ಮಕ್ಕಳಲ್ಲಿ ಶಿಸ್ತು ಮೂಡಿಸಲು ಸ್ಕೌಟ್ ಅವಶ್ಯಕ – ಶ್ರೀಮತಿ ಸವಿತಾ ಪಂಚಾಯತ್ ಅಭಿವೃದ್ಧಿಅಧಿಕಾರಿ…!!!

Listen to this article

ಮಕ್ಕಳಲ್ಲಿ ಶಿಸ್ತು ಮೂಡಿಸಲು ಸ್ಕೌಟ್ ಅವಶ್ಯಕ – ಶ್ರೀಮತಿ ಸವಿತಾ ಪಂಚಾಯತ್ ಅಭಿವೃದ್ಧಿಅಧಿಕಾರಿ.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನಗುಂಡ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಲ್ಲಿ ಭಾಗವಹಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಅವರುಮಕ್ಕಳಲ್ಲಿ ಶಿಸ್ತು ಮೂಡಿಸಲು ಸ್ಕೌಟ್ ತರಬೇತಿ ಅವಶ್ಯಕ ಎಂದು ತಿಳಿಸಿದರು

ಪ್ರಸ್ತಾವಿಕವಾಗಿ ಮಾತನಾಡಿದ ಶಾಲೆ ಮುಖ್ಯಗುರುಗಳಾದ ಶಂಕರ ದೇವರು ಹಿರೇಮಠ ಅವರು ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿ ಬೆಳವಣಿಗೆಗೆ ಬೇಸಿಗೆ ಶಿಬಿರ ಸಹಾಯಕವಾಗಲಿದೆ . ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಉತ್ತಮ ಕಬ್ಬು ಘಟಕ ದಿಂದ ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಬೇಸಿಗೆ ಶಿಬಿರದ ಅಂಗವಾಗಿ ನಾಲ್ಕು ದಿನದ ಶಿಬಿರ ನಡೆಯಲಿದೆಎಂದು ಹೇಳಿದರು

ಶ್ರೀ ಚಿಕ್ಕಯ್ಯ ಪಂಡಿತ್ ಘಟಕದ ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು . ಕಬ್ ತರಬೇತಿಯಿಂದ ತುಂಬಾ ಖುಷಿಯಾಗಿದೆ ಉತ್ತಮವಾದ ವಿಷಯಗಳು ತಿಳಿದಿದೆ ಎಂದು ಹೇಳಿದರು.

ಬೇಸಿಗೆ ಶಿಬಿರದಿಂದ ಮಕ್ಕಳಲ್ಲೇ ಕಲಿಕೆ ಪರಿಣಾಮ ಕಾರಿಯಾಗುತ್ತದೆ ಎಂದು ಸ್ಕೌಟ್ ಮಾಸ್ಟರ್ ಜಗದೀಶ್ ಕೋಳಬಾಳ ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಿಸಲು ಹಾಗೂ ಬೆಳೆಸಲು ಹಲವಾರು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಸ್ಕೌಟ್ ಕಲ್ಪಿಸುತ್ತದೆ ಎಂದರು.

ಬೇಸಿಗೆ ಶಿಬಿರದಿಂದ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಬೆಳೆಯಲು ಸಹಾಯಕವಾಗುತ್ತದೆ ಎಂದು ದೇವರಗುಡಿ ಮುಖ್ಯ ಗುರುಗಳಾದ ಜಗದೀಶ್ ನಂದಿ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕುರುಕುಂದ ಶಾಲೆಯ ಮಾಸ್ಟರ್ ನಾಗೇಶ್ ಅವರು ಉಪಸ್ಥಿತರಿದ್ದರು

ಸಮಾರಂಭದಲ್ಲಿ ಶ್ರೀ ಗಿರೀಶ್ ವಿ, ಗೀತಕ್ಯಾಂಪ್ ಶಾಲೆಯ ಮುಖ್ಯಗುರುಗಳಾದ ಬಸವಂತಪ್ಪ , ಸಹ ಶಿಕ್ಷಕರಾದ ಆಂಜನೇಯ, ಶ್ರೀಮತಿ ಸರ್ವಮಂಗಳ, ಶ್ರೀಮತಿ ಸುಷ್ಮಾ ಮುಗಳಿ, ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷರಾದ ಲಕ್ಷ್ಮಣ್ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಶ್ರೀ ವಿರುಪಾಕ್ಷಪ್ಪ ಪಕ್ಷದವರು ನಿರೂಪಣೆ ಮಾಡಿದರು ಶ್ರೀಶೈಲ್ ಅಂಬಿಗೇರ ಸ್ವಾಗತಿಸಿದರು ಆಂಜನೇಯ ವಂದನಾರ್ಪಣೆ ಮಾಡಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend