ಮರಳು ದಂದೆಕೊರರಿಂದ ಹಲ್ಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು…!!!

Listen to this article

ಮರಳು ದಂದೆಕೊರರಿಂದ ಹಲ್ಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಸಿಂಧನೂರು : ನಿನ್ನೆ ರಾತ್ರಿ 10-00 ಗಂಟೆ ಸುಮಾರಿಗೆ ಚಂದ್ರಶೇಖರ ತಂದೆ ಈರಪ್ಪ ನಾಗರಾಜ ತಂದೆ ರುದ್ರಪ್ಪ,ಜಾತಿ ಮಾದಿಗ,ಸಾಕೀನ ಸಾಸಲಮರಿ, ಇಬ್ಬರು ಸೇರಿ ಶ್ರೀಪುರಂ ಜಕ್ಷನ್ ಪೆಟ್ರೋಲ್ ಬಂಕಿಗೆ ಸೈಕಲ್ ಮೋಟಾರಕ್ಕೆ ಪೆಟ್ರೋಲ ತುಂಬಿಸಿಕೊಳ್ಳಲು ಹೋಗುತ್ತಿರುವಾಗ, ಸಾಸಲಮರಿ ಕ್ಯಾಂಪಿನ ಶ್ರೀ ತಾಯಮ್ಮ ದೇವಸ್ಥಾನದ ಹತ್ತಿರ ಸೈಕಲ್ ಮೋಟಾರನ್ನು ಹಿಂದಕ್ಕೆ ಹಾಕಲು ನಿರ್ಲಕ್ಷ್ಯತನದಿಂದ ಅತಿ ವೇಗವಾಗಿ ಚಲಿಸುತ್ತಿರುವ ಆಕ್ರಮ ಮರಳು ತುಂಬಿದ ಟಿಪ್ಪರ ವಾಹನ ಸಂಖ್ಯೆ: ಕೆ.ಎ. 51 ಎಬಿ 4402 ಹಿಂದೆ ಹಾಕುವ ಬರದಲ್ಲಿ ಹತ್ತಿರಕ್ಕೆ ಬಂದು ಸೈಕಲ್ ಮೋಟಾರಕ್ಕೆ ಢಿಕ್ಕಿ ಹೊಡೆಸುವ ಪ್ರಯತ್ನವನ್ನು ಟಿಪ್ಪರ ಚಾಲಕ ಮಾಡಿದರು. ಇದನ್ನು ಗಮನಿಸಿದ ನಾವು ವಾಹನವನ್ನು ತಡೆದು ಆತನ ನಿರ್ಲಕ್ಷ್ಯತನದ ಬಗ್ಗೆ ಕೇಳಿದಾಗ, ಚಾಲಕ ಯಾರಿಗೋ ದೂರವಾಣಿ ಕರೆ ಮಾಡಿ ನಿಮ್ಮ ಆಕ್ರಮ ಮರಳು ತುಂಬಿದ ಟಿಪ್ಪರನ್ನು ಯಾರೋ ತಡೆದಿದ್ದಾರೆ. ಅದಕ್ಕಾಗಿ ಈ ಕೂಡಲೇ ನೀವು ಸ್ಥಳಕ್ಕೆ ಬನ್ನಿ ಎಂದು ಹೇಳಿದಾಗ, 10 ನಿಮಿಷದಲ್ಲಿ ಶಿಫ್ಟ್ ಡಿಸರ್ ಕಾರಿನಲ್ಲಿ ಮುತ್ತು ಬರ್ಸಿ ಹಾಗೂ ಆತನ ಜೊತೆ ಕಾರಿನಲ್ಲಿ ಬಂದಿದ್ದ ರವಿ ಮತ್ತು ಅನಿಲ್ ಎಂಬುವವರು ಸೇರಿ ಒಟ್ಟು 4 ಜನ ಸಂಗಡಿಗರು ಆಕ್ರಮ ಕೂಟ ಕಟ್ಟಿಕೊಂಡು ಏಕಾಏಕಿ ನಮ್ಮಿಬ್ಬರ ಮೇಲೆ ಹಲ್ಲೆ ಮಾಡುತ್ತಲೆ,ಲೇ ಮಾದಿಗ ಸೂಳೆ ಮಕ್ಕಳೇ, 43 ಲಕ್ಷ ಕೊಟ್ಟು ಟಿಪರ ತಂದಿದ್ದೇನೆ, 3-00 ಲಕ್ಷ ರೋಡ್ ಟ್ಯಾಕ್ಸ್ ಕಟ್ಟಿರುತ್ತೇನೆ. ಪೊಲೀಸರಿಗೆ ಮಾಮೂಲಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳನ್ನು ಕೊಡುತ್ತೇನೆ, ನನ್ನ ಟಿಪ್ಪರನ್ನು ರಸ್ತೆಯಲ್ಲಿ ನಿಲ್ಲಿಸಲು ನೀವು ಯಾರು, ಅಂತಾ ಅವರೆಲ್ಲರೂ ಮತ್ತು ಟಿಪರ ಚಾಲಕ ಸೇರಿ ನಮ್ಮಿಬ್ಬರನ್ನು ನೆಲಕ್ಕೆ ಕೆಡವಿ ತಲೆ ಭಾಗಕ್ಕೆ ಮತ್ತು ಹೊಟ್ಟೆ ಭಾಗಕ್ಕೆ ಮತ್ತು ಕೈ ಕಾಲುಗಳಿಗೆ ಕಟ್ಟಿಗೆ, ಪಾನರ್ ಗಳಿಂದ ಬಲವಾಗಿ ಹೊಡೆದಿರುತ್ತಾರೆ.

ಸಹಾಯಕ್ಕಾಗಿ ಚೀರಿಕೊಂಡಾಗ, ರಸ್ತೆಯಲ್ಲಿ ಓಡಾಡುವ ಯಾರೋ ಪಕ್ಕದಲ್ಲಿಯೇ ನಮ್ಮ ಕ್ಯಾಂಪಿನ ಜನಕ್ಕೆ ತಿಳಿಸಿದಾಗ ನಮ್ಮ ತಾಯಿ ನರಸಮ್ಮ, ತಂದೆ ನರಸಪ್ಪ, ಹನುಮಂತ ನಿರ್ಮಲ ಜಾತಿ ಮಾದಿಗ, ನಮ್ಮ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ಬಂದು ನಮ್ಮನ್ನು ಆ ಜಗಳದಿಂದ ಬಿಡಿಸಿಕೊಳ್ಳುವ ಸಂದರ್ಭದಲ್ಲಿ ನಮ್ಮ ತಾಯಿ ಮತ್ತು ನನ್ನ ಪತ್ನಿ ಇವರ ತಲೆಕೂದಲು ಹಿಡಿದು, ನೆಲಕ್ಕೆ ಕೆಡವಿ ಸಾರ್ವಜನಿಕ ಸ್ಥಳದಲ್ಲಿ ಮಾನ ಹಾನಿ ಮಾಡಿರುತ್ತಾರೆ. ಹಾಗೂ ಇನ್ನುಳಿದ ನಮ್ಮನ್ನು ಬಿಡಿಸಿಕೊಳ್ಳಲು ಬಂದವರ ಮೇಲೆ ಹಲ್ಲೆ ಮಾಡಿ, ಲೇ ಮಾದಿಗ ಸೂಳೆ ಮಕ್ಕಳೇ ಎಂದು ಭೈಯ್ದುದಲ್ಲದೇ , ಇನ್ನೊಂದು ಬಾರಿ ಒಂಟಿಯಾಗಿ ಸಿಕ್ಕಾಗ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲವೆಂದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ.ನಾಗರಾಜ ಇತನ ಕೊರಳಿನಲ್ಲಿ ಇರುವ ಒಂದು ತೊಲೆ ಬಂಗಾರದ ಚೈನು, ಬೆರಳಿನಲ್ಲಿ ಇರುವ ಮೂರು ಉಂಗರುಗಳ ಪೈಕಿ ಅರ್ಧ ತೊಲೆ ಬಂಗಾರದ ಉಂಗುರ ಹಾಗೂ ಎರಡು ಬೆಳ್ಳಿ ಉಂಗರುಗಳು ಕಸಿದುಕೊಂಡಿರುತ್ತಾರೆ. ಮತ್ತು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತಾವು ತಂದಿರುವ ಶಿಫ್ಟ್ ಡಿಸರ ಕಾರಿನಲ್ಲಿ ಅಪಹರಣ ಮಾಡಲು ಪ್ರಯತ್ನಿಸಿದರು.

ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳಲು ಹೋದಾಗ ಕಾರಿನಲ್ಲಿರುವ ಸಣ್ಣ ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಲು ಬಂದಾಗ ನಾನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದಾಗ ಆ ಚಾಕುವಿನಿಂದ ನನ್ನ ಹಣೆಗೆ ಗಾಯವಾಗಿರುತ್ತದೆ. ನಮ್ಮೆಲ್ಲರ ಮೇಲೆ ಹಲ್ಲೆ ಮಾಡಿ, ನಮ್ಮ ತಾಯಿ ಮತ್ತು ಪತ್ನಿಗೆ ಮಾನಹಾನಿ ಮಾಡಿ, ಜಾತಿ ನಿಂದನೆ ಮಾಡಿ, ನಮಗೆಲ್ಲರಿಗೂ ಜೀವ ಬೆದರಿಕೆ ಹಾಕಿರುವದರಿಂದ, ನಾವು ಭಯ ಭೀತರಾಗಿ ಬಲವಾಗಿ ಪೆಟ್ಟಾಗಿ ನಾಗರಾಜ ಮತ್ತು ತಾಯಿ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಡವಾಗಿ ದೂರು ಸಲ್ಲಿಸಲು ಬಂದಿದ್ದೇವೆ ಎಂದು ಪತ್ರ‌‌‌
ಪಿ ಎಸ್ ಐ ನವರು ಪ್ರಕರಣ ದಾಖಲಿಸುವದಾಗಿ ತಿಳಿಸಿದ್ದಾರೆ ಅದಕಾಗಿ ನಾವು ಕಾದು ಕುಳಿತಿದ್ದೆವೆ ಎಂದು ಪತ್ರಿಕೆ ಹೇಳಿಕೆ ನೀಡಿದರು.

ಮುತ್ತು ಬರ್ಸಿ ಮತ್ತು ಆತನ ನಾಲ್ಕು ಸಹಚರರ ವಿರುದ್ಧ ಜಾತಿ ನಿಂದನೆ, ಮಾನ ಹಾನಿ, ಕಳವು, ದರೋಡೆ, ಅಪರಣ, ಕೊಲೆ ಪ್ರಯತ್ನ, ಜೀವ ಬೆದರಿಕೆ ಸೇರಿದಂತೆ ಇನ್ನಿತರ ಪ್ರಕರಣದಡಿಯಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದೂರು ದಾಖಲಿಸಿಲಾಗಿದೆ.

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend