ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಹಿನ್ನೆಲೆಯಲ್ಲಿ ಸಿಂಧನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಯಿತು….!!!

Listen to this article

ಸಿಂಧನೂರು :ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಆದೇಶದ ಶ್ರೀ ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿಯವರ ಮಾರ್ಗದರ್ಶನದಲ್ಲಿ (100 ನಾಟಹೌಟ್) ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಹಾಕುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಿಂಧನೂರು ತಾಲೂಕು ಗ್ರಾಮೀಣ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಸಿಂಧನೂರು ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು.ಭೂತಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ಪ್ರತಿಭಟನೆ ಮಾಡಲಾಯಿತು. ಕರೋನಾ ಕಾಲಘಟ್ಟದಲ್ಲಿ ಜನತೆ ತತ್ತರಿಸಿದ್ದಾರೆ, ಸಣ್ಣ ಉದ್ದಿಮೆಗಳು ಬಾಗಿಲು ಮುಚ್ಚುತ್ತಿವೆ, ಉದ್ಯೋಗಾವಕಾಶಗಳು ನಾಶವಾಗಿವೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಗಿಲು ಮುಟ್ಟಿದೆ.
ಇದರ ನಡುವೆ ಬಿಜೆಪಿ ಸರ್ಕಾರ ಇಂಧನ ತೈಲಗಳ ಮೇಲೆ ಜಗತ್ತಿನಲ್ಲಿಯೇ ಅತಿ ದುಬಾರಿ ತೆರಿಗೆ ವಿಧಿಸಿ ಅಕ್ಷರಶಃ ದರೊಡೆಗೆ ಇಳಿದಿದೆ.ಎಂದು ಜಯಪ್ರಕಾಶ ಮಾತನಾಡಿದರು.ನಂತರ ಮಾತನಾಡಿದ ಅಯ್ಯಪ್ಪ ವಕೀಲರು ಇದು ಕೇವಲ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಪ್ರಶ್ನೆ ಮಾತ್ರವಲ್ಲ.
ಅದು ವಾಣಿಜ್ಯ-ವ್ಯಾಪಾರ ಚಟುವಟಿಕೆಗಳ ಮೇಲೆ ತೀವ್ರವಾದ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಎಲ್ಲಾ ವಲಯಗಳು ಸಂಕಷ್ಟದಲ್ಲಿದ್ದು, ನಷ್ಟ ಅನುಭವಿಸುತ್ತಿವೆ.ಸರ್ಕಾರ ಪೆಟ್ರೋಲ್ ಬೆಲೆ ಏರಿಸಿ ಜನಸಾಮಾನ್ಯರ ಜೇಬನ್ನು ಪಿಕ್ ಪಾಕೇಟ್ ಮಾಡುತ್ತಿದೆ. ಇದು ಪಿಕ್ ಪಾಕೇಟ್ ಸರ್ಕಾರ.ಈ ಕುರಿತು ಜನರಿಗೆ ತಿಳುವಳಿಕೆ ಮೂಡಿಸಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸಿ ತೈಲಬೆಲೆಗೆ ಅನುಗುಣವಾಗಿ ದರ ನಿಗದಿಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಪಿ. ಶ್ರೀನಿವಾಸಲು , ಸದಸ್ಯರಾದ ಮಲ್ಲಿಕಾರ್ಜುನ ಭೂತಲದಿನ್ನಿ, ಎಚ್.ಮಾಲನಬಿ ಪತಿ ಖಾಜಾಸಾಬ, ಹನುಮಂತ ಕಲ್ಲೂರು ಕ್ಯಾಂಪ್, ಸಾಬಮ್ಮ ಕಲ್ಲೂರು ಕ್ಯಾಂಪ್,ಹಿರಿಯ ಮುಖಂಡರಾದ ರಾಮಲಿಂಗರಡ್ಡಿ,ಬಸವರಾಜ ಹುಣಸೆಗಿಡದ ರವಿರಡ್ಡಿ, ಬಸನಗೌಡ,ಯಂಕೋಬ , ಶೇಕ್ಷಾವಲಿ ವಕೀಲರು, ಗ್ರಾಮೀಣ ಮತ್ತು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend