ಮೊಳಕಾಲ್ಮುರು: ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ ಕೃಷಿಯ ಮೊರೆ ಯಶಸ್ಸು ಗಳಿಸುವ ಮೂಲಕ ಮಾದರಿಯಾಗಿದ್ದಾರೆ.!

Listen to this article

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟಿ ಬಸವಲಿಂಗ ಸ್ವಾಮೀಜಿ ಕೃಷಿಯ ಮೊರೆಹೋಗಿ ಯಶಸ್ಸು ಗಳಿಸುವ ಮೂಲಕ ಮಾದರಿಯಾಗಿದ್ದಾರೆ. “ಮಾಡಿದಷ್ಟು ನೀಡು ಭಿಕ್ಷೆ “ಎಂಬ ತತ್ವದಿಂದ, ಕಷ್ಟ ಪಟ್ಟರೆ ಪ್ರತಿಫಲ ಸಿಗುತ್ತದೆ ಎಂಬುದು ಇದೇ ಉದಾರಣೆ .. ಹೌದು.. ಕೋವಿಡ್ ಇರುವ ಕಾರಣದಿಂದ ಮಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ದಾಸೋಹ ಸಾಮಗ್ರಿಗಳೂ ಬರುತ್ತಿಲ್ಲ. ಮಠದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರ ನಿರ್ವಹಣೆಗೆ ನೀಡುತ್ತಿದ್ದ ಅನುದಾನ ಸ್ಥಗಿತ ಮಾಡಿದೆ. ಇದರಿಂದ ಮಠದ ದಾಸೋಹ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಕೃಷಿಗೆ ಕೈ ಹಾಕಿದ್ದಾರೆ ಸ್ವಾಮೀಜಿ. ಚಿತ್ತರಗಿ ವಿಜಯ ಮಹಾಂತೇಶ ಮಠಕ್ಕೆ ಒಳಪಟ್ಟಿರುವ ಸಿದ್ದಯ್ಯನಕೋಟೆ ಶಾಖಾಮಠ ಸಾಮಾನ್ಯ ಪೀಠ, ದಲಿತ ಸೇರಿದ ಬಸವಲಿಂಗ ಜನಾಂಗಕ್ಕೆ ಸ್ವಾಮೀಜಿಯನ್ನು ಇದರ ಪೀಠಾಧಿಪತಿ ಮಾಡಿದ್ದರಿಂದ ಮಠ ದೇಶದ ಗಮನ ಸೆಳೆದಿತ್ತು. ಈ ವಿಷಯದಿಂದಾಗಿ ಮರ ದೊಡ್ಡಮಟ್ಟದಲ್ಲಿ ವಿವಾದಕ್ಕೀಡಾಗಿತ್ತು, ಆದರೆ, ಸ್ವಾಮೀಜಿಯ ದುಶ್ಚಟ ಬಿಡಿಸುವ ಪಾದಯಾತ್ರ, ಶೈಕ್ಷಣಿಕ ಅಭಿವೃದ್ಧಿ, ಮೂಡನಂಬಿಕೆ ವಿರುದ್ಧ ಹೋರಾಟ ಮಾಡಿದ್ದರು. ಸರಳತೆ ಜನರನ್ನು ಮಠದತ್ತ ಸೆಳೆಯುವಂತೆ ಮಾಡಿದೆ. ಈಗ ಸ್ವಾಮೀಜಿಯವರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಎಲ್ಲರ ಗಮನ ಸೆಳೆಯುತ್ತದೆ. ಮಠದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಕೃಷಿಗೆ ಕೈ ಹಾಕಿದೆ’ ಎಂದು ಬಸವಲಿಂಗೆ
ಸ್ವಾಮೀಜಿಯವರು ಕೃಷಿ ಕಾಯಕ ಮಾಡುತ್ತಿರುವ ಬಗ್ಗೆ ವಿವರಿಸಿದರು. ಮೂರು ಕೊಳವೆಬಾವಿ ನೀರು ಬಳಸಿಕೊಂಡು 4 ಎಕರೆಯಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಈಗ ಭತ್ತ ಕಟಾವು ಮಾಡಲಾಗುತ್ತಿದೆ. ಉತ್ತಮ
ಫಸಲು ಬಂದಿದೆ. ಪಕ್ಕದಲ್ಲಿ 2.5 ಎಕರೆಯಲ್ಲಿ ರೇಷ್ಮೆ ಹಾಕಿದ್ದೇವೆ. ಇದಕ್ಕೂ ಮುನ್ನ ರಾಗಿ ಹಾಕಿದ್ದವು. ಬರುವ ಫಸಲನ್ನು ಮಠದ ದಾಸೋಹಕ್ಕೆ ಬಳಕೆ ಮಾಡಲಾಗುತ್ತಿದೆ. ಕೊರೊನಾ ಬಂದ ನಂತರ ಮರವು ಆರ್ಥಿಕವಾಗಿ ತೋಂದರೆಗೆ ಸಿಲುಕಿದೆ. ಸ್ವಲ್ಪಮಟ್ಟಿಗೆ ಕೃಷಿ ಕೈ ಹಿಡಿದಿದೆ’ ಎಂದರು ಸ್ವಾಮೀಜಿ. ಜಮೀನನ್ನು ಕೇಣಿಗೆ ಪಡೆದಿದ್ದು, ವಾರ್ಷಿಕ ಎರಡು ಬೆಳೆ ಸೇರಿ 300ಕ್ಕೂ ಹೆಚ್ಚು ಚೀಲ ಭತ್ತ ಬೆಳೆಯಲಾಗಿದೆ. ಕೃಷಿ ದೇಶದ ಉಸಿರಾಗಿದ್ದು ರೈತರು ಯಾವುದಕ್ಕೂ ಎದೆಗುಂದದ ಕೃಷಿ ಮುಂದುವರಿಸಬೇಕು ಎಂದು ಸಲಹೆಗಳನ್ನು ನೀಡಿದರು.

ವರದಿ.ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend