ಗರ್ಭಿಣಿಯರು ಆರೋಗ್ಯವಾಗಿರಬೇಕೆಂದರೆ ಅಯೋಡಿನ್ ಬಹಳ ಮುಖ್ಯ : ಟಿ.ಚ್.ಓ ಡಾ. ಸುಧಾ…!!!

Listen to this article

ಗರ್ಭಿಣಿಯರು ಆರೋಗ್ಯವಾಗಿರಬೇಕೆಂದರೆ ಅಯೋಡಿನ್ ಬಹಳ ಮುಖ್ಯ : ಟಿ.ಚ್.ಓ ಡಾ. ಸುಧಾ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಶ್ವ ಅಯೋಡಿನ್ ಸಪ್ತಾಹದ ಅಂಗವಾಗಿ ಮೊಳಕಾಲ್ಮೂರು ದಾಸರ ಹಟ್ಟಿ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣದ ಸಪ್ತಾಹದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿಎಚ್ಒ. ಡಾ. ಸುಧಾ ಮಾತನಾಡಿ ಗರ್ಭಿಣಿಯರಿಗೆ ಪದೇಪದೇ ಗರ್ಭಪಾತವಾಗುವುದು ಅಂಗವಿಕಲ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗುವುದು. ಇನ್ನು ಮುಂತಾದ ಸಮಸ್ಯೆಗಳನ್ನು ಕಾಡುತ್ತವೆ ಅಯೋಡಿನ್ ಕಡಿಮೆ ಆದರೆ ಇಂಥ ಸಮಸ್ಯೆಗಳು ಕಾಣುತ್ತವೆ. ನಮ್ಮ ಜೀವಿತ ಅವಧಿಯಲ್ಲಿ ಒಂದು ಚಮಚ ಅಯೋಡಿನ್ ಉಪ್ಪು ಬೇಕಾಗುತ್ತದೆ ಆದ್ದರಿಂದ ಎಲ್ಲರೂ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳಾದ ಹಾಲು, ಮೊಟ್ಟೆ, ಮೀನು,ರಾಗಿ ಮುಂತಾದವು ದವಸ ಧಾನ್ಯಗಳನ್ನು ಬಳಸುವುದರಿಂದ ಅದೇ ರೀತಿ ಮಣ್ಣಿನಲ್ಲಿ ಬೆಳೆಯುವ ಎಲ್ಲಾ ತರಕಾರಿಗಳನ್ನು ಬಳಸುವುದರಿಂದ ಹೆಚ್ಚಾಗಿ ಅಯೋಡಿನ್ ಸಿಗುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಸುಧಾ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಧಿಕಾರಿ ಗಳಾದ ಡಾ ಸುಧಾ. ಸಿಡಿಪಿಓ. ಶ್ರೀಮತಿ ಸವಿತಾ ಶ್ರೀ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜಾನಕಿ .ಹಿರಿಯ ಆರೋಗ್ಯ ನಿರೀಕ್ಷಣೆ ಅಧಿಕಾರಿ ಶ್ರೀ ಗುರುಮೂರ್ತಿ. ಶ್ರೀಮತಿ ವಿಶಾಲಾಕ್ಷಿ ಕಾರ್ಯಕ್ರಮದ ವ್ಯವಸ್ಥಾಪಕರು ಶ್ರೀ ನವೀನ್. ಕಿರಿಯ ಪ್ರಾಥಮಿಕ ಆರೋಗ್ಯ ಅಧಿಕಾರಿ ರೂಪ ನಾಗವೇಣಿ ಮತ್ತು ಆಶಾ ಕಾರ್ಯಕರ್ತರು ಅಂಗನವಾಡಿ ಸಿಬ್ಬಂದಿಗಳು ಹಾಜರಿದ್ದರು..

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend