ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ . ರಾಧಾಕೃಷ್ಣ ರಾವ್ ರವರಿಗೆ 102 ವಯಸ್ಸಿನಲ್ಲಿ ಅಮೇರಿಕದ Statistics ನಲ್ಲಿ ನೋಬೆಲ್‌ಗೆ ಸರಿಸಮಾನವಾದ ಗೌರವ ದೊರೆತಿದೆ…!!!

Listen to this article

ಇವರು C. ರಾಧಾಕೃಷ್ಣ ರಾವ್. ಹುಟ್ಟಿದ್ದು ಸೆಪ್ಟೆಂಬರ್ 10, 1920. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ. ತಂದೆ ದೊರೆಸ್ವಾಮಿ ನಾಯ್ಡು, ತಾಯಿ ಲಕ್ಷ್ಮೀಕಾಂತಮ್ಮ.

ಆಂಧ್ರ, ಕಲಕತ್ತಾ ವಿಶ್ವವಿದ್ಯಾಲಯಗಳಲ್ಲಿ ಓದು ಮುಗಿಸಿದ ರಾವ್ ಗಣಿತ ಪ್ರೊಫೆಸರ್ ಆಗಿ 60 ವರ್ಷದಲ್ಲಿ ನಿವೃತ್ತರಾದ ನಂತರ ಅಮೆರಿಕದಲ್ಲಿ ನೆಲೆಸಿದ್ದ ಮಗಳು ಮತ್ತು ಮೊಮ್ಮಕ್ಕಳ ಬಳಿ ಹೋಗಿ ಅಲ್ಲೇ ನೆಲೆಸಿದರು. 62ನೇ ವಯಸ್ಸಿನಲ್ಲಿ ಪಿಟ್ಸ್‌ಬರ್ಗ್ ಯೂನಿವರ್ಸಿಟಿಯಲ್ಲಿ Mathematical Statistics ಪ್ರೊಫೆಸರ್ ಆಗಿ ಸೇರಿದರು. 70ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಗಣಿತ ವಿಭಾಗದ HODಯಾಗಿ ಆಯ್ಕೆಯಾದರು‌. 75ನೆಯ ವಯಸ್ಸಿನಲ್ಲಿ ಇವರಿಗೆ ಅಮೆರಿಕದ ಪೌರತ್ವ ದೊರೆಯಿತು. 82ನೆಯ ವಯಸ್ಸಿನಲ್ಲಿ ವಿಜ್ಞಾನದಲ್ಲಿ National Medal for Science ದೊರೆಯಿತು. ಇದು ವಿಜ್ಞಾನದ ವಿಭಾಗದಲ್ಲಿ ವೈಟ್ ಹೌಸ್‌ನಿಂದ ದೊರೆಯುವ ಪರಮೋಚ್ಛ ಗೌರವ.

ರಾವ್ ಅವರಿಗೆ 102ನೇ ವಯಸ್ಸಿನಲ್ಲಿ, ಮೊನ್ನೆ ಏಪ್ರಿಲ್‌ನಲ್ಲಿ Statistics ನಲ್ಲಿ ನೋಬೆಲ್‌ಗೆ ಸರಿಸಮಾನವಾದ ಗೌರವ ದೊರೆತಿದೆ. ಈ ಮೊದಲೂ ಇವರಿಗೆ ಪದ್ಮಭೂಷಣ (1968) ಮತ್ತು ಪದ್ಮವಿಭೂಷಣ (2001) ದೊರಕಿದೆ.

“ಭಾರತದಲ್ಲಿ ನಿವೃತ್ತಿಯ ನಂತರ ಕೇಳುವವರಿಲ್ಲ” ಎನ್ನುವ ರಾವ್ ಅವರಿಗೆ 102ನೆಯ ವಯಸ್ಸಿನಲ್ಲಿ, ಅದೂ ಉತ್ತಮ ಆರೋಗ್ಯದಲ್ಲಿ, ಈ ಅತ್ಯುನ್ನತ ಪ್ರಶಸ್ತಿ ದೊರೆತಿರುವುದು ಸಾಮಾನ್ಯ ಸಂಗತಿಯಲ್ಲ. ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ವಿಷಯ, ಇವರ ಮಾರ್ಗದರ್ಶನ ಹಾಗೂ ವೃತ್ತಿಯಲ್ಲಿ ಇರುವ ನಿಷ್ಠೆ ಇಂತವರು ಮೆಚ್ಚಲೇಬೇಕು ನಮ್ಮ ದೇಶದಲ್ಲಿ ಎಷ್ಟೋ ವಿಜ್ಞಾನಿಗಳಾಗಿರಬಹುದು, ಮತ್ತು ಹಲವಾರು ರಂಗದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದವರು ಸಾಕಷ್ಟು ಜನರು ಇದ್ದಾರೆ ಆದರೆ ನಿವೃತ್ತಿಯ ನಂತರ ಅಂತವರನ್ನು ಮೂಲೆಗುಂಪಾಗಿ ಮಾಡುತ್ತದೆ ನಮ್ಮ ಒಂದು ದೇಶದ ರಾಜಕೀಯ ಆಡಳಿತ ನೀತಿ ಅದೇ ವಿದೇಶದಲ್ಲಿ ಅವರ ಒಂದು ಅನುಭವದ ಅದರಲ್ಲಿ ಇನ್ನು ಹೆಚ್ಚು ಪ್ರೊತ್ಸಹಿಸಿ ಬೆಳೆಸುವಲ್ಲಿ ಯಶಸ್ವಿಯಾಗುತ್ತರೆ, ಇವರಿಗೆ ನಮ್ಮ ಪತ್ರಿಕಾ ಬಳಗದ ವತಿಯಿಂದ ತುಂಬುಹೃದಯದ ಅಭಿನಂದನೆಗಳು 🙏🙏🙏

ವರದಿ. ಅಜಯ್ ಛಲವಾದಿ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend