ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಜುಲೈ 1 ಕ್ಕೆ ಪಕ್ಷಾತೀತ ಹೋರಾಟ….!!!

Listen to this article

ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಜುಲೈ 1 ಕ್ಕೆ ಪಕ್ಷಾತೀತ ಹೋರಾಟ.

ಸಿಂಧನೂರು :ಜೂನ್. 29. ಏಮ್ಸ್ ಸ್ಥಾಪನೆಗಾಗಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ನಿರಂತರವಾಗಿ, 48 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದು. ಜುಲೈ 1 ಕ್ಕೆ, 50 ದಿನಗಳು ಪೂರ್ಣಗೊಳ್ಳುವ ಹಿನ್ನೆಲೆ, ಈ ಹೋರಾಟವನ್ನು ಬೆಂಬಲಿಸಿ ಜುಲೈ 1 ರಂದು ಪಕ್ಷಾತೀತವಾಗಿ ಬೃಹತ್ ಪ್ರಮಾಣದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪರಮಪೂಜ್ಯ ಸೋಮನಾಥ ಶಿವಾಚಾರ್ಯ ಸ್ವಾಮಿಜಿ ಹೇಳಿದರು.

ಈ ಕುರಿತು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಜಿಲ್ಲಾ ಏಮ್ಸ್ ಹೋರಾಟ ತಾಲೂಕು ಸಮಿತಿಯಿಂದ ಪಕ್ಷಾತೀತವಾಗಿ ಸಭೆ ನಡೆಸಿ, ಜೊತೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಐಐಟಿ ಸ್ಥಾಪನೆಗಾಗಿ, ಹೋರಾಟ ನಡೆಸಿದರೂ ಕೂಡ ನಮ್ಮ ಕೈ ತಪ್ಪಿತು. ಈಗ ಜಿಲ್ಲಾ ಏಮ್ಸ್ ಕೂಡ ಕೈ ತಪ್ಪುವ ಸಾಧ್ಯತೆ ಇದ್ದು. ಏಮ್ಸ್ ಜಿಲ್ಲೆಯಲ್ಲೇ ಸ್ಥಾಪನೆ ಮಾಡಲು ಆಗ್ರಹಿಸಿ, ಜಿಲ್ಲಾ ಹೋರಾಟ ಸಮಿತಿಯಿಂದ ರಾಯಚೂರಿನಲ್ಲಿ ನಿರಂತರವಾಗಿ, 48 ದಿನಗಳ ಕಾಲ ಹೋರಾಟ ಮಾಡುತ್ತಾ ಬಂದಿದ್ದು. ಜುಲೈ ‌1 ಕ್ಕೆ 50 ದಿನಗಳು ಪೂರ್ಣಗೊಳ್ಳಲಿದ್ದು. ಇದನ್ನು ಬೆಂಬಲಿಸಿ ಜುಲೈ 1 ರಂದು ತಾಲೂಕಿನಲ್ಲಿ ಪಕ್ಷಾತೀತವಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಬುದ್ದಿಜೀವಿಗಳು, ಪ್ರಗತಿಪರರು, ವಿವಿಧ ಕನ್ನಡಪರ, ದಲಿತಪರ, ಸಂಘಟನೆಗಳ ಹೋರಾಟಗಾರರು ಭಾಗವಹಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಬಸವರಾಜ ನಾಡಗೌಡ, ಕೆ.ಕರಿಯಪ್ಪ, ರಾಜುಗೌಡ ಬಾದರ್ಲಿ, ಬಸನಗೌಡ ಬಾದರ್ಲಿ, ವೀರಭದ್ರಪ್ಪ ಕುರುಕುಂದಿ, ಶರಣಪ್ಪ ತೆಂಗಿನಕಾಯಿ, ಖಾದರ್ ಸುಭಾನಿ, ಎಸ್. ದೇವೆಂದ್ರಗೌಡ, ಡಿ.ಎಚ್. ಕಂಬಳಿ,ಜಿಲಾನಿಪಾಷ, ಪಂಪಯ್ಯಸ್ವಾಮಿ ಸಾಲಿಮಠ, ಬಸವರಾಜ ಬಾದರ್ಲಿ, ಶಮದ್ ಚೌದ್ರಿ, ದವಲಸಾಬ ದೊಡ್ಮನಿ, ಗಂಗಣ್ಣ ಡಿಶ್, ಮೌನೇಶ ದೊರೆ, ಸುರೇಶ ಕಟ್ಟಿಮನಿ, ಚನ್ನಬಸಯ್ಯಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend