ಆಲೂರಲ್ಲಿ “ಸಂಜೀವಿನಿ ಜ್ಞಾನ ವಿಕಾಸ ಕೇಂದ್ರ” ಉದ್ಘಾಟನೆ…!!!

Listen to this article

ಆಲೂರಲ್ಲಿ “ಸಂಜೀವಿನಿ ಜ್ಞಾನ ವಿಕಾಸ ಕೇಂದ್ರ” ಉದ್ಘಾಟನೆ*

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ತಾಯಕನಹಳ್ಳಿ ವಲಯದ ಆಲೂರು ಕಾರ್ಯಕ್ಷೇತ್ರದಲ್ಲಿ. ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಸಂಸ್ಥೆಯಡಿ,”ಸಂಜೀವಿನಿ” ಹೆಸರಿನ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಂಜುನಾಥ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ತಾಯಿಯ ಪಾತ್ರ ತುಂಬಾ ಮುಖ್ಯ ಮತ್ತು ಪವಿತ್ರವಾಗಿದ್ದು, ಮಕ್ಕಳ ಶಿಕ್ಷಣದ ಬಗ್ಗೆ ತಾಯಂದಿರು ಹೆಚ್ಚಿನ ಗಮನ ಹರಿಸಬೇಕೆಂದರು. ಕೋವಿಡ್ ಕಾರಣದಿಂದ ಮಕ್ಕಳಿಗೆ ಶಿಕ್ಷಣ ಮೌಲ್ಯ ಕುಸಿದು ಹೋಗಿದೆ, ದಯವಿಟ್ಟು ಮಕ್ಕಳನ್ನು ಮೊಬೈಲಿನಿಂದ ದೂರಮಾಡಿ ಸಂಸ್ಕಾರ ನೀಡುವುದು ತಾಯಂದಿರ ಜವಾಬ್ದ‍ಾರಿ ಎಂದರು. ಒಕ್ಕೂಟದ ಅಧ್ಯಕ್ಷ ಸಣ್ಣಚನ್ನಬಸಪ್ಪ ಮಾತನಾಡಿ,ಮೊದಲು ಯೋಜನೆಯ ನಮ್ಮಲ್ಲಿ ಪ್ರಾರಂಭವಾದಾಗ ನಮಗೆ ಸಂಘದ ಮಹತ್ವ ತಿಳಿದಿರಲಿಲ್ಲ, ಇಂದು ಯೋಜನೆಯಿಂದ ನಾವೆಲ್ಲ ಹೆಚ್ಚಿನ ಸಾಲವನ್ನು ಕಡಿಮೆ ಬಡ್ಡಿಯಲ್ಲಿ ಪಡೆಯುವಂತೆ ಮಾಡಲ‍ಾಗಿದೆ. ಹೆಚ್ಚಿನ ಬಡ್ಡಿಯ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ, ನಮಗೆ ನಮ್ಮ ಊರಿನಲ್ಲಿ ಸಾಲ ಸೌಲಭ್ಯಗಳನ್ನು ದೊರೆಯುವಂತೆ ಮಾಡಿಕೊಟ್ಟಂತಹ ಪೂಜ್ಯರಿಗೆ ಮತ್ತು ಅಮ್ಮನವರಿಗೆ ಕೃತಜ್ಞರಾಗಿದ್ದೇವೆ ಎಂದರು. ರೂಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಗ್ರಾಮ ಪಂಚಾಯತ್ ಸದಸ್ಯ ಸೋಮಣ್ಣ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಂಜುಳಾ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿ ತಿಪ್ಪಣ್ಣ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು..

ವರದಿ.ವಿರೇಶ್, ಕೆ, ಎಸ್, ಹೊಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend