾತನಾಡಿ, ನಮ್ಮ ಈ ಚಿತ್ರೀಕರಣಕ್ಕೆ ಜನರಿಂದ ತುಂಬಾ ಒಳ್ಳೆಯ ಅಭಿಪ್ರಾಯಗಳು ಬರ್ತಾ ಇವೆ ಹಾಗೂ ಒಳ್ಳೆಯ ರೆಸ್ಪಾನ್ಸ್ ಕೊಡ್ತಾ ಇದ್ದಾರೆ. ನಾನು ಒಬ್ಬ ಸ್ಥಳೀಯ ಕಲಾವಿದನಾಗಿದ್ದು ಈ ಚಿತ್ರಕ್ಕೆ ಸ್ಥಳೀಯಹಳೆಯ ಕಲಾವಿದ ರಿಗೆ ಅವಕಾಶ ಕೊಡಲಾಗಿದೆ. ಮತ್ತು ಅಭಿಮಾನಿಗಳಿಗೆ ಹಾಗೂ ಚಿತ್ರ ವೀಕ್ಷಕರಿಗೆ ಆದಷ್ಟು ಕನ್ನಡ ಚಿತ್ರಗಳನ್ನೇ ನೋಡಿ ಅದು ಚಿತ್ರಮಂದಿರಕ್ಕೆ ಬಂದು ನೋಡಿ ಈಗಾಗಲೇ ಸಮಾಜ ಜಾಲತಾಣಗಳಲ್ಲಿ ಯೂಟ್ಯೂಬ್ ಚಾನೆಲ್ ಗಳು ಹೆಚ್ಚಾಗಿದೆ ಅದರಲ್ಲೂ ಮನೆಯಲ್ಲಿ ಮಹಿಳೆಯರು ಧಾರವಾಹಿಗಳನ್ನು ಸ್ವಲ್ಪ ಮಟ್ಟಿಗೆ ಬದಿಗೂತ್ತಿ ಒಳ್ಳೊಳ್ಳೆ ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಬಂದು ನೋಡಿ, ಈ ಚಿತ್ರದ ವಿಶೇಷತೆ ಇದು ಒಂದು ಹಳ್ಳಿಯ ಪ್ರೇಮ ಕಥೆ ವೀಕ್ಷಕರು ಬಂದು ನೋಡಿ ನಮ್ಮ ಚಿತ್ರತಂಡಕ್ಕೆ ಶುಭ ಹಾರೈಸಿ, ಚಿತ್ರದ ನಾಯಕ ನಟಿ ಕುಮಾರಿ ಸ್ವಾತಿ ಚೌಹಾನ್, ಚಿತ್ರದ ಬಗ್ಗೆ ಮಾತನಾಡಿ, ನನಗೆ ಈ ಚಿತ್ರದಲ್ಲಿ ನಾಯಕ ನಟಿಯಾಗಿ ಅವಕಾಶ ಸಿಕ್ಕಿರುವುದು ತುಂಬ ಸಂತೋಷವಾಗಿದೆ . ಈ ಚಿತ್ರವು ನನ್ನ ಎರಡನೇ ಚಿತ್ರವಾಗಿದ್ದು. ಮೊದಲನೆಯದು ಕಾವೇರಿಪುರ ಚಿತ್ರದ ಮೊದಲನೆಯ ನಾಯಕಿ ಪಾತ್ರವಹಿಸಿದ್ದೇನೆ ಈಗ ಈ ಚಿತ್ರಕ್ಕೆ ನಮ್ಮ ನಿರ್ದೇಶಕರು ಹಾಗೂ ನಿರ್ಮಾಪಕರು ಮಂಜುನಾಥ್ ಸರ್ ಅವರು ಈ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಾನು ಒಬ್ಬ ಹಳ್ಳಿಯ ವಿದ್ಯಾರ್ಥಿನಿ ನಾನು ಒಬ್ಬ ಆಟ ಚಾಲಕವನ್ನು ಇಷ್ಟ ಪಟ್ಟಿರುತ್ತೇನೆ ಹೀಗೆ ನಮ್ಮ ಪ್ರೀತಿ ಬೆಳೆ ಯುತ್ತೆ ಮುಂದೆ ಏನಾಗುತ್ತೆ ಅನ್ನೋದನ್ನ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡಿ ಈ ಕಲಾವಿದರಿಗೆ ಹಾರೈಸಿ ಕಲಾವಿದರನ್ನು ಬೆಳೆಸಿ ಮತ್ತೆ ಚಿತ್ರೀಕರಣ ಯಾವುದೇ ರೀತಿಯ ತೊಂದರೆ ಇಲ್ಲದೆ ಜನರಿಂದ ನಮ್ಮ ಚಿತ್ರತಂಡಕ್ಕೆಒಳ್ಳೆ ಪ್ರೋತ್ಸಾಹ ಸಿಕ್ಕಿದೆ. ಎಂದರು. ಚಿತ್ರಕಥೆ ನಿರ್ದೇಶನ ವ ತಿಪ್ಪೇಶ್ (ಟಿಪ್ಪು) ಸಂಭಾಷಣೆ ಬಾಡ ನಾಗರಾಜ್,, ಅವರು ಹೊಣೆ ಹೊತ್ತಿದ್ದಾರೆ. ಸಂಕಲನ ಶಿವರಾಜ್ ಮೇಹೂ, ಸಂಗೀತ, ಲೋಕೇಶ್ ಈ ಚಿತ್ರಕ್ಕೆ ಸಾಹಸ ಚಂದ್ರು ಬಂಡೆ, ಛಾಯಾಗ್ರಹಕ, ಗೋಪಿನಾಥ್, ಪುನೀತ್ ರಾಜಕುಮಾರ್ ಸ್ಟುಡಿಯೋ, ಮೇಕಪ್, ಹೇರ್ ಸ್ಟೈಲ್ ಕಿರಣ್ ಸಿಂಗ್, ಈ ಚಿತ್ರಕ್ಕೆ ಹಿನ್ನೆಲೆ ಗಾಯಕರಾದ, ಮೆಹಬೂಬ್ ಸಾಬ್, ರಾಜೇಶ್ ಕೃಷ್ಣನ್, ನವೀನ್ ಸಜ್ಜು, ಹಿನ್ನೆಲೆ ಗಾಯಕಿ, ಮಂಗ್ಲಿ ಶಮಿತ ಮಲ್ನಾಡು, ವಿಜಯ ಪ್ರಕಾಶ್, ನಿಖಿಲ್ ತಾಂಮ್ರ, ಹಾಗೂ ಇನ್ನು ಮುಂತಾದವರು ಚಿತ್ರತಂಡದವರು ಭಾಗವಹಿಸಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend