ರಾಜ್ಯ ಮೆಚ್ಚುವಂತ ಕಾರ್ಯ ಮಾಡುತ್ತಿರುವ ಕಾರುಣ್ಯಾಶ್ರಮದ – ಡಿ. ಎಚ್. ಕಂಬಳಿ…!!!

Listen to this article

ರಾಜ್ಯ ಮೆಚ್ಚುವಂತ ಕಾರ್ಯ ಮಾಡುತ್ತಿರುವ ಕಾರುಣ್ಯಾಶ್ರಮದ – ಡಿ. ಎಚ್. ಕಂಬಳಿ

ಸಿಂಧನೂರು: 29. ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ) ಸಹಯೋಗದಲ್ಲಿ ಕಾರುಣ್ಯ ಆಶ್ರಮದಲ್ಲಿ ನೂತನವಾಗಿ ಸಿಂಧನೂರು ತಾಲೂಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಡಿ. ಎಚ್.ಕಂಬಳಿ ಅವರಿಗೆ ಗೌರವ ಅಭಿನಂದನಾ ಕಾರ್ಯಕ್ರಮ ಹಾಗೂ ಸಮಾಜ ಸೇವಕರಾದ ಅಶೋಕ ನಲ್ಲ ಅವರ ಹುಟ್ಟುಹಬ್ಬ ಜರುಗಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಿಂಧನೂರು ಕಾರ್ಯನಿರತ ಪತ್ರಕರ್ತರ ನೂತನ ಅಧ್ಯಕ್ಷರಾದ ಡಿ. ಎಚ್.ಕಂಬಳಿ ಇಂದು ಸಿಂಧನೂರು ಘನತೆ ಗೌರವವನ್ನು ಎತ್ತಿ ಹಿಡಿಯುವುದರ ಮೂಲಕ ರಾಜ್ಯ ಮೆಚ್ಚುವಂತಹ ಕಾರ್ಯ ಮಾಡುತ್ತಿರುವ ಕಾರುಣ್ಯಾಶ್ರಮದ ಚನ್ನ ಬಸಯ್ಯಸ್ವಾಮಿ ನಮ್ಮ ಹೆಮ್ಮೆ. ಇಂದಿನ ಸಮಾಜದಲ್ಲಿ ಅನಿವಾರ್ಯತೆಗಾಗಿ ಹುಟ್ಟುಹಾಕಿರುವ ಈ ಕಾರುಣ್ಯ ಕುಟುಂಬವನ್ನು ತನ್ನ ದೇಹಶಕ್ತಿ ಯಲ್ಲದೆ ಮೆದುಳಿನ ಶಕ್ತಿಯ ಮೂಲಕ ಅನಾಥಪರ ಸೇವಾ ಮನೋಭಾವನೆಯನ್ನು ಅಳವಡಿಸಿಕೊಂಡಿರುವ ಹರೇಟನೂರಿನ ಹಿರೇಮಠ ಕುಟುಂಬ ಸಾಧನೆ ಅಪಾರವಾದುದು ನಾನು ಕೂಡ ನನ್ನ ಪತ್ರಿಕೆಗಳ ಮೂಲಕ ಈ ಆಶ್ರಮದ ಸೇವೆಯನ್ನು ಜನತೆಗೆ ಮುಟ್ಟಿಸಿದಾಗ ಜನರಿಂದ ಬಂದಿರುವಂತಹ ಉತ್ತಮ ಪ್ರತಿಕ್ರಿಯೆಗಳು ನಮ್ಮ ಬರವಣಿಗೆಯ ಗೌರವವನ್ನು ಹೆಚ್ಚಿಸಿವೆ. ಬೇರೆ ಬೇರೆ ಪ್ರದೇಶಗಳಿಂದ ಬಂದು ಇಲ್ಲಿ ಆಶ್ರಯ ಪಡೆದಿರುವಂತಹ ಅನಾಥ ಜೀವಿಗಳನ್ನು ರಕ್ಷಣೆ ಮಾಡಿ ಅವರ ಪಾಲನೆ-ಪೋಷಣೆ ಮಾಡುವುದು ಸಾಮಾನ್ಯದ ಕಾರ್ಯವಲ್ಲ ಈ ಕಾರ್ಯದ ಜೊತೆ ಕೈಜೋಡಿಸಿರುವ ಅಶೋಕ ನಲ್ಲ 24 ತಾಸುಗಳ ಕಾಲ ತನ್ನ ಜೀವನವನ್ನು ಸಮಾಜಕ್ಕಾಗಿ ಮುಡಿಪಿಟ್ಟು ಹಾಲು ಮಾರಿಕೊಂಡು ಜೀವನ ಮಾಡುವುದರ ಜೊತೆ ಹಸಿದವರಿಗೆ ಅನ್ನದಾತನಾಗಿ ಎಲ್ಲಾ ರೀತಿಯ ಸಮಾಜಪರ ಕಾರ್ಯಗಳಲ್ಲಿ ಮುಂದುವರೆದಿರುವುದು ಇಡೀ ಸಿಂಧನೂರಿನ ಜನತೆಯ ಸಂತೋಷಕ್ಕೆ ಕಾರಣವಾಗಿದೆ ಮದರ್ ತೆರೇಸಾ ಅವರ ಸೇವಾ ಜೀವನದಂತೆ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ಆಶ್ರಮ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಈ ಟ್ರಸ್ಟ್ ಗಳ ಸೇವೆಗೆ ಸಾರ್ವಜನಿಕರು ಸಹಾಯ ಸಹಕಾರ ನೀಡಿದಾಗ ಮಾತ್ರ ಕರುಣಿಗೆ ಅರ್ಥ ಸಿಕ್ಕಂತಾಗುತ್ತದೆ ಇಂದಿನ ನನ್ನ ಅಭಿನಂದನಾ ಕಾರ್ಯಕ್ರಮ ನನ್ನ ಜವಾಬ್ದಾರಿಯನ್ನು ಹೆಚ್ಚಿಸುವಂತಹ ಕಾರ್ಯಕ್ರಮ ಎಂದು ಮಾತನಾಡಿದರು.

ನಂತರ ಡಿ. ಎಚ್.ಕಂಬಳಿ ಅವರನ್ನು ಎರಡು ಟ್ರಸ್ಟ್ ಗಳ ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.

ನಂತರ ಮಾತನಾಡಿದ ಕರ್ನಾಟಕ ಯುಸಿಟಿ ಸೇವಾ ಟ್ರಸ್ಟ್ ನ ರಾಜ್ಯಾಧ್ಯಕ್ಷರಾದ ಸಂತೋಷ್ ಅಂಗಡಿ ಡಿ.ಎಚ್. ಕಂಬಳಿ ಅವರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವುದು ನಮಗೆ ಬಹಳ ಸಂತೋಷ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರ ಮೂಲಕ ನ್ಯಾಯದ ಪರ ಅನ್ಯಾಯದ ವಿರುದ್ಧ ಇವರ ಪತ್ರಿಕೆಯ ಜೀವನ ಅದೇರೀತಿ ಸಾಮಾಜಿಕ ಜೀವನ ಇಡೀ ಜಿಲ್ಲೆಯ ಮೂಲೆ ಮೂಲೆಯಲ್ಲಿ ಪಸರಿಸಿರುವುದು ಮತ್ತು ಇವರ ಹೋರಾಟ ಜೀವನವು ಕೂಡ ನಾವುಗಳೆಲ್ಲಾ ಹತ್ತಿರದಿಂದ ನೋಡಿ ಇವರ ಆದರ್ಶಗಳನ್ನು ಪಾಲನೆ ಮಾಡುತ್ತಿದ್ದೇವೆ. ಇಂದಿನ ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮಕ್ಕೆ ಸರ್ಕಾರಿ ನಿವೇಶನ ಹಾಗೂ ಕಟ್ಟಡದ ವ್ಯವಸ್ಥೆಯನ್ನು ತಾವು ತಮ್ಮ ಹೋರಾಟಗಳ ಮೂಲಕ ಮಾಡುತ್ತೀರೆಂದು ನಾವೆಲ್ಲ ನಂಬಿಕೊಂಡಿದ್ದೇವೆ. ಈ ಕಾರುಣ್ಯ ಆಶ್ರಮ ಇಡೀ ನಾಡಿನ ಸರ್ವ ಸಮಾಜದ ಪ್ರೀತಿ ವಿಶ್ವಾಸವನ್ನು ಗಳಿಸಿ ಕರುಣೆಯ ಬೆಲೆ ತಿಳಿಸಿರುವಂತಹ ಯಾವುದಾದರೂ ಒಂದು ಸಂಸ್ಥೆಯೆಂದರೆ ಅದು ಕಾರುಣ್ಯ ಆಶ್ರಮ ಎಂದು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಯ್ಯನಗೌಡ ಆಯನೂರು ಮಾಜಿ ತಾ. ಪಂ. ಅಧ್ಯಕ್ಷರು. ಅಶೋಕ ನಲ್ಲ ಕಾರ್ಯದರ್ಶಿಗಳು ಅಕ್ಷಯ ಜೋಳಿಗೆ ಸೇವಾ ಟ್ರಸ್ಟ್. ವೀರೇಶ ಯಡಿಯೂರು ಮಠ ಕಾರ್ಯಾಧ್ಯಕ್ಷರು ಕಾರುಣ್ಯ ಆಶ್ರಮ. ನಾಗವೇಣಿ.ಎಸ್. ಪಾಟೀಲ್ ಸಮಾಜ ಸೇವಕರು,ನೀಲಾ ಸಂಗಮೇಶ ಅಲಬನೂರು ಅಧ್ಯಕ್ಷರು ಬಿಜೆಪಿ ಮಹಿಳಾ ಮೋರ್ಚಾ, ಸಂಗಮೇಶ ಹಿರೇಮಠ ಕನ್ನಡಪರ ಹೋರಾಟಗಾರರು, ಚನ್ನ ಬಸಯ್ಯಸ್ವಾಮಿ ಆಡಳಿತಾಧಿಕಾರಿಗಳು ಕಾರುಣ್ಯ ಆಶ್ರಮ ಹಾಗೂ ಅನೇಕರು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend