ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಪುನೀತ್ ರಾಜಕುಮಾರ್ ಅವರ ಸಾವು…!!!

Listen to this article

ಅರಗಿಸಿಕೊಳ್ಳಲಾಗದ ಪುನೀತ್ ರಾಜಕುಮಾರ್ ಅವರ ಸಾವು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಳ್ಳಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಭಾನುವಾರ ಸಂಜೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ನುಡಿನಮನ ಕಾರ್ಯಕ್ರಮ ತಬಲ ಬಾರಿಸುವ ಮೂಲಕ ಉದ್ಘಾಟಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಸಾಹಿತ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ ಡಾ. ಪುನೀತ್ ರಾಜಕುಮಾರ್ ಅಜರಾಮರವಾಗಿದೆ ನಟನೆ ಅಲ್ಲದೆ ಸಾಮಾಜಿಕ ಶೈಕ್ಷಣಿಕ ಕಾರ್ಯದಲ್ಲಿಯೂ ಸಹ ಮೇಲುಗೈ ಸಾಧಿಸಿದ ಒಬ್ಬ ಮಹಾನ್ ನಟ ಅವರ ಈವರೆಗೂ ಅರಗಿಸಿಕೊಳ್ಳಲಾಗದ ಎಂದರು ಪುನೀತ್ ರಾಜಕುಮಾರ್ ಅವರು ಮಾಡಿದ ಕೊಡುಗೆಗಳ ಬಗ್ಗೆ ಸ್ಮರಿಸಿದರು.
ಕನ್ನಡ ವಿಶ್ವವಿದ್ಯಾನಿಲಯದ ಸಂಗೀತ ಮತ್ತು ನೃತ್ಯ ವಿಭಾಗದ ಪ್ರಾಧ್ಯಾಪಕರಾದ ತಿಮ್ಮಣ್ಣ ಭೀಮರಾಯ ಮಾನ್ಪಡೆ ಮಾತನಾಡಿ ವೈವಿಧ್ಯಮಯ ಬದುಕಿನ ಮೇಲೆ ಆಧುನಿಕತೆ ಪ್ರಭಾವ ಬೀರಿದೆ ಕಲೆ ಸಾಹಿತ್ಯ ಸಂಗೀತ ಜಾನಪದವನ್ನು ಆಧುನಿಕತೆಗೆ ತಕ್ಕಂತೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂಗೀತ ಮತ್ತು ನೃತ್ಯ ವಿಭಾಗದ ಪ್ರಾಧ್ಯಾಪಕರಾದ ಡಾಕ್ಟರ್ ಎಚ್ಆರ್ ತೇಜಸ್ವಿಯವರ ಮಾತನಾಡಿ ಎಲ್ಲಾ ಕಲೆಗೆ ತಾಯಿ ಬೇರೆ ನಂತಿರುವ ಜನಪದ ಕಲೆಯನ್ನು ಉಳಿಸಿಕೊಂಡಾಗ ಮಾತ್ರ ಕಲಾವಿದರ ಮತ್ತು ಪರಂಪರೆ ಉಳಿಯುತ್ತದೆ. ಜನಪದ ಕಲೆಯಲ್ಲಿ ಬದುಕಿನ ಸತ್ವ, ತತ್ವ ಅಡಗಿದೆ. ಹಾಗಾಗಿ ಜಾನಪದ ಕಲೆಗೆ ಹೊಸರೂಪ ಕೊಡಬೇಕಾಗಿದೆ ವಾದ್ಯ ವೇಷಗಳ ಆಕರ್ಷಣೀಯ ವಾಗಬೇಕು. ಹಳ್ಳಿಗಾಡಿನಿಂದ ಸಹಜವಾಗಿ ಬಂದಿರುವ ಜನಪದ ಕಲೆ ಅದ್ಭುತವಾದದ್ದು.
ಪ್ರಸ್ತಾವಿಕವಾಗಿ ಸಾಹಿತಿ ಕಲಾವಿದರ ಮಾಶಾಸನ ಮಂಜೂರಾತಿ ಸಮಿತಿ ಸದಸ್ಯ ಮುರಾರ್ಜಿ ಮಾತನಾಡಿ ಕಲಾವಿದರು ಕಲೆ ಪ್ರದರ್ಶನದ ಜೊತೆಗೆ ಕಲೆ ಪ್ರದರ್ಶನ ಮಾಡಿರುವ ದಾಖಲೆಗಳು ಸಂಗ್ರಹಿಸಿಟ್ಟು ಕೊಂಡಿರಬೇಕು. ಕಲಾವಿದರು ಯಾವುದೇ ಪ್ರಕಾರದಲ್ಲಿ ಕಲಾಸೇವೆ ಮಾಡಿದ್ದರೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡು 58 ವರ್ಷ ಮೇಲಿದ್ದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಶಾಸನಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಾಹಿತಿಗಳು ವಿದ್ವಾಂಸರಾದ ಡಾ. ವೃಷಭೇಂದ್ರ ಚಾರ್. ಹಿರಿಯ ಸಾಹಿತಿಗಳು ಯು ಜಗನ್ನಾಥ್. ಮುಖಂಡರಾದ ಕುಲುಮೆ ಹಟ್ಟಿ ವೆಂಕಟೇಶ್. ಅಮಲಾಪುರದ ಅಂಜಿನಪ್ಪ. ವೀರೇಶ್ ಕಿಟ್ಟಪ್ಪ ನವರ್. ಡಿಎಂ ಈಶ್ವರಪ್ಪ ಸಿದ್ದಾಪುರ. ಗ್ರಾಮ ಪಂಚಾಯಿತಿ ಸದಸ್ಯ ಹೊನ್ನೂರಪ್ಪ. ವಸತಿ ತಿಪ್ಪೇಸ್ವಾಮಿ. ಗ್ರಾಮ ಪಂಚಾಯತಿ ಸದಸ್ಯ ನೇತ್ರಾವತಿ ಮಂಜುನಾಥ್ ಸೇರಿ ಇತರರು ಉಪಸ್ಥಿತರಿದ್ದರು.
ಕಲಾವಿದರಾದ ಸುಗಮ ಸಂಗೀತ. ಜನಪದ ತತ್ವಪದ ವಚನ ಸಂಗೀತ ಗಾಯನ ನಡೆಸಿಕೊಟ್ಟರು. ಗಾಯಕರಾದ ಜಿ ಬೋರಪ್ಪ ಕಾನಹೊಸಹಳ್ಳಿ. ಸಕಲಾಪುರದಹಟಿ ಎಲ್ಲಪ್ಪ. ನಾಗಭೂಷಣ .ತಿಪ್ಪೇಶ್. ಮಲಯಪ್ಪ. ನವೀನ್ .ಸುಮಾ ಜಗಳೂರು. ಕುಮಾರಸ್ವಾಮಿ. ಶ್ರೀಧರ. ತಬಲ ನರಸಿಂಹಮೂರ್ತಿ. ಪ್ಯಾಡ್ ದ್ವಾರಕೀಶ್. ರಾಜು. ಸಂಗೀತ ನಡೆಸಿಕೊಟ್ಟರು. ಎಂ ಕೆ ಹರೀಶ್. ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ತಿಮ್ಮನಹಳ್ಳಿ ನಿಂಗರಾಜು ಸ್ವಾಗತಿಸಿದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend