ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ…!!!

Listen to this article

ಸಿಂಧನೂರು : ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಿಂಧನೂರು ವತಿಯಿಂದ ಕೊಪ್ಪಳ ಜಿಲ್ಲೆಯ ಬರುವ ಬರಗೂರು ಗ್ರಾಮದಲ್ಲಿ ದಲಿತ ಯುವಕನ ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬರಗೂರು ಗ್ರಾಮದಲ್ಲಿ ದಾನಪ್ಪ ಎಂಬ ಯುವಕನ ಮರ್ಯಾದೆಗೇಡು ಹತ್ಯೆ ನಡೆದಿದ್ದು, ಈ ಘಟನೆಯನ್ನು ದಲಿತ ಸಂಘಟನೆಗಳ ಒಕ್ಕೂಟ ಬಲವಾಗಿ ಖಂಡಿಸಿದೆ. ದಾನಪ್ಪ ಎಂಬ ಯುವಕ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದನು ಎಂಬ ಕಾರಣಕ್ಕೆ ದಿನಾಂಕ 24-6-2021 ರಂದು ಕೊಲೆ ಮಾಡಿ ಶವವನ್ನು ಗ್ರಾಮದ ಪಕ್ಕದ ಹೊಲವೊಂದರಲ್ಲಿ ಬಿಸಾಡಿದ್ದಾರೆ. ವ್ಯವಸ್ಥಿತವಾಗಿ ತಂತ್ರ ಹೆಣೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.ಬರಗೂರು ಗ್ರಾಮದಲ್ಲಿ ಅಸ್ಪಶತೆ ಬಹಿರಂಗ ಆಚರಣೆಯಿದೆ.ದಲಿತ ಸಮುದಾಯದ ವಾರ್ಡುಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ಅಂಗಡಿ, ಹೋಟೆಲ್, ದೇವಸ್ಥಾನಗಳಿಗೆ, ಪ್ರವೇಶವಿಲ್ಲ. ಈ ಬಗ್ಗೆ ತಾಲೂಕು ಆಡಳಿತ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ದಾನಪ್ಪ ಕೊಲೆ ಘಟನೆ ನಡೆದು ಆರು ದಿನಗಳಾದರೂ ಗ್ರಾಮಕ್ಕೆ ಜಿಲ್ಲಾಧಿಕಾರಿ ಆಗಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಲಿ ತಹಶಿಲ್ದಾರ್ ಆಗಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ. ಸ್ವತಂತ್ರ ಬಂದು 74 ವರ್ಷಗಳ ನಂತರವೂ ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಅಸ್ಪೃಶ್ಯತೆಯ ಆಚರಣೆಗಳು ನಡೆಯುತ್ತಿರುವುದು ಮಾನವ ಸಮಾಜವೇ ತಲೆತಗ್ಗಿಸುವ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ದೌರ್ಜನ್ಯಗಳಿಂದ ದಲಿತರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಪ್ರತಿ ತಾಲ್ಲೂಕುಗಳಲ್ಲಿ ತಹಸಿಲ್ದಾರ್ ನೇತೃತ್ವದಲ್ಲಿ ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ದಲಿತ ಪ್ರಗತಿಪರ ಸಂಘಟನೆಗಳ ಸಭೆ ನಡೆಸಲಾಗುತ್ತಿತ್ತು,ಈ ಸಂಧರ್ಭದಲ್ಲಿ ಅಂತಹ ಪ್ರಕರಣಗಳು ಬೆಳಕಿಗೆ ಬಂದು ಕ್ರಮ ಜರುಗಿಸಲಾಗುತಿತ್ತು. ಆದರೆ ಈ ಸಭೆಯನ್ನು ಸಂಪೂರ್ಣವಾಗಿ ನಿಲ್ಲಿಸಿರುವುದು ದಲಿತರಿಗೆ ಸರ್ಕಾರ ಬಗೆದಿರುವ ದ್ರೋಹವಾಗಿದೆ. ಬರಗೂರು ಗ್ರಾಮದ ಯುವಕ ದಾನಪ್ಪ ಕೊಲೆ ಘಟನೆಯನ್ನು ನ್ಯಾಯಾಂಗದ ಮೇಲ್ವಿಚಾರಣೆಯ ತನಿಖೆಗೆ ಒಳಪಡಿಸಬೇಕು. ಕೊಲೆಗೀಡಾದ ಯುವಕನ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕು. ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಶೀಘ್ರ ಪರಿವಾರವನ್ನು ಘೋಷಿಸಬೇಕು. ಘಟನೆಗೆ ಕಾರಣರಾದ ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಸ್ಪೃಶ್ಯತೆ ಆಚರಣೆ ಮತ್ತು ದಲಿತರ ಮೇಲಿನ ದೌರ್ಜನ್ಯ ಸರ್ಕಾರ ತಡೆಗಟ್ಟಬೇಕು. ರಾಜ್ಯದಲ್ಲಿ ಪ್ರತಿ ತಾಲೂಕಿನಲ್ಲಿ ಪ್ರತಿತಿಂಗಳು ತಹಸಿಲ್ದಾರ್ ನೇತೃತ್ವದಲ್ಲಿ ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ದಲಿತ ಪ್ರಗತಿಪರ ಸಂಘಟನೆಗಳ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕೆಂದು ತಸಿಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡರಾದ ಆರ್.ಅಂಬ್ರೂಸ್,ನಾಗರಾಜ ಸಾಸಲಮರಿ, ಹನುಮೇಶ ಜಾಲಿಹಾಳ, ನಾಗರಾಜ ಡಿ. ಎಸ್. ಪುಜಾರಿ, ಸಂಗಮೇಶ್ ಮುಳ್ಳೂರು, ಮಲ್ಲಿಕಾರ್ಜುನ ಸುಕಾಲಪೇಟೆ, ಗುರುರಾಜ ಮುಕ್ಕುಂದಾ,ನಾಗರಾಜ ಹೇಡಗಿಬಾಳ, ಮುತ್ತು ಸಾಗರಕ್ಯಾಂಪ್, ಹನುಮಂತ ಗೋಮರ್ಸಿ, ಶರಣಪ್ಪ ಗೊಬ್ಬರಕಲ್ಲು, ಇನ್ನು ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು.

ವರದಿ, ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend