ಮೊದಲು ಮತಾಂತರವಾಗಿದ್ದು ಯಾರು ಮುಖ್ಯಮಂತ್ರಿಗಳೇ?* ಈ ಪ್ರಶ್ನೆ ಬಸವರಾಜ್ ಬೊಮ್ಮಾಯಿ ಮೊದಲು ಇತಿಹಾಸ ತಿಳಿದುಕೊಳ್ಳಿ..?

Listen to this article

ಮೊದಲು ಮತಾಂತರವಾಗಿದ್ದು ಯಾರು ಮುಖ್ಯಮಂತ್ರಿಗಳೇ?* ಈ ಪ್ರಶ್ನೆ ಬಸವರಾಜ್ ಬೊಮ್ಮಾಯಿ ಮೊದಲು ಇತಿಹಾಸ ತಿಳಿದುಕೊಳ್ಳಿ……..?

ಮತಾಂತರ ಎಂಬುದು ಕೆಳಜಾತಿಗಳಿಗೆ ಮಾತ್ರ ಮೀಸಲಾಗಿದೆ‌ ಎಂದು ರಾಜ್ಯ ಸರ್ಕಾರ ಭಾವಿಸಿದಂತಿದೆ. ಕೆಳಜಾತಿಗಳನ್ನು ಅದರಲ್ಲೂ ದಲಿತರನ್ನು ಬ್ರಾಹ್ಮಣ್ಯದ ಕ್ರೌರ್ಯ ಬಾಹುಗಳಲ್ಲಿಯೇ ಕಟ್ಟಿ ಹಾಕುವ ಹುನ್ನಾರವೇ *ಮತಾಂತರ ನಿಷೇಧ ಕಾಯ್ದೆ*. ಕರ್ನಾಟಕದಲ್ಲಿ ಪ್ರಸ್ತಾಪಗೊಂಡಿರುವ ಈ ಕಾಯ್ದೆಯ ಕರಡಿನಲ್ಲಿ ದಲಿತರನ್ನು ಅಪ್ರಾಪ್ತರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಹೋಲಿಸಲಾಗಿದೆ‌ ಎಂದು ಪ್ರಜಾವಾಣಿ ವರದಿ‌ ಮಾಡಿದೆ. ಇಂತಹ ದುಷ್ಟ ಆಲೋಚನೆಗೆ ಏನೆನ್ನಬೇಕೋ ತಿಳಿಯುತ್ತಿಲ್ಲ.

ಮತಾಂತರ ಆರಂಭವಾಗಿದ್ದು ಎಲ್ಲಿಂದ ಎಂದು ಬಸವರಾಜ ಬೊಮ್ಮಾಯಿಯವರಿಗೆ ತಿಳಿಯುವವರೆಗೆ ಈ ಸಂದೇಶವನ್ನು ಪ್ರತಿಯೊಬ್ಬ ದಲಿತ ರಾಜಕಾರಣಿ ಮನಸ್ಸಿಗೆ ಮುಟ್ಟುವಂತೆ ಈ ಸಂದೇಶ ತಲುಪಬೇಕಿದೆ………

*ಮಹಮದ್ ತುಘಲಕ್ ಮಗ ಫಿರೋಜ್ ಶಾ ತುಘಲಕ್ ನ ಮಂತ್ರಿ ಖಾನ್ ಐ ಜಹಾನ್ ಮತಾಂತರಗೊಂಡ ಬ್ರಾಹ್ಮಣನಾಗಿದ್ದ*

*ಈ ಖಾನ್ ಐ ಜಹಾನ್ ಗೆ ಆಗಿನ ಕಾಲಕ್ಕೇ 15 ಲಕ್ಷ ಸಂಬಳ.* *ಈತನ ಮಕ್ಕಳು ಹಾಗೂ ಅಳಿಯಂದಿರೂ ಸಹ ತುಘಲಕ್ ರಾಜ್ಯದಲ್ಲಿ ಉನ್ನತ ಅಧಿಕಾರಕ್ಕಾಗಿ ಮತಾಂತರಗೊಂಡಿದ್ದರು*

*ಇದೇ ಫಿರೋಜ್ ಶಾ ತುಘಲಕ್ ಆಸ್ಥಾನದ ಮತ್ತೊಬ್ಬ ಮುಖ್ಯ ಅಧಿಕಾರಿ ವಜೀರ್ ಮಲಿಕ್ ಐ ಮಕ್ಬುಲ್*. *ಈತನೂ ಸಹ ಮತಾಂತರಗೊಂಡ ತೆಲಂಗಾಣ ಬ್ರಾಹ್ಮಣ.*ಇಡೀ‌ ಕಂದಾಯ ಇಲಾಖೆ ಈತನ ಸುಪರ್ದಿಯಲ್ಲಿತ್ತು.* *18 ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದನು*.

*ಈ ಮಲಿಕ್ ಐ ಮಕ್ಬುಲ್ ನ ಮಗ ಇಮ್ಮಡಿ ಖಾನ್ ಐ ಜಹಾನ್.* *ಇವನೂ ಮುಂದೆ ಮಂತ್ರಿಯಾದನು*.

*ಭಾರತದ ಮೊಟ್ಟ ಮೊದಲ‌ ಮಸೀದಿಯನ್ನು ಕಟ್ಟಿಸಿದ್ದು ಚೇರಮಾನ್ ಪೆರುಮಾಳ್ ಎಂಬ ಕೇರಳದ ಬ್ರಾಹ್ಮಣ ರಾಜ*. *ಕಡೆಗಾಲದಲ್ಲಿ‌ ಈತನು ಮೆಕ್ಕಾ ಯಾತ್ರೆಗೆ ತೆರಳಿ ಬರುವಾಗ ನಿಧನ ಹೊಂದಿದ.* *ಈತನು ಕಟ್ಟಿಸಿದ ಮಸೀದಿ ಕೇರಳದಲ್ಲಿ‌ ಇಂದಿಗೂ ಇದೆ.*

*ಈ ಚೇರಮಾನ್ ಪೆರುಮಾಳ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಾಜುದ್ದೀನ್ ಎಂಬ ಹೆಸರು ಪಡೆದ ಬಗ್ಗೆಯೂ ಐತಿಹ್ಯಗಳಿವೆ. ಈತನ ಇಸ್ಲಾಂ ಗುರು ಅರಬ್ಬಿನ ಮಲಿಕ್ ಬಿನ್ ದಿನಾರ್.* *ಈ ದಿನಾರ್ ಕಾಲದಲ್ಲಿಯೇ ಕೋಡುಂಗಲ್ಲೂರ್, ಮಂಗಳೂರು, ಕಾಸರಗೋಡು ಮುಂತಾದ ಕಡೆ ಮಸೀದಿಗಳು ನಿರ್ಮಾಣವಾದವು.*

*ಅಕ್ಬರನ ಕಾಲದಲ್ಲಿ ಶೇ. 16 ರಷ್ಟು, ಶಹಜಹಾನನ ಕಾಲದಲ್ಲಿ ಶೇ. 24 ರಷ್ಟು, ಔರಂಗಜೇಬನ ಕಾಲದಲ್ಲಿ ಶೇ. 33 ರಷ್ಟು ಬ್ರಾಹ್ಮಣರು, ರಜಪೂತರು, ಕಾಯಸ್ತರು, ಖತ್ರಿಗಳು, ಮರಾಠರು ಆಸ್ಥಾನದ ನೊಬೆಲ್ಲರಾಗಿದ್ದರು (ಮಂತ್ರಿಗಳು).*

*ಕ್ರಿ.ಶ‌ 52 ರಲ್ಲಿ ಕೇರಳಕ್ಕೆ ಬಂದ ಸೈಂಟ್ ಥಾಮಸ್ ಅಲ್ಲಿ ಕ್ರೈಸ್ತ ಮತ‌ಪ್ರಚಾರಕರಾಗಿ ಕೆಲಸ ಮಾಡಿದರು.* *ಎಳರಪ್ಪಲ್ಲಿಕಲ್ ಅಂದರೆ ಏಳು‌ ಚರ್ಚ್ ಗಳನ್ನು ಸ್ಥಾಪಿಸಿದರು.* *ಅವರ ಪ್ರಭಾವದಿಂದಾಗಿ ಅಲ್ಲಿನ ಹಲವು ಬ್ರಾಹ್ಮಣ ಕುಟುಂಬಗಳು‌ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದವು.*

*ಅಂದಿನಿಂದ ಇಲ್ಲಿಯವರೆಗೂ ಕೇರಳ ಹಲವು ಧರ್ಮಗಳ ಬೀಡಾಗಿದೆ.* *ಯಾವುದೇ ಕೋಮುಘರ್ಷಣೆಗೆ ಅಲ್ಲಿನ ಸೌಹಾರ್ಧ ಮನಸ್ಸುಗಳು‌ ಅವಕಾಶ ಕೊಟ್ಟಿಲ್ಲ.*

ಇದು ಭಾರತದ ಮೇಲ್ಜಾತಿಗಳ ಮತಾಂತರದ‌ ನಿಜ ಮುಖ. ಇದನ್ನು ಬಚ್ಚಿಟ್ಟುಕೊಂಡು‌ ಈಗ ದಲಿತರ ಮೇಲೆ ಮತಾಂತರ ನಿಷೇಧ ಕಾಯ್ದೆ ಹೇರಲು ಹೊರಟಿದೆ.

ಬಿಜೆಪಿ-ಸಂಘ ಪರಿವಾರಗಳಿಗೆ ಮತಾಂತರ ಎಂಬುದು‌ ಓಟ್ ಬ್ಯಾಂಕ್‌ ರಾಜಕಾರಣ. ಆದರೆ ದಲಿತರಿಗೆ, ತಳಸಮುದಾಯಗಳಿಗೆ ಅದು ಬಿಡುಗಡೆಯ ಬಾಗಿಲು. ಅಸ್ಪೃಶ್ಯತೆ ನಿವಾರಣೆಗೆ ಇರುವ ದಾರಿ. ಅಂಬೇಡ್ಕರ್ ಅವರು ತೋರಿದ ದಾರಿ.

ದಲಿತರ ಘನತೆಯ ಬದುಕಿಗಾಗಿ ಮತಾಂತರ ಅವಶ್ಯಕ. ಆದರೆ ಕರ್ನಾಟಕ ಸರ್ಕಾರ ತರಲು ಹೊರಟಿರುವ *ಮತಾಂತರ ನಿಷೇಧ ಕಾಯ್ದೆಯಲ್ಲಿ ದಲಿತರನ್ನು‌ ಮತಾಂತರಿಸಿದರೆ ಹೆಚ್ಚು ಶಿಕ್ಷೆಯಂತೆ. ಮೇಲ್ಜಾತಿಗಳನ್ನು ಮತಾಂತರಿಸಿದರೆ ಕಡಿಮೆ‌‌ ಶಿಕ್ಷೆಯಂತೆ.* ಇದು ದಲಿತರ *ಅಟ್ರಾಸಿಟಿ ಕಾಯ್ದೆಯ ವಿರುದ್ಧವಾಗಿ ಮೇಲ್ಜಾತಿಗಳು ತೀರಿಸಿಕೊಳ್ಳುತ್ತಿರುವ ಸೇಡಲ್ಲದೆ ಮತ್ತೇನು?*

ಮುಖ್ಯಮಂತ್ರಿಗಳೇ… ಅಧಿಕಾರದ ಆಸೆಗಾಗಿ ಮತಾಂತರವಾದವರು ದಲಿತರೋ, ಮೇಲ್ಜಾತಿಗಳೋ‌ ಸ್ವಲ್ಪ ಇತಿಹಾಸ ತಿರುವಿ ನೋಡಿ ತಿಳಿಯಿರಿ. ಅಸ್ಪೃಶ್ಯತೆ ನಿಷೇಧ ಮಾಡುವ ಯೋಗ್ಯತೆ ಇಲ್ಲದ ಮೇಲೆ ಮತಾಂತರ ನಿಷೇಧವೇಕೆ?

ಮುಖ್ಯಮಂತ್ರಿಗಳೇ… ದಲಿತರಿಗೆ ಅಪ್ರಾಪ್ತರು ಹಾಗೂ ಬುದ್ಧಿಮಾಂದ್ಯರ ಹಾಗೆ(ಇವರ ಬಗ್ಗೆ ನಮಗೆ ಅನುಕಂಪವಿದೆ, ಗೌರವವಿದೆ) ಸ್ವಂತ ಆಲೋಚನೆ ಇಲ್ಲವೆಂದು ಗ್ರಹಿಸಿರುವ ನಿಮ್ಮಂತಹ ಬ್ರಾಹ್ಮಣ್ಯ ಮನಸ್ಥಿತಿಗೆ ನಮ್ಮ ಧಿಕ್ಕಾರ..

ದಲಿತರು ಆಮಿಶಕ್ಕೆ ಬಲಿಯಾಗುವ ದಡ್ಡರೆಂದು‌ ಭಾವಿಸಿರುವ ನಿಮ್ಮ ದುರ್ಬುದ್ಧಿಗೆ ನಮ್ಮ ಧಿಕ್ಕಾರ..

ಇಂತಹ ರಾಜಕೀಯ ಪಕ್ಷದಲ್ಲಿ ಗುಲಾಮರಾಗಿರುವ ದಲಿತರಿಗೂ ಧಿಕ್ಕಾರ…

– *ದಲಿತರು*
ಪ್ರತಾಪ್ ಛಲವಾದಿ
ತಾಲೂಕು ಛಲವಾದಿ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿಗಳು ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend