ಮೊಳಕಾಲ್ಮುರು: ಲಾಕ್ ಡೌನ್ ವೇಳೆ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ವಶಕ್ಕೆ: 75 ದ್ವಿಚಕ್ರವಾಹನ ಸಿಜ್.!!

Listen to this article

 

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಕೊರೋನಾಸೋಂಕು ಹರಡುವ ಭೀತಿಯಿಂದಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಸೆಮಿ ಲಾಕ್ ಡೌನ್ ಮೊದಲ ದಿನವೇ ತಾಲೂಕಿನಲ್ಲಿ ಸಂಪೂರ್ಣವಾಗಿ ಬೆಂಬಲ ವ್ಯಕ್ತವಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಗ್ಗೆ 10 ರವರೆಗೆ ಅವಕಾಶ ನೀಡಿರುವ ಪರಿಣಾಮ ಜನರು ಅಂಗಡಿ ಮುಂಗಟ್ಟುಗಳ ಮುಂದೆ ಸಾಲು ಗಟ್ಟಿ ನಿಂತಿದ್ದರು. ಬೆಳಗ್ಗೆ 10ರವರೆಗೆ ಅಲ್ಲಲ್ಲಿ ಜನಸಂದಣಿ ಕಂಡು ಬಂದರೂ ಸರ್ಕಾರ ನೀಡಿದ ಗಡುವಿನ ನಂತರ ಸೆಮಿ ಲಾಕ್ ಡೌನ್ ಬಿಗಿಗೊಳಿಸಲು ಪೋಲೀಸರು ಮುಂದಾದರು. ಅನಗತ್ಯವಾಗಿ ಓಡಾಡುವಂತವರಿಗೆ ಲಾಠಿ ರಚಿ ತೋರಿಸಿದ್ದು ಅಲ್ಲದೆ ಜನರಿಗೆ ಹೊರಗೆ ಬಾರದಂತೆ ನಿರ್ಬಂಧ ಹೇರಿದ್ದರು. ಜನನಿಬಿಡ ಪ್ರದೇಶವಾಗಿದ್ದ ಇಲ್ಲಿನ ಬಸ್ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುವಂತೆ ಕಂಡುಬಂತು. ಬೆಳಗ್ಗೆ 10 ನಂತರ ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಿಸುವಲ್ಲಿ ಪೋಲೀಸರು ಯಶಸ್ವಿಯಾದರು. ಇದರಿಂದ ಪಟ್ಟಣ 11 ನಂತರ ಸಂಪೂರ್ಣವಾಗಿ ಬಂದ್ಆಗಿತ್ತು. ಮೊಳಕಾಲ್ಮುರು ಠಾಣಾ ವ್ಯಾಪ್ತಿಯಲ್ಲಿ 50, ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25 ದ್ವಿ ಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ. ಪಟ್ಟಣವೂ ಅಲ್ಲದೆ ಗ್ರಾಮೀಣ ಭಾಗದಲ್ಲಿ ಸೆಮಿ ಲಾಕ್‌ಡೌನ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಅಲ್ಲಲ್ಲಿ ಜನರ ಓಡಾಟ ಕಂಡುಬಂದಿತಾದರೂ ಜನರ ಓಡಾಟ ನಿಯಂತ್ರಿಸಲು ಪೊಲೀಸರು ಲಾಠಿ ಹಿಡಿದು ಬೀದಿಗಿಳಿದಿದ್ದರು. ಪರಿಣಾಮ ಪ್ರಮುಖ ಬೀದಿಗಳು ಖಾಲಿಖಾಲಿಯಾಗಿದ್ದವು. ವೃದ್ದರು, ಯುವಕರು, ಮಹಿಳೆಯರು ಹೊರಗಡೆ ಕಾಣಸಿಗಲಿಲ್ಲ. ಕಾರು, ಆಟೋ, ದ್ವಿಚಕ್ರ ವಾಹನಗಳು ರಸ್ತೆಗಿಳಿಯಲಿಲ್ಲ. ಇದರಿಂದ ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳು ಬಿಕೋ ಎನ್ನುವಂತೆ ಕಂಡುಬಂದಿತು…

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend