ಸಿದ್ದಾಪುರ ಗ್ರಾಮಕ್ಕೆ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಭೇಟಿ ಮಾಡಿದ PDO ಭರತ್ ಕುಮಾರ್….!!!

Listen to this article

 

ದಿನಾಂಕ 8.4 .2021*

*ವಿಜಯನಗರ ಜಿಲ್ಲೆ ಕೂಡ್ಲಿಗಿ* *ತಾಲೂಕು*
ತಾಲ್ಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಭರತ್ ಕುಮಾರ್ ರವರು ಇಂದು ಸಿದ್ದಾಪುರ ಗ್ರಾಮಕ್ಕೆ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಭೇಟಿ ಮಾಡಿದರು. ಇವರು ಮಾತನಾಡಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿಕಾರ್ಮಿಕರು ಕೆಲಸಕ್ಕೆ ಆರು ಗಂಟೆಯ ನಂತರ ಕೆಲಸಕ್ಕೆ ಹಾಜರಾಗಬೇಕು. ಕೂಲಿ ಕಾರ್ಮಿಕರಿಗೆ ಈಗ ಕೂಲಿ ಜಾಸ್ತಿ 289ರೂಪಾಯಿ ಮಾಡಲಾಗಿದೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಲಾಭವನ್ನು ಪಡೆಯಿರಿ. ನಿಗದಿತ ಸಮಯಕ್ಕಿಂತ ಮುಂಚೆ ಬಂದು ಕಾರ್ಮಿಕರು ಯಾವುದೇ ಕೆಲಸ ಮಾಡುವಂತಿಲ್ಲ ಎಂದು ಕೂಲಿಕಾರ್ಮಿಕರಿಗೆ ಹೇಳುತ್ತಾ ಕರೋನ ಸಾಂಕ್ರಮಿಕ ರೋಗ ಎರಡನೇ ಅಲೆ ದೇಶದ ವ್ಯಾಪ್ತ ಹೆಚ್ಚಿನ ರೀತಿಯಲ್ಲಿ ಹರಡುತ್ತಿದ್ದು ತಾವುಗಳು ಎಲ್ಲರೂ ಕೋವಿಡ್ ನಿಯಮವನ್ನು ತಪ್ಪದೆ ಪಾಲಿಸಬೇಕು 45 ವರ್ಷದ ಮೇಲ್ಪಟ್ಟ ವರೆಲ್ಲರೂ ಕೋರೋಣ ವ್ಯಾಕ್ಸಿನ್ ಲಸಿಕೆಯನ್ನು ತಪ್ಪದೇ ಹಾಕಿಸಿಕೊಂಡು ಕರೋನ ಬರದಂತೆ ತಡೆಗಟ್ಟಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಈಶ್ವರಪ್ಪನವರು ಮಾತನಾಡಿ 18 ವರ್ಷ ಮೇಲ್ಪಟ್ಟ ಅವರೆಲ್ಲರೂ ನರೇಗಾ ಯೋಜನೆಯಡಿ ಕೆಲಸ ಮಾಡಲು ಅರ್ಹರಿರುತ್ತಾರೆ ಸರ್ಕಾರವು ಕಾರ್ಮಿಕರು ಕೂಲಿಕೆಲಸಕ್ಕೆ ಪರಸ್ಥಳ ಹೋಗದಂತೆ ತಮ್ಮ ಗ್ರಾಮಗಳಲ್ಲಿ ಇದ್ದು ನರೇಗಾ ಯೋಜನೆಯಡಿ ಕೆಲಸ ಮಾಡಿಕೊಂಡು ನೆಮ್ಮದಿಯಿಂದ ತಮ್ಮ ಗ್ರಾಮದಲ್ಲಿ ಇರಿ ಹಾಗೂ ಅಕಸ್ಮಾತ್ ಒಂದು ವೇಳೆ ಬೇರೆ ಸ್ಥಳಕ್ಕೆ ವಾಹನಗಳಲ್ಲಿ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಪ್ರಯಾಣ ಬೆಳೆಸಿ ಸಾಮಾಜಿಕ ಅಂತರ ಕಾಯ್ದುಕೊಂಡು 45 ವರ್ಷ ಮೇಲ್ಪಟ್ಟವರು ಎಲ್ಲರೂ ಕಡ್ಡಾಯವಾಗಿ ಚುಚ್ಚುಮದ್ದನ್ನು ತಪ್ಪದೇ ಹಾಕಿಸಿಕೊಳ್ಳಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಡಿ ಎಂ ಪ್ರಕಾಶ್. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿ ರಾಜಣ್ಣನವರು. ಉದ್ಯೋಗ ಖಾತ್ರಿಯ ಮೇಟ್ ಗಳಾದ ದರ್ಶನ್ ಬಸವರಾಜ್ ಹನುಮಂತಪ್ಪ ಮಲಿಯಪ್ಪ ಮತ್ತು ಕೂಲಿ ಕಾರ್ಮಿಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ತಿಪ್ಪೇಸ್ವಾಮಿ ಸಾರ್ವಜನಿಕರು ಉಪಸ್ಥಿತರಿದ್ದರು.

 

*ಡಿ ಎಂ ಈಶ್ವರಪ್ಪ ಸಿದ್ದಾಪುರ*

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend