ನಾಣ್ಯಾಪುರ:ಬಡವರ ಸಂಜೀವಿನಿ ನಾಟಿ ವೈಧ್ಯ ಗೊಲ್ಲರ ಚನ್ನಪ್ಪ…!!!

Listen to this article

ನಾಣ್ಯಾಪುರ:ಬಡವರ ಸಂಜೀವಿನಿ ನಾಟಿ ವೈಧ್ಯ ಗೊಲ್ಲರ ಚನ್ನಪ್ಪ-ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಗ್ರಾಮ ಒಂದಾನೊಂದು ಕಾಲದಲ್ಲಿ,ನಾಟಿವೈದ್ಯ,ಆರ್ಯವೈಧ್ಯಡಾ,ವೀರಣ್ಣ ರಿಂದಲೇ ಪ್ರಖ್ಯಾತಿಯಾಗಿತ್ತು ಅವರ ನಂತರ.ಅವರ ಸಹಾಯಕರಾಗಿದ್ದ
ನಾಟಿವೈಧ್ಯ ನಲ್ಲೋಬಜ್ಜ,ಆತನ ನಂತರ ಕೂಡ್ಲಿಗಿ ತಾಲೂಕಿನ ಶಿವಪುರ ಗೊಲ್ಲರಹಟ್ಟಿ,ಗ್ರಾಮದ ಗೊಲ್ಲರ ಚನ್ನಪ್ಪಜ್ಜ ನಾಟಿವೈಧ್ಯರೆಂದು ಪ್ರಖ್ಯಾತಿ ಹೊಂದಿದ್ದಾರೆ.ಶಾಲೆಯ ಮೆಟ್ಟಿಲನ್ನೇ ಕಾಣದ ಈತ ಎಂ.ಬಿ.ಬಿ.ಎಸ್ ವೈಧ್ಯರಿಗೆ ಸವಾಲಾಗಿರುವಂತಹ ಗಂಭೀರ ಕಾಯಿಲೆಗಳಿಗೆ,ತಾನು ಗಿಡಮೂಲಿಕೆಗಳಿಂದ ಹಾಗೂ ಕೆಲ ವನಸ್ಪತಿಗಳಿಂದ ತಯಾರಿಸಿದ ಔಷಧಿಗಳಿಂದ ಗುಣ ಪಡಿಸುತ್ತಾನೆ ಎಂದು ಹೇಳಲಾಗುತ್ತಿದೆ. ಮನುಷ್ಯರಿಗೆ ಮಾತ್ರವಲ್ಲ ಪಶು ಜಾನುವಾರು ಸೇರಿರಂತೆ ಕೆಲ ಪ್ರಾಣಿಗಳಿಗೆ ಕಾಡುವ ರೋಗಗಳಿಗೆ ಈತನು ನೀಡುವ ನಾಟಿ ಔಷಧಿ ರಾಮ ಬ‍ಾಣವಂತೆ. ಲಕ್ಷಗಟ್ಟಲೆ ಕರ್ಚಾದರೂ ಗಂಭೀರ ಕಾಯಿಲೆಗಳಿಗೂ ಸಹ,ಸಂಪೂರ್ಣ ಉಚಿತವಾಗಿ ನಾಟಿ ವೈಧ್ಯಸೇವೆ ಮಾಡುತ್ತಾನಂತೆ ಗೊಲ್ಲರ ಚನ್ನಪ್ಪಜ್ಜ.
ಮೂಲತಃ ಕೂಡ್ಲಿಗಿ ತಾಲೂಕು ಶಿವಪುರ ಗೊಲ್ಲರಹಟ್ಟಿಯ ಮೂಲದವರಾಗಿರುವ ಗೊಲ್ಲರ ಚನ್ಮಪ್ಪಜ್ಜ,ನಾಟಿವೈಧ್ಯಪದ್ಧತಿಯನ್ನು ತನ್ನ ಮಾವ ನೆಲಬೊಮ್ಮನಹಳ್ಳಿಯಲ್ಲಿರುವ ಹಿರಿಯ ನಾಟಿವೈಧ್ಯರಾದ ತಮ್ಮ ಮಾವರಿಂದ ಕಲಿತಿರುವುದಾಗಿ ತಿಳಿಸುತ್ತಾರೆ ಚನ್ನಪ್ಪಜ್ಜ.
ಚಿಕಿತ್ಸೆಗಾಗಿ ಈತನ ಬಳಿ ಗ್ರಾಮ ನೆರೆ ಹೊರೆಗ್ರಾಮ ಹಾಗೂ ತಾಲೂಕು ಜಿಲ್ಲೆ ನೆರೆಹೊರೆ ಜಿಲ್ಲೆಗಳಿಂದಲೂ ಚಿಕಿತ್ಸೆಗಾಗಿ ಬರುತ್ತಾರೆ.ಚಿಕ್ಕ ಪುಟ್ಟ ರೋಗಗಳಿಂದ ಭಾರೀ ಬೇನೆಗಳಿಗೆ ತನ್ನಲ್ಲಿ ನಾಟಿಔಷಧ ತಾನು ನೀಡುವುದಾಗಿ ಗೊಲ್ಲರ ಚನ್ನಪ್ಪಜ್ಜ ಹೇಳುತ್ತಾನೆ,ಚಿಕ್ಕ ವಿಷಜಂತು ನಿಂದ ಕಾಳಿಂಗ ಸರ್ಪ ಕಚ್ಚಿದರೂ ಕೂಡ ಸಕಾಲಕ್ಕೆ ತನ್ನತ್ತ ಬಂದಲ್ಲಿ.ತಾನು ಚಿಕಿತ್ಸೆ ನೀಡಿ ಗುಣಪಡಸುವುದಾಗಿ ಈವರೆಗೂ ಸಾವಿರಾರು ಜನಕ್ಕೆ,
ಚಿಕಿತ್ಸೆ ನೀಡಿ ವಿಷತೆಗೆದಿರುವುದಾಗಿ ಚನ್ನಪ್ಪಜ್ಜ ಹೆಮ್ಮೆಯಿಂದ ಹೇಳುತ್ತಾನೆ.ಬಿಡಿಗಾಸನ್ನು ನಿರೀಕ್ಷಿಸದೇ ಉಚಿತವಾಗಿ ನಾಟಿ ಔಷಧ ನೀಡುವ ಚನ್ನಪ್ಪಜ್ಜಗೆ,ಚಿಕಿತ್ಸೆ ಪಡೆಸವರು ಧನ್ಯತಾಭಾವದಿಂದ ಯೋಗ್ಯತಾನುಸಾರ ಕೊಡುವ ಹಣವೇ ಜೀವನಾಧಾರವಾಗಿದೆ.
ಮೇಕೆ ಸಾಕಾಣಿಕೆಯಿಂದ ಜೀವನ ಸಾಗಿಸುವ ಚನ್ನಪ್ಪಜ್ಜ,ಸಧ್ಯ ನಾಣ್ಯಾಪುರ ಗ್ರಾಮದ ಅಂಚಿನಲ್ಲಿ ಅಂದರೆ ಶ್ರೀಸಂಗನ ಬಸವೆಶ್ವರ ಮಠದ ರಸ್ಥೆಯ ಬದಿಯಲ್ಲಿಯ ಹೊಲದಲ್ಲಿ.ಕುರಿಮಂದಿಯನ್ನ ಕಾಯ್ದುಕೊಂಡು ತಾತ್ಕಾಲಿಕವಾಗಿ ವಾಸವಾಗಿದ್ದಾರೆ.
ಸಧ್ಯದ ವಿಳಾಸ:-ವಿಜಯನಗರ ಜಿಲ್ಲೆ, ಹಗರಿಬೊಮನಹಳ್ಳಿ ತಾಲೂಕು,ನಾಣ್ಯಾಪುರ ಗ್ರಾಮ.(ಮೊ
ಯಾವುದೇ ತರಹದ ಚಿಕ್ಕ ದೊಡ್ದ ಕಾಯಿಲೆ,ಕೈಮುಸುಗು ತೆಗೆಯುವುದು,ಸೇರಿದಂತೆ ಬೀಪಿ ಶುಗರ್,ಅಸ್ತಮಾ,ರೋಗಗಳಿಗೆ ಚಿಕಿತ್ದೆ ನೀಡುವುದಾಗಿ ಚನ್ನಪ್ಪ ತಿಳಿಸಿದ್ದಾರೆ.ಎಂತಹ ಹಳೇಯ ಕಾಯಿಲೆಯನ್ನೂ ನಾಟಿವೈಧ್ಯ ಚಿಕಿತ್ಸೆಯಿಂದ ಗುಣಪಡಿಸುವುದಾಗಿ ಹೇಳಿತ್ತಾರೆ ಚನ್ನಪ್ಪಜ್ಜ,ಯಾವುದೇ ಅಡ್ಡಪರಿಣಾಮ ಇರುವುದಿಲ್ಲ ಚಿಕಿತ್ಸೆ ಉಚಿತವಾಗಿ ನೀಡುತ್ತಿರುವುದಾಗಿ ಚನ್ನಪ್ಪಜ್ಜ ತಿಳಿಸಿದ್ದಾರೆ.ಚನ್ನಪ್ಪಜ್ಜನ ಉಚಿತ ನಾಟಿವೈಧ್ಯ ಚಿಕಿತ್ಸೆ ಸೇವೆಗೆ ಎಂತಹವರೂ ವಂದಿಸಲೇಬೇಕು ಗೌರವಿಸಲೇಬೇಕು…

ವರದಿ, ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend