ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ನಿಮಿತ್ಯ ಅತಿಥಿ ಉಪನ್ಯಾಸಕರಿಗೆ,ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಆಹಾರ ಕಿಟ್ ವಿತರಣೆ…!!!

Listen to this article

ಸಿಂಧನೂರ: ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ನಿಮಿತ್ಯ ಅತಿಥಿ ಉಪನ್ಯಾಸಕರಿಗೆ ಹಾಗೂ ಶಿಕ್ಷಕರಿಗೆ ಫುಡ್ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಶ್ರೀ ಮಾನ್ ನಿರಂಜನಂದಪುರಿ ಮಹಾಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯದ್ದಲದೊಡ್ಡಿ, ಶ್ರೀ ಸೋಮನಾಥ್ ಶಿವಾಚಾರ್ಯ ಖಾಸಾ ಶಾಖಾ ಮಠ 3 ಮೈಲ್ ಕ್ಯಾಂಪ್, ಶ್ರೀ ಸದಾನಂದಾ ತಾತನವರು ಸಿದ್ಧಾಶ್ರಮ ವೆಂಕಟಗಿರಿ ಕ್ಯಾಂಪ್, ಜನಾಬ್ ತಾಯುಉದ್ದಿನ್ ಮೌಲಾನಾ, ಮಲ್ಲಯ್ಯತಾತ ಗೋನ್ವಾರ, ವಹಿಸಿದ್ದರು. ಅಧ್ಯಕ್ಷತೆ : ಬಸನಗೌಡ ಬಾದರ್ಲಿ ಸೋಮನಗೌಡ ( ಬಸನಗೌಡ ಬಾದರ್ಲಿ ಫೌಂಡೇಶನ್ ಅಧ್ಯಕ್ಷರು ) ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರೇಂದ್ರನಾಥ್ ಅಧ್ಯಕ್ಷರು ತಾಲೂಕು ಖಾಸಗಿ ಶಾಲೆಗಳ ಒಕ್ಕೂಟ,ವೀರೇಶ ಪ್ರಧಾನ ಕಾರ್ಯದರ್ಶಿಗಳು. ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಬಸನಗೌಡ ಬಾದರ್ಲಿ ಯವರು ಕೊವಿಡ್ 2ನೇ ಅಲೆಯಲ್ಲಿ ಉಪನ್ಯಾಸಕರು,ಶಿಕ್ಷಕರು ತೀವ್ರ ಸಂಕಷ್ಟಕ್ಕೀಡಾಗಿದ್ದು,ಅವರ ನೆರವಿಗೆ ಬರಬೇಕಾದ್ದು ನಮ್ಮ ಕರ್ತವ್ಯ ಎಂದು ತಿಳಿದು ಅವರಿಗೆ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಿಕ್ಷಣ ಕಲಿಸಿದ ಗುರುಗಳಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂದು ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಸರಳವಾಗಿ ಆಚರಣೆ ಮಾಡುವ ಮುಖಾಂತರ ಶಿಕ್ಷಕ ವೃಂದಕ್ಕೆ ಫುಡ್ ಕಿಟ್ ವಿತರಣೆ ಮಾಡಲಾಗುವುದು,ನಾನು ಈ ಮಟ್ಟಕ್ಕೆ ಬೆಳೆಯಬೇಕಾದರೆ ರಾಹುಲ್ ಗಾಂಧಿಯವರ ಪ್ರೇರಣೆಯಿಂದ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ತಿಳಿಸಿದರು. ಕೋವಿಡ್ ಬಲಿಗೆ ಅನೇಕ ಜನರು ಸಾವಿಗೀಡಾಗಿದ್ದಾರೆ ಅವರಿಗೆ ಈ ಸಂದರ್ಭದಲ್ಲಿ ಸಂತಾಪ ಸೂಚಿಸಲಾಗುವುದು. ನಗರ ಮತ್ತು ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಸ್ಯಾನಿಟೈಜರ್ ಸಿಂಪರಣೆ ಮಾಡುವ ಮುಖಾಂತರ ಜನರಿಗೆ ಜಾಗೃತಿ ಮೂಡಿಸಿದ್ದೀವಿ, ಬೇರೆ ಬೇರೆ ನಗರಗಳಿಗೆ ದುಡಿಯಲು ಹೋದಂತಹ ಕಾರ್ಮಿಕರಿಗೆ 200 ನೂರು ಜನರಿಗೆ ಜೀವ ಉಳಿಸುವ ಪ್ರಯತ್ನ ಮಾಡಿದ್ದಿವಿ. ರೆಮ್ಡಿಸಿವೈಯರ್ ಕೊರತೆಯುಂಟಾದಾಗ ನಮ್ಮ ಪೌಂಢೇಶನ್ ವತಿಯಿಂದ 40 ಜನರಿಗೆ ಕೊಡಿಸುವ ಪ್ರಯತ್ನ ಮಾಡಿದೆವು, ಸಿಂಧನೂರಿನಲ್ಲಿ ಆಕ್ಸಿಜನ್ ಸಮಸ್ಯೆಯಾದಾಗ ಆಕ್ಸಿಜನ್ ಪ್ಲಾಂಟ್ ಪ್ರಾರಂಭ ಮಾಡಿ ಜೀವ ಉಳಿಸುವ ಕೆಲಸವನ್ನು ಮಾಡಿದೇವು ಒಂದು ವಾರಗಳ ಕಾಲ ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ ಮಾಡಿ ಜನರಿಗೆ ಜಾಗೃತಿ ಮೂಡಿಸಿದೆವು. ಕೋವಿಡ್ ರೋಗಿಗಳಿಗೆ ಮತ್ತು ಬೀದಿ ಬದಿಯ ವ್ಯಾಪಾರಸ್ಥರಿಗೆ ಪ್ರತಿದಿವಸ ಎರಡು ಸಾವಿರ ಜನರಿಗೆ ಊಟದ ಕಿಟ್ಟ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈಜನಾಥ್ ಸಾಗರಮಠ ಉಪನ್ಯಾಸಕರು, ಎಂಬಿ ಯುನೂಬ್ ಜಿಲ್ಲಾಧ್ಯಕ್ಷರು ಅತಿಥಿ ಶಿಕ್ಷಕರ ಸಂಘ ರಾಯಚೂರು,ವಿಶ್ವನಾಥ ಪಾಟೀಲ, ನಜೀರ್ ಸರ್, ಡಾ//ಬಸವರಾಜು ನಾಯಕ ಅಧ್ಯಕ್ಷರು ತಾಲೂಕು ಉಪನ್ಯಾಸಕರ ಸಂಘ, ಹೊನ್ನೊರು ಹುಸೇನ್ ಪ್ರಾಚಾರ್ಯರು, ಬೀರಪ್ಪ ಸಂಭೋಜಿ ಪ್ರೌಢಶಾಲೆ ತಿಡಿಗೋಳ, ಶಾಂತರಾಜ್ ನಿವೃತ್ತ ಶಿಕ್ಷಕರು,ವೆಂಕನಗೌಡ ವಟಗಲ್ ಅನೇಕ ಉಪನ್ಯಾಸಕರು ಶಿಕ್ಷಕರು ಮತ್ತು ಕಾಂಗ್ರೆಸ್ನ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು..

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend