ಮೊಳಕಾಲ್ಮುರು: ತಳವಾರಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರು ಜ್ವರ ಉಲ್ಪಣ: ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳು ಭೇಟಿ.!!

Listen to this article

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಹಿರೇಕೆರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಳವಾರಹಳ್ಳಿ ಗ್ರಾಮದಲ್ಲಿ ಹಲವಾರು ದಿನಗಳಿಂದ ಸಾರ್ವಜನಿಕರು ರೈತರು ಜ್ವರ, ಸೀತ, ಕೆಮ್ಮು, ಮೈ ಕೈ ನೋವಿನಿಂದ ಬಳಲುತ್ತಿರುವ ಬಗ್ಗೆ ವರದಿಗಳು ಬಂದ ಮೇರೆಗೆ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಮೊಳಕಾಲ್ಮೂರು ಇವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ಮಾಡಲಾಗಿ ಗ್ರಾಮದಲ್ಲಿ ಕಳೆದ 10-15 ದಿನಗಳಿಂದ ಜ್ವರ ಬಂದಿದ್ದು, ಈ ಸಂಬಂಧ ಈಗಾಗಲೇ ದಿನಾಂಕ:03.05.2021 ರಿಂದ 19.05.2021ರ ವರೆಗೆ ಆರೋಗ್ಯ ತಂಡವು ಸಮೀಕ್ಷೆ ಮಾಡಿದ್ದು, ಕೋವಿಡ್-19 ಪರೀಕ್ಷೆ 59, ರಕ್ತ ಲೇಪನ 11, ಐ.ಎಲ್.ಐ/ಸ್ಯಾರಿ 26 ಪರೀಕ್ಷೆ ಮಾಡಿದ್ದು, ಇವುಗಳಲ್ಲಿ ದಿನಾಂಕ 20.05.2021 ರಂದು 06 ಕೋವಿಡ್-19 ಪಾಸಿಟಿವ್ ದಿನಾಂಕ:21.05.2021 ರಂದು 02 ಚಿಕನ್ ಗುನ್ಯಾ ದೃಢಪಟ್ಟಿರುತ್ತದೆ. ಕರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಸಾರ್ವಜನಿಕರು ತಮ್ಮ ತೋಟದ ಮನೆ ಮತ್ತು ಹೊಲದ ಮನೆಗಳಲ್ಲಿ ಪ್ರತ್ಯೇಕವಾಗಿದ್ದು, ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಗಳಿಗೆ ಬರಲು ನಿರಾಕರಿಸಿರುತ್ತಾರೆ. ಹಿರೇಕೆರೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಳವಾರಹಳ್ಳಿ
ಗ್ರಾಮದಲ್ಲಿ ಮೆಡಿಸಿನ್ ಕಿಟ್‌ಗಳನ್ನು ವಿತರಿಸಲಾಗಿರುತ್ತದೆ. ಸಾರ್ವಜನಿಕರು ಯಾವುದೇ ಹೋಂ ಐಸೋಲೇಷನ್ ಆಗದೇ ಮಳಕಾಲೂರು ತಾಲ್ಲೂಕಿನಲ್ಲಿ ಸ್ಥಾಪಿಸಿರುವ ಕೋವಿಡ್‌ ಸೆಂಟರ್‌ಗಳಿಗೆ ಹಾಜರಾಗಿ ಚಿಕಿತ್ಸೆ ಪಡೆಯಲು ಹಾಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಬೇಕಾಗಿ ಯಾವುದೇ ಕಾರಣಕ್ಕೂ ಭಯ ಭೀತರಾಗದೇ ಸೂಕ್ತ ಚಿಕಿತ್ಸೆ ಪಡೆಯಲು ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮದ ಜನರು. ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಬೇಕಾಗಿ ಈ ಮೂಲಕ ಕೋರಿದೆ…

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend