ಸಿಂಧನೂರು :66ನೇ ಕನ್ನಡ ರಾಜ್ಯೋತ್ಸವದ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ- ರಾಮಕೃಷ್ಣ ಭಜಂತ್ರಿ…!!!

Listen to this article

ಸಿಂಧನೂರು :66ನೇ ಕನ್ನಡ ರಾಜ್ಯೋತ್ಸವದ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ- ರಾಮಕೃಷ್ಣ ಭಜಂತ್ರಿ .

ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಜಿಲ್ಲಾ ಸಂಚಾಲಕ ರಾಮಕೃಷ್ಣ ಭಜಂತ್ರಿ ದಿನಾಂಕ18-12-2021 ಶನಿವಾರ ರಂದು ಸಂಜೆ 4 ಘಂಟೆಗೆ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮಹೋತ್ಸವ ರಸಮಂಜರಿ ಕಾರ್ಯಕ್ರಮದ ಅಂಗವಾಗಿ ಮಾತನಾಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಬಾವಚಿತ್ರ ಮೆರವಣಿಗೆ ಮೂಲಕ ಸಂಜೆ 4 ಘಂಟೆಗೆ ರಸಮಂಜರಿ ಹಾಗೂ ಕರವೇ ನಡೆದು ಬಂದ ದಾರಿ ದ್ವನಿ ಸುರುಳಿ ಬಿಡುಗಡೆ ಮಾಡಲಾಗುವುದು. ಆರ್. ಜಿ. ಮೇಲೋಡಿಸ್ ಸಿಂಗಿಂಗ್ ಕರೋಕೆ ಸ್ಟುಡಿಯೋದಿಂದ ಸಂಗೀತ ಸಂಜೆ, ಬಿಲಿವ್ ಡ್ಯಾನ್ಸ್ ಸ್ಟುಡಿಯೋ ಹಾಗೂ ಹಿಂದೂಸ್ತಾನಿ ಡ್ಯಾನ್ಸ್ ಅಕಾಡೆಮಿಯಿಂದ ಡ್ಯಾನ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ರಸಮಂಜರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಧಾದಿಕಾರಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಬಸವರಾಜು ಗಸ್ತಿ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಸುಮಾರು 14 ವರ್ಷಗಳಿಂದ ಕನ್ನಡಪರ ಹೋರಾಟದಜೊತೆಗೆ ಸಾಮೂಹಿಕ ವಿವಾಹದಂತ, ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ 18ರಂದು ನಗರದ ಶ್ರೀ ಶಕ್ತಿ ಭವನದ ಮುಂಭಾಗದಲ್ಲಿ ಶನಿವಾರದಂದು 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಮ್ಮನ ಉತ್ಸವ, ರಸಮಂಜರಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮಾಡಲಾಗುವುದು.ಈ ಕಾರ್ಯಕ್ರಮದಲ್ಲಿ ಕನ್ನಡದ ಕೋಗಿಲೆ ಖ್ಯಾತಿಯ ಅರ್ಜುನ್ ಇಟಗಿ, ಜೀ ಕನ್ನಡ ಸರಿಗಮಪ ಖ್ಯಾತಿಯ ಮೋನಮ್ಮ ಸೋಮನಮರಡಿ, ಮಯೂರಿ ಬಸವರಾಜ್ ಬಳ್ಳಾರಿ ಕುಚುಪುಡಿ ಡ್ಯಾನ್ಸರ್ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ ವೇದಿಕೆ ಎಂದು ಇಡಲಾಗುವುದು ಎಂದರು.

ನಂತರ ಮಾತನಾಡಿದ ಗಂಗಣ್ಣ ಡಿಸ್. ಬೆಳಗಾವಿಯಲ್ಲಿ ಎಮ್ಇಎಸ್. ಮರಾಠಿ ಪುಂಡರಿಗೆ ಮಸಿ ಬಳಿದಿರುವ ಕನ್ನಡದ ಹೋರಾಟಗಾರ ಸಂಪತಕುಮಾರ ದೇಸಾಯಿ ಅವರ ಮೇಲೆ ಗುಂಡಾ ಕಾಯ್ದೆ ದಾಖಲಿಸಿ ಅವರನ್ನು ಅರೆಷ್ಟ ಮಾಡಲಾಗಿದೆ. ಅವರ ಮೇಲೆ ಹಾಕಿರುವ ಪ್ರಕರಣವನ್ನು ವಾಪಸ್ಸು ತೆಗೆದುಕೊಂಡು ಅವರನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಸಂಚಾಲಕ ಲಕ್ಷ್ಮಣಭೋವಿ, ರೈತ ಘಟಕ ಅಧ್ಯಕ್ಷರಾದ ರಫಿ ಕುನ್ನಟಗಿ, ಲಿಂಗಪ್ಪ ತಾಲೂಕು ಉಪಾಧ್ಯಕ್ಷರು,ಸುರೇಶ್ ನಗರ ಘಟಕ ಅಧ್ಯಕ್ಷರು,ಹುಸೇನ್ ಭಾಷಾ, ರಾಮಕೃಷ್ಣ ಬಜಂತ್ರಿ, ಬಸವರಾಜ,ಬೂದೇಶ, ಮಾಕರೆಡ್ಡಿ ಇತರರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend