ದಿನಾಂಕ 30.11.2021 ಇಂದು ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿಯಲ್ಲಿ ನಡೆದ ಮಾನಸಿಕ ಅಶ್ವಸ್ತಾ ಮತ್ತು ಬುದ್ದಿ ಮಾಂದ್ಯ ಮಕ್ಕಳ ಶಿಬಿರ…!!!

Listen to this article

ದಿನಾಂಕ 30.11.2021 ಇಂದು ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿಯಲ್ಲಿ ನಡೆದ ಮಾನಸಿಕ ಅಶ್ವಸ್ತಾ ಮತ್ತು ಬುದ್ದಿ ಮಾಂದ್ಯ ಮಕ್ಕಳ ಶಿಬಿರ……√√√

 

ಮುಖ್ಯವೈದ್ಯಧಿಕಾರಿಗಳದ ಡಾ.ಶಿವಕುಮಾರ್ ಈ ಅವರು ಉಪಸ್ಥಿತಿಯಲ್ಲಿ ಕೋವಿಡ್ 19 3ನೇ ಅಲೆ ಪ್ರರಂಭವಾಗುವ ಮುನ್ಸೂಚನೆಯ ತಿಳುವಳಿಕೆ ನೀಡಿದರು.

ಒಮಿಕ್ರಾನ್: ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ |

ಕೋವಿಡ್‌ 19 ಮೊದಲ ಅಲೆಯ ಆತಂಕ, ಎರಡನೇ ಅಲೆ ಸೃಷ್ಟಿಸಿದ ನರಕಯಾತನೆ ಎಂಥದ್ದು ಎಂದು ನಾವೆಲ್ಲ ಕಂಡು, ಅನುಭವಿಸಿದ್ದೇವೆ. ಆಸ್ಪತ್ರೆಯಲ್ಲಿ ಬೆಡ್‌ ಸಿಗದೇ, ಬದುಕುಳಿಯಲು ಪ್ರಾಣವಾಯುವೂ ಸಿಗದೇ ಉಸಿರು ಚೆಲ್ಲಿದ ಜೀವಗಳನ್ನು ನೆನೆಸಿಕೊಂಡರೆ ಕಣ್ಣುಗಳ ಕಟ್ಟೆಯೊಡೆಯುತ್ತದೆ. ಅಂಥ ಸಾವಿನ ಮೆರವಣಿಗೆ ಮತ್ತೆ ಬೇಡ. ಯಾರೂ ಎಚ್ಚರ ತಪ್ಪುವುದು ಬೇಡ ಎಂದು ರಾಜ್ಯದ ಜನತೆ ಜಾಗೃತಿಯ ಸಂದೇಶ ನೀಡಿದ್ದಾರೆ.

ಒಮಿಕ್ರಾನ್ ವಿಚಾರ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ನಡುವೆಯೇ ಕೊರೋನಾ ಹೊಸ ತಳಿ ಒಮಿಕ್ರಾನ್ 30ಕ್ಕೂ ಹೆಚ್ಚು ರೂಪಾಂತರ ಹೊಂದಿರುವ ವರದಿ ಇದೆ. ಭಾರತವೂ ಸೇರಿ ಜಗತ್ತಿನ ವಿವಿಧ ದೇಶಗಳಲ್ಲಿ ಮಾರಕ ಮಾರಿ ಪುನಾ ಅಬ್ಬರಿಸುತ್ತಿದೆ. ಕೇಂದ್ರ ಸರಕಾರ, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಎಲ್ಲೆಡೆ ಕೆನ್ನಾಲಗೆ ಚಾಚಿರುವ ಕೊರೋನಾ ಹೊಸ ತಳಿಯನ್ನೆದುರಿಸಲು ನಮಗೊಂದಿಷ್ಟು ತಾಳ್ಮೆ ಬೇಕಿದೆ ಎಂದು ಎಚ್ಚರಿಸಿದ್ದಾರೆ.

ಕೊರೋನ ಶಿಷ್ಟಾಚಾರ ಪಾಲಿಸೋಣ. ಮಾಸ್ಕ್, ಸ್ಯಾನಿಟೈಸ್, ದೈಹಿಕ ಅಂತರ ಪಾಲನೆ ಮಹಾಮಾರಿ ನಿಯಂತ್ರಣಕ್ಕಿರುವ ಸರಳಸೂತ್ರಗಳು. ಅಗತ್ಯವಿದ್ದರೆ ಓಡಾಡಿ. ಹೊರಗೆ ಬಂದಾಗ ಮುನ್ನೆಚ್ಚರಿಕೆ ಜತೆಗೆ, ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಯಾವ ಕಾರಣಕ್ಕೂ ಮತ್ತೊಂದು ಸಾವಿನ ಅಲೆಗೆ ಅವಕಾಶ ಕೊಡುವುದು ಬೇಡ. ಇದು ನನ್ನ ವಿನಮ್ರ ಪ್ರಾರ್ಥನೆ ಎಂದು ಅವರು ಹೇಳಿದ್ದಾರೆ.

ಶಿಬಿರದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿಗಳಾದ ಡಾ.ಶಿವಕುಮಾರ್ ಈ.
ಡಾ.ತಿಪ್ಪೇಸ್ವಾಮಿ ಕಿಲು ಮೂಳೆ ತಜ್ಞರು.ಡಾ.ತ್ರಿವೇಣಿ ಕೆ.ಎಮ್.ಕಿವಿ.ಮೂಗು. ಗಂಟಲು.ತಜ್ಞರು.ಡಾ.ಶಂಕರ್ ನಾಯ್ಕ.ಎನ್.ಫಿಜಿಶಿಯನ್. ಹಾಗೂ ಆಸ್ಪತ್ರೆಯ ಅಧಿಕಾರಿಗಳಾದ
ವೆಂಕಟೇಶ್ ಬಾಗಲಾರ್.
ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend