ಸಿಂಧನೂರು : ಅಂಗನವಾಡಿ ಮತ್ತು ಆಶಾಕಾರ್ಯಕರ್ತರಿಗೆ ಆರೋಗ್ಯ ಕಾರ್ಡ್ ಮತ್ತು ಕಿಟ್ ವಿತರಣೆ-ಡಾ.ನವೀನಕುಮಾರ…!!!

Listen to this article

ಸಿಂಧನೂರು : ಅಂಗನವಾಡಿ ಮತ್ತು ಆಶಾಕಾರ್ಯಕರ್ತರಿಗೆ ಆರೋಗ್ಯ ಕಾರ್ಡ್ ಮತ್ತು ಕಿಟ್ ವಿತರಣೆ-ಡಾ.ನವೀನಕುಮಾರ.

ತಮ್ಮ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಾ. ನವೀನಕುಮಾರ ನಗರದ ಸ್ರೀಶಕ್ತಿ ಭವನದಲ್ಲಿ ಡಿಸೆಂಬರ್ 19 ರವಿವಾರ ದಂದು ಕೋರೋನ ಎಂಬ ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ಸೇವೆ ಸಲ್ಲಿಸಿದ ಕೆಳಹಂತದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತ ವಾರಿಯರ್ಸ್ ಗೆ ದಂತ ಆರೋಗ್ಯ ಕಾರ್ಡ್ ಮತ್ತು ದಂತ ಆರೋಗ್ಯ ಕಿಟ್ಟ ವಿತರಣೆ ಮಾಡಲಾಗುವುದು. ಮತ್ತು ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕೇರ್ ಆಸ್ಪತ್ರೆಯಲ್ಲಿ ಸಿಗುವಂತ ಎಲ್ಲಾ ಬಗೆಯ ಚಿಕಿತ್ಸೆಯನ್ನು 40% ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪೌರಕಾರ್ಮಿಕರಿಗೆ,ಪತ್ರಕರ್ತರಿಗೆ,ಆರೋಗ್ಯ ಕಾರ್ಡ್ ಮತ್ತು ಕೀಟಗಳನ್ನು ವಿತರಣೆ ಮಾಡಲಾಗುವುದು ಎಂದರು.

ನಂತರ ಮಾತನಾಡಿ ಕೊರೋನಾ ಸಂಕಷ್ಟ ಸಮಯದಲ್ಲಿ ಹಗಲಿರುಳೆನ್ನದೆ ಪ್ರಾಣವನ್ನೂ ಲೆಕ್ಕಿಸದೆ ಬಹಳಷ್ಟು ಜನ ಕೊರೊನಾ ವಾರಿಯರ್ಸ್ ಆಗಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಕೂಡಾ. ಅವರ ಸೇವೆಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಡಾ.ನವೀನ್ ಮಲ್ಟಿಸ್ಪೆಷಲಿಟಿ ಡೆಂಟಲ್ ಕೇರ್ ಸಿಂಧನೂರು ವತಿಯಿಂದ 700 ಜನರಿಗೆ ಕರೊನಾ ವಾರಿಯರ್ಸ್ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ದಂತ ಆರೋಗ್ಯ ಕಾರ್ಡ್ ಮತ್ತು ದಂತ ಆರೋಗ್ಯ ಕಿಟ್ಟು ವಿತರಣೆ ಮಾಡಲಾಗುವುದು ಇವರ ಕಾರ್ಯಕ್ಕೆ ಶ್ಲಾಘನೀಯ ಎಂದು ಚನ್ನಬಸವತಾತ ತಿಳಿಸಿದರು.

ಈ ಸಂದರ್ಭದಲ್ಲಿ ಅವಿನಾಶ್ ದೇಶಪಾಂಡೆ ಜೀವ ಸ್ಪಂದನ ಸೇವಾ ಸಂಸ್ಥೆ ರಾಯಚೂರು, ವನಸಿರಿ ಪೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರು ,ಅಶೋಕ ನಲ್ಲಾ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್, ಚನ್ನವೀರ ಇತರಿರದ್ದರು..

ವರದಿ, ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend