ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ…!!!

Listen to this article

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

 

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಕೂಡ್ಲಿಗಿ ತಾಲೂಕು ಕಾನ ಹೊಸಳ್ಳಿ ವತಿಯಿಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರಿಂದ ಇತ್ತೀಚಿಗೆ ದಲಿತರ ಮೇಲಿನ ದೌರ್ಜನ್ಯ ಎಸಗಿದವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಹಾಗೂ ದೌರ್ಜನ್ಯಕ್ಕೊಳಗಾದ ಕುಟುಂಬದವರಿಗೆ ಶೀಘ್ರದಲ್ಲಿ ಪರಿಹಾರ ಮಂಜೂರು ಮಾಡಿಕೊಡುವ ಸಲುವಾಗಿ ತಾಲೂಕಿನ ಕಾನಹೊಸಹಳ್ಳಿ ಯ ನಾಡಕಚೇರಿಯ ಉಪ ತಹಶೀಲ್ದಾರ್ ಚಂದ್ರಮೋಹನ್ ರವರ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಬಿಎಸ್ ಯಡಿಯೂರಪ್ಪನವರು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇತ್ತೀಚಿಗೆ ರಾಜ್ಯದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕುರುಬರ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಕೊಲೆ ಬರಗೂರು ವಿಜಯಪುರದ ದೇವರಹಿಪ್ಪರಗಿಯ ಸುಲದಹಳ್ಳಿ ಯಲ್ಲಿ ದಲಿತನೊಬ್ಬನ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಹೆತ್ತತಾಯಿ ಎದುರಿನಲ್ಲಿ ಅವಮಾನವಾಗಿ ಹಳ್ಳಕ್ಕೆ ಹಾಕಿ ಹತ್ಯೆ ಮಾಡಲಾಯಿತು. ಕೊಪ್ಪಳ ಜಿಲ್ಲೆಯ ಹೊಸಹಳ್ಳಿ ತಿಗರಿ ಹಗೆದಾಳ ಮತ್ತು ವಜ್ರ ಬಂಡಿಯಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿ ದೌರ್ಜನ್ಯ ಇನ್ನು ಅನೇಕ ರೀತಿಯ ದಲಿತರ ಮೇಲೆ ದೌರ್ಜನ್ಯ ಮಾಡಲಾಯಿತು. ಈ ವಿಚಾರವಾಗಿ ಕಾನ ಹೊಸಹಳ್ಳಿ ಗ್ರಾಮದಲ್ಲಿ ವಿವಿಧ ಪರ ಸಂಘಟನೆಗಳು ಮುಖಂಡರು ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಸಂಘಟನೆ ಮೂಲಕ ಪ್ರತಿಭಟಿಸಲಾಯಿತು.
ದಲಿತರ ಮೇಲೆ ದೌರ್ಜನ್ಯ ಎಸಗಿದ ದುಷ್ಕರ್ಮಿಗಳಿಗೆ ಕಾನೂನು ಪ್ರೀತಿಯ ಶಿಕ್ಷೆಯಾಗಬೇಕು, ದೌರ್ಜನ್ಯಕ್ಕೊಳಗಾದ ಕುಟುಂಬದವರಿಗೆ ಶೀಘ್ರದಲ್ಲೇ ಸರ್ಕಾರ ಪರಿಹಾರ ನೀಡಬೇಕು, ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಚಾಲಕ ಬಿಪಿ ಗುದ್ದಿ ಚಂದ್ರು, ಮುಖಂಡರಾದ ಹೊನ್ನೂರು ಸ್ವಾಮಿ ,ಟಿ ಗಂಗಾಧರ ಬೋರಪ್ಪ ,ಮಂಜುನಾಥ ರಾಘವೇಂದ್ರ ಹೇಮಣ್ಣ. ದೊಡ್ಡ ನಾಗರಾಜ ಕಾನಾಮಡುಗು ದುರುಗೇಶ ಕೆಂಚಮ್ಮನಹಳ್ಳಿ ದುರುಗಪ್ಪ,, ಮಾರುತಿ ಮಲಿಯಪ್ಪ ವಿರುಪಾಕ್ಷಿ, ರಂಗಪ್ಪ ರಜಿನಿಕಾಂತ್ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಸಾರ್ವಜನಿಕರು ಸಮಸ್ತ ನಾಗರಿಕರು ನಾಗರಿಕರು ಉಪಸ್ಥಿತರಿದ್ದರು.


ವರದಿ ಕೆ ಎಸ್ ವೀರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend